ಹಾಸನ, ಮಾರ್ಚ್ 21: ತಾಳಿ ಕಟ್ಟುವ ವೇಳೆ ಪ್ರಿಯಕರನ (lover) ಪ್ರವೇಶದಿಂದ ಮದುವೆ ಮುರಿದು ಬಿದ್ದಿರುವಂತಹ ಘಟನೆ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ. ಇಂದು ಬೇಲೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ಬೇಲೂರಿನ ಯುವತಿ ಹಾಗೂ ಶಿವಮೊಗ್ಗ ಮೂಲದ ಯುವಕನೊಂದಿಗೆ ಮದುವೆ ನಡೆಯಬೇಕಿತ್ತು. ಆದರೆ ತಾಳಿ ಕಟ್ಟುವ ವೇಳೆ ಕಲ್ಯಾಣಮಂಟಪಕ್ಕೆ ಬಂದ ನವೀನ್ ಎಂಬಾತನಿಂದ ಮದುವೆಗೆ ಅಡ್ಡಿ ಆರೋಪ ಮಾಡಲಾಗಿದೆ. ತಾಳಿ ಕಿತ್ತುಕೊಂಡು ತೇಜಸ್ವಿನಿ ನನ್ನನ್ನು ಪ್ರೀತಿಸುತ್ತಿದ್ದಾಳೆ. ನನ್ನ ಜೊತೆ ಮದುವೆ ಮಾಡಿ ಎಂದು ಪಟ್ಟುಹಿಡಿದಿದ್ದಾನೆ. ಹೀಗಾಗಿ ಕಲ್ಯಾಣಮಂಟಪದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಮಧ್ಯಪ್ರವೇಶಿಸಿದ ಬೇಲೂರು ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತೇಜಸ್ವಿನಿ ತನ್ನನ್ನ ಪ್ರೀತಿಸುತ್ತಿದ್ದಳು. ತನಗೆ ವಿಚಾರ ಮುಚ್ಚಿಟ್ಟು ಮದುವೆ ಮಾಡಿಕೊಳ್ಳಲಾಗುತ್ತಿದೆ ಎಂದು ಯುವಕ ಆರೋಪಿಸಿದ್ದಾನೆ. ಇತ್ತ ಪ್ರೀತಿ ವಿಚಾರ ತಿಳಿದ ಮದುಮಗ ಮದುವೆ ಬೇಡ ಎಂದು ಹೊರಟು ಹೋಗಿದ್ದಾನೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆತ ಕೇರಳದವನು. ಪ್ರೀತಿಸಿದ್ದು ಮೈಸೂರಿನ ಹುಡುಗಿಯನ್ನು. ಆದರೆ ಮದುವೆಯಾಗಲು ಹೊರಟಿದ್ದು ಮಂಗಳೂರಿನ ಹುಡುಗಿಯನ್ನು. ಇನ್ನೇನು ತಾಳಿ ಕಟ್ಟಬೇಕು ಅನ್ನೊವಷ್ಟರಲ್ಲಿ ಪ್ರೇಯಸಿಯ ಎಂಟ್ರಿಯಾಗಿತ್ತು. ನಂತರ ಆಗಿದ್ದು ಹೈಡ್ರಾಮ. ಅಕ್ಷಯ್ ಎಂಬ ಕೇರಳದ ಕೋಝಿಕ್ಕೋಡ್ ಮೂಲದ ಯುವಕ ಕಳೆದ ಒಂದೂವರೆ ವರ್ಷದ ಹಿಂದೆ ಶಾಧಿ ಡಾಟ್ ಕಾಮ್ನಲ್ಲಿ ಮೈಸೂರಿನ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ.
ಇದನ್ನೂ ಓದಿ: ಇಂಜಿನಿಯರ್ ಗಂಡನಿಗೆ ಅಂಟಿಕೊಂಡಿತ್ತು ಐಪಿಎಲ್ ಬೆಟ್ಟಿಂಗ್ ಭೂತ: 54 ಲಕ್ಷ ರೂ ಸಾಲ, ನೊಂದ ಹೆಂಡತಿ ನೇಣಿಗೆ ಶರಣು
ಪರಿಚಯ ಆದ ಒಂದೂವರೆ ವರ್ಷದ ನಂತರ ಅಂದ್ರೆ ಡಿಸೆಂಬರ್ 26 ರಂದು ಇದೇ ಯುವಕನ ಮೇಲೆ ಇದೇ ಯುವತಿ ಕೇರಳದ ಕೋಝಿಕ್ಕೋಡ್ನಲ್ಲಿ ಒಂದು ದೂರು ದಾಖಲಿಸಿದ್ದಾಳೆ. ತನ್ನನ್ನು ಪರಿಚಯ ಮಾಡಿಕೊಂಡು ಮದುವೆಯಾಗುತ್ತೇನೆ ಅಂತಾ ನಂಬಿಸಿ ಅತ್ಯಚಾರ ಮಾಡಿದ್ದಾನೆ ಎಂದು ದೂರು ನೀಡಿದ್ದಾಳೆ. ಅದರ ಜೊತೆಗೆ ತನಗೆ ಚಿತ್ರಹಿಂಸೆ ನೀಡಿದ್ದಾನೆ. ಸಿಗರೇಟ್ನಲ್ಲಿ ಮೈಕೈಗೆ ಸುಟ್ಟಿದ್ದಾನೆ ಅಂತಾ ಆರೋಪಿಸಿದ್ದಾಳೆ.
ಇದನ್ನೂ ಓದಿ: ಕುಡಿಯಲು ನೀರು ಕೇಳಿ ಯುವತಿ ಜೊತೆ ಫುಡ್ ಡೆಲಿವರಿ ಬಾಯ್ ದುರ್ವರ್ತನೆ, FIR ದಾಖಲು
ಈ ದೂರು ದಾಖಲಾಗಿದ್ದು, ಆರೋಪಿ ಅಕ್ಷಯ್ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ. ಆದರೆ ಅದನ್ನು ಕೋರ್ಟ್ ವಜಾ ಮಾಡಿತ್ತು. ಈ ನಡುವೆ ಮಂಗಳೂರಿನ ಯುವತಿಯ ಜೊತೆ ಈ ಯುವತಿಗೆ ಮದುವೆ ನಿಶ್ಚಯವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಕೋಟೆಕಾರು ಬಳಿಯ ಬೀರಿ ಎಂಬಲ್ಲಿ ಒಂದು ಖಾಸಗಿ ಹಾಲ್ ನಲ್ಲಿ ವಿವಾಹ ನಡೆಯುತ್ತಿತ್ತು. ಅಲ್ಲಿಗೆ ಮಾಜಿ ಪ್ರೇಯಸಿ ಎಂಟ್ರಿ ಕೊಟ್ಟಿದ್ದಳು. ಉಳ್ಳಾಲ ಪೊಲೀಸರ ಜೊತೆ ಎಂಟ್ರಿ ಕೊಟ್ಟ ಈ ಯುವತಿ ಯುವಕನ್ನು ಹಿಡಿದು ಕೇರಳ ಪೊಲೀಸರಿಗೆ ಕೊಡಿ. ಅವನು ಅತ್ಯಚಾರ ಆರೋಪಿ ಅಂತಾ ಗಲಾಟೆ ಮಾಡಿದ್ದಳು. ಯುವಕನ ಕಡೆಯವರು ಎಷ್ಟೆ ಹೇಳಿದ್ರು ಬಗ್ಗದೆ ಗಲಾಟೆ ಮಾಡಿದ್ಳು. ಆದರೆ ಮದುವೆ ಗಂಡನ್ನು ಹೊರಗೆ ಕಳುಹಿಸಿಲು ಅವರು ಒಪ್ಪಲಿಲ್ಲ. ನಾನು ಇವನನ್ನು ಮದುವೆಯಾಗಲು ಬಂದಿಲ್ಲ. ಈತನನ್ನು ಅರೆಸ್ಟ್ ಮಾಡಿ ನನಗೆ ನ್ಯಾಯ ಕೊಡಿಸಿ ಅಂತಾ ಪಟ್ಟು ಹಿಡಿದಿದ್ದಳು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:28 pm, Thu, 21 March 24