Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ ಜಿಲೆಟಿನ್ ಸ್ಫೋಟ ದುರಂತದ ಮತ್ತೋರ್ವ ಗಾಯಾಳು ಚಿಕಿತ್ಸೆ ಫಲಿಸದೆ ಸಾವು

ಏಪ್ರಿಲ್ 4 ರ ಮಧ್ಯಾಹ್ನ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿಯಲ್ಲಿ ಜಿಲೆಟಿನ್ ಸ್ಫೋಟ ನಡೆದಿತ್ತು. ಘಟನೆ ವೇಳೆ ಸ್ಥಳದಲ್ಲೇ ಸಂಪತ್(27) ಎಂಬ ವ್ಯಕ್ತಿ ಮೃತಪಟ್ಟಿದ್ದರು. ಹಾಗೂ ಇಬ್ಬರು ಗಾಯಗೊಂಡಿದ್ದರು. ಏಪ್ರಿಲ್ 5 ರಂದು ಗಾಯಾಳು ರವಿ ಮೃತಪಟ್ಟಿದ್ದು ಇಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ನಟರಾಜ್ ಕೂಡ ಮೃತಪಟ್ಟಿದ್ದಾರೆ.

ಹಾಸನ ಜಿಲೆಟಿನ್ ಸ್ಫೋಟ ದುರಂತದ ಮತ್ತೋರ್ವ ಗಾಯಾಳು ಚಿಕಿತ್ಸೆ ಫಲಿಸದೆ ಸಾವು
ನಟರಾಜ್
Follow us
ಆಯೇಷಾ ಬಾನು
|

Updated on: Apr 08, 2021 | 10:54 AM

ಹಾಸನ: ಚಾಕೇನಹಳ್ಳಿಯಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಬೆಟ್ಟದಳ್ಳಿ ಗ್ರಾಮದ ನಟರಾಜ್(28) ಮೃತ ದುರ್ದೈವಿ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಏಪ್ರಿಲ್ 4 ರ ಮಧ್ಯಾಹ್ನ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿಯಲ್ಲಿ ಜಿಲೆಟಿನ್ ಸ್ಫೋಟ ನಡೆದಿತ್ತು. ಘಟನೆ ವೇಳೆ ಸ್ಥಳದಲ್ಲೇ ಸಂಪತ್(27) ಎಂಬ ವ್ಯಕ್ತಿ ಮೃತಪಟ್ಟಿದ್ದರು. ಹಾಗೂ ಇಬ್ಬರು ಗಾಯಗೊಂಡಿದ್ದರು. ಏಪ್ರಿಲ್ 5 ರಂದು ಗಾಯಾಳು ರವಿ ಮೃತಪಟ್ಟಿದ್ದು ಇಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ನಟರಾಜ್ ಕೂಡ ಮೃತಪಟ್ಟಿದ್ದಾರೆ.

ಕಲ್ಲು ಗಣಿಗಾರಿಕೆಗಾಗಿ ಸ್ಫೋಟಕವನ್ನು ಸಂಗ್ರಹಿಸಿದ್ದರು.  ಸ್ಫೋಟಕ ವಿತರಣೆ ವೇಳೆ ಸ್ಪೋಟವಾಗಿದ್ದು, ಸ್ಪೋಟದ ತೀವ್ರತೆಗೆ ಚಾಕೇನಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಈ ಪ್ರಕರಣ ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಸ್ಫೋಟ ನಡೆದ ಸ್ಥಳಕ್ಕೆ ದಕ್ಷಿಣ ವಲಯದ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಭೇಟಿ ನೀಡಿ, ಪರಿಶೀಲನೆ ಮಾಡಿದ್ದರು. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿ ಸ್ಫೋಟ ಸಂಭವಿಸಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದ ಐಜಿಪಿ ಪವಾರ್​​ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.

ಇದನ್ನೂ ಓದಿ: ಹಾಸನ ಜಿಲೆಟಿನ್ ಸ್ಫೋಟ ದುರಂತದ ಗಾಯಾಳು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ

ಹಾಸನ: ಸ್ಫೋಟಕ ಸಂಗ್ರಹಿಸಿದ್ದ ಗೋದಾಮಿನಲ್ಲಿ ಸ್ಪೋಟ, ಓರ್ವ ಸಾವು

(Hassan Gelatin Blast Case Another Injured Person Died)