Crime News: ನ್ಯಾಯಾಲಯದ ಆವರಣದಲ್ಲೇ ಹೊಂಚುಹಾಕಿ ಪತ್ನಿಯ ಕತ್ತು ಕೊಯ್ದ ಪತಿ
ನ್ಯಾಯಾಲಯದ ಆವರಣದಲ್ಲೇ ಹೊಂಚುಹಾಕಿ ಕುಳಿತಿದ್ದ ಪಾಪಿ ಪತಿಮಹಾಶಯನೊಬ್ಬ ತನ್ನ ಪತ್ನಿಯ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ ಘಟನೆಯೊಂದು ಹಾಸನ ಜಿಲ್ಲೆಯಲ್ಲಿ ನಡೆದಿದೆ
ಹಾಸನ: ನ್ಯಾಯಾಲಯದ ಆವರಣದಲ್ಲೇ ಹೊಂಚುಹಾಕಿ ಕುಳಿತಿದ್ದ ಪಾಪಿ ಪತಿಮಹಾಶಯನೊಬ್ಬ ತನ್ನ ಪತ್ನಿಯ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ತಟ್ಟೆಕೆರೆ ಗ್ರಾಮದ ನಿವಾಸಿ ಚೈತ್ರಾ ಜೀವನಾಂಶ ಕೋರಿ ಹೊಳೆನರಸೀಪುರದ ಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ವಿಚಾರಣೆಗೆ ಹಾಜರಾಗುವ ವೇಳೆ ಚೈತ್ರಾ ಪತಿ ಶಿವಕುಮಾರ್ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಲು ಯತ್ನಿಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಚೈತಾಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಹೊಳೆನರಸೀಪುರ ತಾಲ್ಲೂಕಿನ ತಟ್ಟೆಕೆರೆ ಗ್ರಾಮದ ಚೈತ್ರ ಮತ್ತು ಶಿವಕುಮಾರ್ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿದೆ. ಈ ಹಿನ್ನೆಲೆ ಪತಿಯ ವಿರುದ್ಧ ಚೈತ್ರಾ ಜೀವನಾಂಶ ಕೋರಿ ಹೊಳೆನರಸೀಪುರ ಟೌನ್ ಠಾಣೆ ಪೊಲೀಸ್ ವ್ಯಾಪ್ತಿಯಲ್ಲಿ ಇರುವ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತನ್ನ ವಿರುದ್ಧವೇ ಕೋರ್ಟ್ಗೆ ಅರ್ಜಿ ಸಲ್ಲಿಸದ್ದಕ್ಕೆ ಶಿವಕುಮಾರ್ ಪತ್ನಿಯ ವಿರುದ್ಧ ಕೋಪಗೊಂಡಿದ್ದನು. ಇದನ್ನು ಲೆಕ್ಕಿಸದೆ ಚೈತ್ರಾ ನ್ಯಾಯಾಲಯಕ್ಕೆ ಹೋಗಿದ್ದಾಳೆ. ಈ ವೇಳೆ ಶಿವಕುಮಾರ್ ಆಕೆಯ ಹತ್ಯೆಗೆ ಆವರಣದಲ್ಲೇ ಹೊಂಚುಹಾಕಿ ಕುಳಿತಿದ್ದನು.
ಕೋರ್ಟ್ ಆವರಣದಲ್ಲಿದ್ದ ಶೌಚಾಲಯಕ್ಕೆ ತೆರಳುತ್ತಿದ್ದ ಚೈತ್ರಾಳನ್ನು ಶಿವಕುಮಾರ್ ಅಡ್ಡಗಟ್ಟಿ ಅಮಾನುಷವಾಗಿ ಕತ್ತನ್ನು ಕೊಯ್ದಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಚೈತ್ರಾಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ ಕೊಲೆ ಶಂಕೆ
ತುಮಕೂರು: ವ್ಯಕ್ತಿಯೋರ್ವನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತ್ನಿಯಿಂದಲೇ ಈ ಕೃತ್ಯ ನಡೆದಿರುವ ಆರೋಪ ಕೇಳಿಬಂದಿದೆ. ಶಿರಾದ ಲಾಡುಪುರದ ನಿವಾಸಿ ಶಿವು (32) ಎಂಬವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನು ನೋಡಿದ ಶಿವು ಕುಟುಂಬಸ್ಥರು ಶಿವು ಪತ್ನಿ ದಿವ್ಯಾ ಹಾಗೂ ಅವರ ಕುಟುಂಬ ವಿರುದ್ಧ ಆರೋಪ ಮಾಡಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆ ಶಿವು ಮತ್ತು ದಿವ್ಯಾ ಮದುವೆಯಾಗಿದ್ದರು. ಆದರೆ ದಿವ್ಯಾಳಿಗೆ ಹಲವರ ಜೊತೆ ಅಕ್ರಮ ಸಂಬಂದ ಹೊಂದಿರುವ ಮದುವೆಯ ನಂತರದ ದಿನಗಳಿಂದ ತಿಳಿದುಬಂದಿದೆ. ಅದರಂತೆ ದಿವ್ಯಾಳ ಮೊಬೈಲ್ ಅನ್ನು ಕಸಿದುಕೊಂಡು ಪರಿಶೀಲನೆ ನಡೆಸಿದಾಗ ಕೆಲವೊಂದು ವಿಡಿಯೋಗಳು ಪತ್ತೆಯಾಗಿತ್ತು. ಈ ಘಟನೆಯ ನಂತರ ಶಿವು ಮಾನಸಿಕವಾಗಿ ಕುಗ್ಗಿದ್ದನು. ಅಲ್ಲದೆ ತನ್ನ ತಾಯಿಯ ಬಳಿ ನೋವು ತೋಡಿಕೊಂಡಿದ್ದನು. ಆದರೆ, ಕಳೆದ ಭಾನುವಾರ ಶಿರಾದ ಲಾಡುಪುರಕ್ಕೆ ಹೋಗಿದ್ದ ಶಿವು ಇದೀಗ ಶವವಾಗಿ ಪತ್ತೆಯಾಗಿದೆ. ಶಿವು ಬಳಿಯಿದ್ದ ಮೊಬೈಲ್ ಮೇಮೋರಿ ಕಸಿದುಕೊಂಡು ಹೊಡೆದು ನೇಣು ಹಾಕಿರುವುದಾಗಿ ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಮಾದಕ ರೀಲ್ಸ್ ಮಾಡುತ್ತಿದ್ದ ದಿವ್ಯಾ
ದಿವ್ಯಾಳಿಗೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡುವ ಹವ್ಯಾಸವೂ ಇತ್ತು. ಅಷ್ಟಕ್ಕೂ ಆಕೆ ಮಾದಕವಾಗಿ ರೀಲ್ಸ್ಗಳನ್ನು ಮಾಡುತ್ತಿದ್ದಳು. ಮದುವೆಯಾದ ದಿನದಿಂದಲೂ ಆಕೆ ಹಲವರ ಜೊತೆ ಸಂಬಂಧ ಇತ್ತು ಎನ್ನಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:43 pm, Sat, 13 August 22