ಕ್ಷಣಮಾತ್ರದಲ್ಲಿ ಮಾಯವಾಗತ್ತೆ ನಿಮ್ಮ ಬೈಕ್​; ದುಬಾರಿ ವಾಹನಗಳೇ ಈತನ ಟಾರ್ಗೆಟ್​

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 25, 2020 | 3:17 PM

ಅರಸೀಕೆರೆ ಪಟ್ಟಣದಲ್ಲಿ ಕಳುವಾದ ಬೈಕ್ ಪ್ರಕರಣ ಬೆನ್ನುಹತ್ತಿ ಹೊರಟ ಪೊಲೀಸರು ಒಟ್ಟು 14 ಬೈಕ್ ಕಳ್ಳತನ ಪ್ರಕರಣಗಳನ್ನು ಬಯಲಿಗೆಳೆದರು.

ಕ್ಷಣಮಾತ್ರದಲ್ಲಿ ಮಾಯವಾಗತ್ತೆ ನಿಮ್ಮ ಬೈಕ್​; ದುಬಾರಿ ವಾಹನಗಳೇ ಈತನ ಟಾರ್ಗೆಟ್​
ಕದಿಯಾಲದ ಬೈಕ್
Follow us on

ಹಾಸನ: ಬೈಕ್​ ಕದಿಯೋದೇ ಈತನ ವೃತ್ತಿ. ರಸ್ತೆ ಬದಿ ನಿಲ್ಲಿಸಿದ್ದ ಬೈಕ್​ ಅನ್ನು ಕ್ಷಣಮಾತ್ರದಲ್ಲಿ ಮಾಯ ಮಾಡುವ ಕಲೆ ಈತನಿಗೆ ಕರಗತವಾಗಿತ್ತು. ಈಗ ಈತ ಪೊಲೀಸರ ಅತಿಥಿಯಾಗಿದ್ದು, ಆತನಿಂದ ಬರೊಬ್ಬರಿ ₹ 18 ಲಕ್ಷ ಮೌಲ್ಯದ ಬೈಕ್ ವಶಕ್ಕೆ ಪಡೆದಿದ್ದಾರೆ.

ಹೆಸರು ಬ್ರೂಸ್ಲಿ. ಅಂದಹಾಗೆ ಈತ ಫೈಟರ್ ಬ್ರೂಸ್ಲಿ ಅಲ್ಲ, ರಂಗ ಅಲಿಯಾಸ್ ಬ್ರೂಸ್ಲಿ. ತನ್ನ ಗೆಳೆಯನ ಜೊತೆಗೆ ಸೇರಿ ಆತ ಟಾರ್ಗೆಟ್ ಮಾಡುತ್ತಿದ್ದು ಬರೇ ದುಬಾರಿ ಬೈಕ್​ಗಳು. ಬುಲೆಟ್ ಎಲ್ಲಿ ಕಾಣುತ್ತವೋ ಅಲ್ಲಿ ಅವನ್ನು ಎಗರಿಸದೆ ಬಿಡುತ್ತಿರಲಿಲ್ಲ. ಎಲ್ಲಿಯೋ ಕದ್ದು ಎಲ್ಲಿಯೋ ಮಾರಿ ಲಕ್ಷ ಲಕ್ಷ ಹಣ ಸಂಪಾದಿಸಿ ಶೋಕಿ ಜೀವನ ನಡೆಸುತ್ತಿದ್ದ.

ಡಿಸೆಂಬರ್ 20ರಂದು ಅರಸೀಕೆರೆ ಪಟ್ಟಣದಲ್ಲಿ ಎರಡು ಬೈಕ್ ಕದ್ದು ರೈಲ್ವೆ ನಿಲ್ದಾಣದ ಬಳಿ ಬೈಕ್ ನಂಬರ್ ಪ್ಲೇಟ್ ಕಿತ್ತು, ಚಾಸಿ ನಂಬರ್ ನಾಶಮಾಡೋ ವೇಳೆ ಪೊಲೀಸರಿಗೆ ಬ್ರೂಸ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ. ಮತ್ತೋರ್ವ ಚೋರ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಗ್ರಾಮದ ಮಂಜ ತಲೆಮರೆಸಿಕೊಂಡಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬರೊಬ್ಬರಿ 18 ಲಕ್ಷ ಮೌಲ್ಯದ 15 ದುಬಾರಿ ಬೆಲೆಯ ಬೈಕ್​ಗಳನ್ನ ವಶಕ್ಕೆ ಪಡೆದಿದ್ದಾರೆ.

ಅರಸೀಕೆರೆ ಪಟ್ಟಣದಲ್ಲಿ ಕಳ್ಳತನವಾದ ಬೈಕ್ ಪ್ರಕರಣ ಬೆನ್ನುಹತ್ತಿ ಹೊರಟ ಪೊಲೀಸರಿಗೆ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಬೈಕ್, ಸೋಲೂರು ಠಾಣೆ ವ್ಯಾಪ್ತಿಯಲ್ಲಿ ಒಂದು ಬೈಕ್, ಬಾಗಲಕುಂಟೆ ವ್ಯಾಪ್ತಿಯಲ್ಲಿ 4, ಪೀಣ್ಯ ವ್ಯಾಪ್ತಿಯಲ್ಲಿ 3, ನೆಲಮಂಗಲ ವ್ಯಾಪ್ತಿಯಲ್ಲಿ ಒಂದು ಹಾಗೂ ಅರಸೀಕೆರೆ ವ್ಯಾಪ್ತಿಯಲ್ಲಿ ಮೂರು ಬೈಕ್ ಕಳ್ಳತನ ಕೇಸ್ ಬಯಲಾಗಿದೆ.

ಬಂಧಿತರಿಂದ, 6 ರಾಯಲ್ ಎನ್​ಫೀಲ್ಡ್, 2 ಬಜಾಜ್ ಡ್ಯೂಕ್ ಕೆಟಿಎಂ ಬೈಕ್, 4 ಬಜಾಜ್ ಪಲ್ಸರ್,1 ಅಪಾಚೆ ಬೈಕ್, 2 ಹೊಂಡಾ ಡಿಯೋ ಬೈಕ್ ಹೀಗೆ ಎಲ್ಲವೂ ದುಬಾರಿ ಬೆಲೆಯ ಬೈಕ್​​ಗಳಲ್ಲೇ ಟಾರ್ಗೆಟ್ ಮಾಡಿ ಕದ್ದು ಲಕ್ಷ ಲಕ್ಷಕ್ಕೆ ಮಾರಾಟ ಮಾಡಿ ಶೋಕಿ ಜೀವನ ನಡೆಸುತ್ತಿದ್ದರು.

ಕತ್ತಲಲ್ಲಿ ಶಾಪಿಂಗ್ ಮಾಲ್‌ಗಳಿಗೆ ನುಗ್ಗಿ ಕಳ್ಳತನ ಮಾಡ್ತಿದ್ದ ಕಳ್ಳರ ಬಂಧನ