AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

39 ಮಂಗಗಳ ಮಾರಣಹೋಮದ ಹಿಂದೆ ಯಾರಿದ್ದರೂ ಬಿಡಬೇಡಿ; ತನಿಖಾಧಿಕಾರಿಗೆ ಹಾಸನ ಜಿಲ್ಲಾಧಿಕಾರಿ ಸೂಚನೆ

Hassan: ಇಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಆರ್. ಗಿರೀಶ್ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ತನಿಖಾಧಿಕಾರಿಗೆ ತಾಕೀತು ಮಾಡಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆಯಬೇಕು, ಕೋತಿಗಳ ಹಾವಳಿ ಇದ್ದಕಡೆ ಖುದ್ದು ಹೋಗಿ ಮಾಹಿತಿ ಪಡೆಯಬೇಕು ಎಂದು ಸೂಚನೆ ನೀಡಿದ್ದಾರೆ.

39 ಮಂಗಗಳ ಮಾರಣಹೋಮದ ಹಿಂದೆ ಯಾರಿದ್ದರೂ ಬಿಡಬೇಡಿ; ತನಿಖಾಧಿಕಾರಿಗೆ ಹಾಸನ ಜಿಲ್ಲಾಧಿಕಾರಿ ಸೂಚನೆ
ಮೂಕ ಪ್ರಾಣಿಗಳ ಮಾರಣ ಹೋಮ
TV9 Web
| Updated By: guruganesh bhat|

Updated on:Jul 31, 2021 | 5:19 PM

Share

ಹಾಸನ: ಜಿಲ್ಲೆಯಲ್ಲಿ ಮಂಗಗಳ ಮಾರಣಹೋಮ ಪ್ರಕರಣದಲ್ಲಿ ಎಂತಹ ಪ್ರಭಾವಿಗಳಿದ್ದರೂ ಬಿಡಬೇಡಿ,ಶೀಘ್ರವಾಗಿ ಸಮಗ್ರ ತನಿಖೆ ಮಾಡಿ ಕ್ರಮ ಕೈಗೊಳ್ಳಿ ಎಂದು ತನಿಖಾಧಿಕಾರಿ ಎಸ್‌.ಐ ಗೆ ಹಾಸನ (Hassan) ಜಿಲ್ಲಾಧಿಕಾರಿ ಖಡಕ್ ಸೂಚನೆ ನೀಡಿದ್ದಾರೆ. ಎಲ್ಲಿ ಹೇಗೆ ಮತ್ತು ಯಾರು ಮಂಗಗಳ ಹತ್ಯೆ ಮಾಡಿರಬಹುದು ಎಂಬುದನ್ನು ಬೇಗನೆ ಪತ್ತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತನಿಖಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ. 39 ಕೋತಿಗಳ ಮಾರಣಹೋಮ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕರ್ನಾಟಕ ಹೈಕೋರ್ಟ್(Karnataka High Court) , ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಆರ್. ಗಿರೀಶ್ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ತನಿಖಾಧಿಕಾರಿಗೆ ತಾಕೀತು ಮಾಡಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆಯಬೇಕು, ಕೋತಿಗಳ ಹಾವಳಿ ಇದ್ದಕಡೆ ಖುದ್ದು ಹೋಗಿ ಮಾಹಿತಿ ಪಡೆಯಬೇಕು ಎಂದು ಸೂಚನೆ ನೀಡಿರುವ ಅವರು, ಘಟನೆ ಹಿಂದೆ ಯಾರೇ ಇಧ್ದರೂ ಬಿಡಕೂಡದು ಎಂದು ಸೂಚಿಸಿದ್ದಾರೆ. ಜತೆಗೆ ಮಂಗಗಳ ಮಾರಣಹೋಮ ಅಮಾನವೀಯ ಘಟನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಎಸ್​ಪಿ, ಆರ್​ಎಫ್ಒ ಅವರನ್ನು ಪ್ರತಿವಾದಿಯಾಗಿಸಲು ಸೂಚನೆ ನೀಡಲಾಗಿದೆ. ಕಾಡಿನ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಮಂಗಗಳನ್ನು ಬರ್ಬರವಾಗಿ ಹತ್ಯೆಗೈದಿರುವುದು ಆಘಾತಕಾರಿ. ಇಲ್ಲಿ ಪ್ರಾಣಿಗಳ ದೌರ್ಜನ್ಯ ತಡೆ ಕಾಯ್ದೆ ಸ್ಪಷ್ಟ ಉಲ್ಲಂಘನೆ ಆಗಿದೆ. ಮಂಗಗಳ ಹಾವಳಿಯನ್ನೂ ಘನತೆಯಿಂದ ನಿಯಂತ್ರಿಸಬೇಕು ಎಂದು ಕೋರ್ಟ್ ಹೇಳಿದೆ.

ಅಷ್ಟೇ ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಆಗಸ್ಟ್ 4ರ ಒಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಒಕಾ, ನ್ಯಾಯಮೂರ್ತಿ ಸಂಜಯ್ ಗೌಡರವರ ಪೀಠ ಆದೇಶ ಹೊರಡಿಸಿದೆ.

ಕನಿಷ್ಠ ವಿವೇಚನೆಯನ್ನೂ ಮರೆತು ಮೂಕ ಜೀವಿಗಳನ್ನು ಜನರು ಕೊಂದಿದ್ದರು, ಕ್ರೂರವಾಗಿ ವರ್ತಿಸಿದ್ದರು. 30ಕ್ಕೂ ಹೆಚ್ಚು ಮಂಗಗಳನ್ನು ಕೊಂದು ಚೀಲದಲ್ಲಿ ತುಂಬಿ ರಸ್ತೆಯಲ್ಲಿ ಬಿಸಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೌಡನಹಳ್ಳಿ ಬಳಿ ನಡೆದಿತ್ತು. ಸ್ಥಳೀಯರು ರಾತ್ರಿ 10 ಗಂಟೆ ಸಮಯದಲ್ಲಿ ಓಡಾಡುತ್ತಿರುವಾಗ ರಸ್ತೆಯ ಪಕ್ಕದಲ್ಲಿ ದೊಡ್ಡದಾದ ಚೀಲವೊಂದು ಬಿದ್ದಿರುವುದು ಗಮನಕ್ಕೆ ಬಂದಿತ್ತು. ಪ್ರಾಣಿಗಳ ಕಿರುಚಾಟವೂ ಕೇಳತೊಡಗಿತ್ತು.

ತಡಮಾಡದೆ ಚೀಲದ ಗಂಟು ಬಿಚ್ಚಿ ನೋಡುವಷ್ಟರಲ್ಲಿ 30ಕ್ಕೂ ಹೆಚ್ಚು ಮಂಗಗಳು ಬಲಿಯಾಗಿದ್ದವು. ಇನ್ನು ಕೆಲವು ಗಂಭೀರ ಸ್ಥಿತಿಯಲ್ಲಿದ್ದು ಕಿರುಚಾಡುತ್ತಿದ್ದವು. 15 ಕ್ಕೂ ಹೆಚ್ಚು ಕೋತಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವು. 30 ಮಂಗಗಳ ಹತ್ಯೆ ಮಾಡಲಾಗಿತ್ತು. ರಾತ್ರೋರಾತ್ರಿ ಕಾರಿನಲ್ಲಿ ತುಂಬಿಕೊಂಡು ರಸ್ತೆಯಲ್ಲಿ ಬಿಸಾಡಿ ಹೋಗಿರುವ ಮಾಹಿತಿ ತಿಳಿದು ಬಂದಿತ್ತು.

ಇದನ್ನೂ ಓದಿ: 

ಹಾಸನದಲ್ಲಿ ಮಂಗಗಳ ಮಾರಣಹೋಮ: ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್

ಹಾಸನದಲ್ಲಿ 30ಕ್ಕೂ ಹೆಚ್ಚು ಮಂಗಗಳನ್ನು ರಾತ್ರೋ ರಾತ್ರಿ ಕೊಂದು ಬಿಸಾಡಿ ಹೋಗಿರುವ ದುರುಳರು

(39 monkeys death do not leave anyone behind the incident says Hassan DC to investigating officer)

Published On - 5:14 pm, Sat, 31 July 21

‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್