ಅಕ್ರಮ‌ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಸಿಲುಕಿಸಲು ಖತರ್ನಾಕ್​ ಪ್ಲ್ಯಾನ್; ಥಾರ್ ವಾಹನದಲ್ಲಿ ಗಾಂಜಾ ಇಟ್ಟವರು ಸಿಕ್ಕಿಬಿದ್ದಿದ್ಹೇಗೆ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 12, 2024 | 7:02 PM

ಸಕಲೇಶಪುರ(Sakleshpura)ದಲ್ಲಿ ಅಕ್ರಮ‌ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಸಿಲುಕಿಸಲು ಹೋಗಿ ತಾವೆ ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ. ಪತಿಯನ್ನು ಪೊಲೀಸರಿಗೆ ಸಿಕ್ಕಿಸಲು ಪ್ಲಾನ್ ಮಾಡಿದ್ದ ನಾಲ್ವರು ಆರೋಪಿಗಳು ತಾವೇ ಅಂದರ್​ ಆಗಿದ್ದು, ನಾಲ್ವರನ್ನು ಸಕಲೇಶಪುರ ನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಅಕ್ರಮ‌ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಸಿಲುಕಿಸಲು ಖತರ್ನಾಕ್​ ಪ್ಲ್ಯಾನ್; ಥಾರ್ ವಾಹನದಲ್ಲಿ ಗಾಂಜಾ ಇಟ್ಟವರು ಸಿಕ್ಕಿಬಿದ್ದಿದ್ಹೇಗೆ?
ಅಕ್ರಮ‌ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಸಿಲುಕಿಸಲು ಖತರ್ನಾಕ್​ ಪ್ಲ್ಯಾನ್;
Follow us on

ಹಾಸನ, ಅ.12: ಅಕ್ರಮ‌ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಸಿಲುಕಿಸಲು ಹೋಗಿ ತಾವೆ ಸಿಕ್ಕಿಬಿದ್ದ ಘಟನೆ ಸಕಲೇಶಪುರ(Sakleshpura)ದಲ್ಲಿ ನಡೆದಿದೆ. ಪತಿಯನ್ನು ಪೊಲೀಸರಿಗೆ ಸಿಕ್ಕಿಸಲು ಪ್ಲಾನ್ ಮಾಡಿದ್ದ ನಾಲ್ವರು ಆರೋಪಿಗಳು, ಥಾರ್ ವಾಹನದಲ್ಲಿ ಗಾಂಜಾ ತಂದು ಮಹಿಳೆಯ ಪತಿಗೆ ನೀಡಿ ಪೊಲೀಸರಿಗೆ ಮಾಹಿತಿ ನೀಡಲು ಯತ್ನಿಸಿದ್ದರು. ಥಾರ್ ವಾಹನ ಓಡಾಟದಿಂದ ಅನುಮಾನಗೊಂಡ ಸಕಲೇಶಪುರ ನಗರ ಪೊಲೀಸ್ ಠಾಣೆ ಪೊಲೀಸರು, ವಾಹನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ವಾಹನದಲ್ಲಿ 1 ಕೆಜಿ 360 ಗ್ರಾಂ ಗಾಂಜಾ ಕಂಡುಬಂದಿದ್ದು, ವಶಕ್ಕೆ ಪಡೆಯಲಾಗಿದೆ.

ಆಗಿದ್ದೇನು?

ಇನ್ನು ವಿಚಾರಣೆ ವೇಳೆ ಆರೋಪಿಗಳು ಸತ್ಯಾಂಶ ಬಾಯ್ಬಿಟ್ಟಿದ್ದಾರೆ. ಸಕಲೇಶಪುರದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಮುಕ್ತಾರ್ ಅಲಿ ಎಂಬಾತನ ಪತ್ನಿ ಜೊತೆ ಮೂಡಿಗೆರೆ ಮೂಲದ ಮಹಮದ್ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಈ ಹಿನ್ನಲೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮುಕ್ತಾರ್ ಅಲಿಯನ್ನು ಪೊಲೀಸರು ಬಂಧಿಸುವಂತೆ ಮಾಡಲು ಆರೋಪಿ ಮಹಮದ್ ಹಾಗೂ ಮೂವರ ತಂಡ ಖತರ್ನಾಕ್​ ಪ್ಲಾನ್ ಮಾಡಿದ್ದರು.

ಇದನ್ನೂ ಓದಿ:ಸಹೋದರನ ಪತ್ನಿ ಜೊತೆ ಅಕ್ರಮ‌ ಸಂಬಂಧ: ಕೊನೆಗೆ ತಮ್ಮನಿಂದಲೇ ಹತ್ಯೆಯಾದ ಅಣ್ಣ

ಅದರಂತೆ ಚಿಕ್ಕಮಗಳೂರು ನೋಂದಣಿಯ KA-18-P-9557 ನಂಬರ್‌ನ ಥಾರ್ ವಾಹನದಲ್ಲಿ ಗಾಂಜಾ ತಂದಿದ್ದ ನಾಲ್ವರು, ಮುಕ್ತಾರ್ ಅಲಿಗೆ ಗಾಂಜಾ ಕೊಟ್ಟು ಪೊಲೀಸರಿಗೆ ಮಾಹಿತಿ ನೀಡಲು ತಯಾರಿ ನಡೆಸಿದ್ದರು. ಈ ವೇಳೆ ಅನುಮಾನಗೊಂಡ ಪೊಲೀಸರು ಪರಿಶೀಲನೆ ನಡೆಸಿದಾಗ ಗಾಂಜಾ ಸಿಕ್ಕಿದ್ದು, ಸಧ್ಯ ಮಾಲು ಸಮೇತ ನಾಲ್ವರು ಹಾಗೂ ಥಾರ್‌ ಜೀಪ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ನಾಲ್ವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದವರಾಗಿದ್ದು, ನಾಲ್ವರನ್ನು ಸಕಲೇಶಪುರ ನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ