ರಾಕೆಟ್ ವೇಗದಲ್ಲಿ ಮಿಂಚಿ ಮಾಯವಾಗುವ ಕಾರುಗಳು: ರೋಚಕತೆ ಸೃಷ್ಟಿಸಿದ ಹೊಯ್ಸಳರ ನಾಡಿನ ಮೋಟಾರ್ ಸ್ಪೋರ್ಟ್ಸ್!

ಸಕಲೇಶಪುರದ ಟೀಂ 46 ಎಸ್.ಕೆ.ಪಿ ಸಂಘಟನೆ ಆಯೋಜನೆ ಮಾಡಿದ್ದ ಕಾರ್ ರಾಲಿ, ಸಾರ್ವಜನಿಕರನ್ನು ಹುಚ್ಚೆಬ್ಬಿಸುವಂತೆ ಮಾಡಿತು. ವಿಶಾಲ ಮೈದಾನದಲ್ಲಿ ಸಿದ್ಧಗೊಂಡಿದ್ದ ವಿಶಿಷ್ಟ ಟ್ರ್ಯಾಕ್​ನಲ್ಲಿ ಸವಾರರು ನಡೆಸಿದ ಸರ್ಕಸ್ ಎದೆ ನಡುಗಿಸುವಂತಿತ್ತು.

ರಾಕೆಟ್ ವೇಗದಲ್ಲಿ ಮಿಂಚಿ ಮಾಯವಾಗುವ ಕಾರುಗಳು: ರೋಚಕತೆ ಸೃಷ್ಟಿಸಿದ ಹೊಯ್ಸಳರ ನಾಡಿನ ಮೋಟಾರ್ ಸ್ಪೋರ್ಟ್ಸ್!
ಬಾಳೆಗದ್ದೆ ಸಮೀಪ ಆಯೋಜಿಸಿದ್ದ ಕಾರ್ ರೇಸ್​
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Feb 22, 2021 | 5:43 PM

ಹಾಸನ: ಜಿಲ್ಲೆಯ ಸಕಲೇಶಫುರ ತಾಲೂಕಿನ ಬಾಳೆಗದ್ದೆ ಸಮೀಪ ಆಯೋಜಿಸಿದ್ದ ಕಾರ್ ರೇಸ್​ ರೋಚಕತೆಗೆ ಸಾಕ್ಷಿಯಾದ್ದು, ಆಳೆತ್ತರಕ್ಕೆ ಧೂಳೆಬ್ಬಿಸುತ್ತಾ ಶರವೇಗದಲ್ಲಿ ಗುರಿಯತ್ತ ಸಾಗುವ ಸವಾರರು ಒಂದು ಕಡೆಯಾದರೆ ರಾಕೇಟ್ ವೇಗದಲ್ಲಿ ಮಿಂಚಿ ಮಾಯವಾಗುತ್ತಿರುವ ಕಾರುಗಳು ಇನ್ನೊಂದು ಕಡೆಯಾಗಿ ಪ್ರೇಕ್ಷಕರನ್ನು ಸಂತೋಷಕ್ಕೆ ಗುರಿ ಮಾಡಿತು.

ಸಕಲೇಶಪುರದ ಟೀಂ 46 ಎಸ್.ಕೆ.ಪಿ ಸಂಘಟನೆ ಆಯೋಜನೆ ಮಾಡಿದ್ದ ಕಾರ್ ರಾಲಿ, ಸಾರ್ವಜನಿಕರನ್ನು ಹುಚ್ಚೆಬ್ಬಿಸುವಂತೆ ಮಾಡಿತು. ವಿಶಾಲ ಮೈದಾನದಲ್ಲಿ ಸಿದ್ಧಗೊಂಡಿದ್ದ ವಿಶಿಷ್ಟ ಟ್ರ್ಯಾಕ್​ನಲ್ಲಿ ಸವಾರರು ನಡೆಸಿದ ಸರ್ಕಸ್ ಎದೆ ನಡುಗಿಸುವಂತಿತ್ತು. ಸ್ಟಾರ್ಟ್ ಫ್ಲಾಗ್ ಹಾರಿಸುತ್ತಲೆ ಚಂಗನೆ ನೆಗೆದು ಮಿಂಚಿನಂತೆ ಮುನ್ನುಗ್ಗುವ ಸ್ಪರ್ಧಿಗಳು ರೊಯ್​ ಅಂತ ಸದ್ದು ಮಾಡುತ್ತಾ ಮಿಂಚಿನ ಓಟ ನಡೆಸಿದ್ದರು.

car race

ಜನರ ಗಮನ ಸೇಳೆದ ಕಾರ್ ರೇಸ್

ಇನ್ನು ವಾಹನಗಳು ಚಿಮ್ಮಿಸಿ ಸಾಗುವಾಗ ಧೂಳಿನೋಕುಳಿ ರೇಸ್​ನ ರೋಚಕತೆಯನ್ನು ಸಾರಿ ಸಾರಿ ಹೇಳುತ್ತಿತ್ತು. ಶರವೇಗದಲ್ಲಿ ಮುನ್ನುಗುವ ವೇಳೆ ಕೆಲವು ಕಾರ್​ಗಳು ಪಲ್ಟಿಯಾದರೂ ಅದನ್ನು ಲೆಕ್ಕಿಸದೆ ಸವಾರರು ಮೇಲೆದ್ದು ಮತ್ತೆ ಗುರಿಯತ್ತ ಸಾಗುವುದನ್ನು ನೋಡಿದ ಜನರಲ್ಲಿ ಒಂದು ಕ್ಷಣ ನಡುಕ ಹುಟ್ಟಿಸಿತ್ತು.

car race

ಹೊಯ್ಸಳರ ನಾಡಿನ ಮೋಟರ್ ಸ್ಪೋರ್ಟ್ಸ್

800ಸಿಸಿ, 1000ಸಿಸಿ, 1100 ಸಿಸಿ, ನಾವೀಸ್ ಕ್ಲಾಸ್, ಜಿಪ್ಸಿ ಕ್ಲಾಸ್ ಹೀಗೆ ಐದು ವಿಭಾಗದಲ್ಲಿ ಸ್ಪರ್ಧೆ ನಡೆದಿದ್ದು, ಹಾಸನ, ಚಿಕ್ಕಮಗಳೂರು ಸೇರಿದಂತೆ ಕಾರವಾರ, ಕೊಡಗು, ಮೈಸೂರು, ಬೆಂಗಳೂರುಗಳಿಂದ ಆಗಮಿಸಿದ್ದ 70 ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ಸಾಮರ್ಥ್ಯ ಪ್ರದರ್ಶನದ ಮೂಲಕ ಗೆಲುವಿಗಾಗಿ ಪೈಪೋಟಿ ನಡೆಸಿದರು. 700 ಮೀಟರ್ ಉದ್ದ ಇದ್ದ ಟ್ರ್ಯಾಕ್​ನಲ್ಲಿ ಸ್ಪರ್ಧಿಗಳು ಗೆಲುವಿಗಾಗಿ ನಡೆಸಿದ ಕಸರತ್ತು ನೋಡುಗರೆದೆಯನ್ನ ನಡುಗಿಸುವಂತಿತ್ತು. ಇಷ್ಟೆಲ್ಲಾ ಆದರೂ ಯಾವುದೇ ತೊಂದರೆಯಾಗದಂತೆ ಕಾರ್ ರೇಸ್ ಅನ್ನು ಆಯೋಜಿಸಲಾಗಿತ್ತು.

car race

ಕಾರ್ ರೇಸ್ ನೋಡಿ ಸಂತೋಷಪಟ್ಟ ಪ್ರೇಕ್ಷಕರು

ಒಟ್ಟಿನಲ್ಲಿ ಇಡೀ ಜಗತ್ತನ್ನೇ ಕಾಡಿದ ಕೊರೊನಾ ಭೀತಿಯಿಂದ ಲಾಕ್ ಆಗಿದ್ದ ಜನರು ಸದ್ಯ ಖುಷಿ ಸಂತೋಷ ಸಂಭ್ರಮಗಳೊಂದಿಗೆ ಗುರುತಿಸಿಕೊಂಡಿದ್ದು, ಅದರಲ್ಲೂ ಈ ರೀತಿಯ ಮೋಟಾರ್ ರೇಸ್​ಗಳಂತಹ ಸಾಹಸಮಯ ಸ್ಪರ್ಧೆಗಳನ್ನು ನೋಡಿ ಸಾರ್ವಜನಿಕರು ಆನಂದಿಸುತ್ತಿದ್ದಾರೆ.

car race

ಧೂಳೆಬ್ಬಿಸಿದ ಕಾರ್ ರೇಸ್

ಇದನ್ನೂ ಓದಿ: Credit card Benefits: ಕ್ರೆಡಿಟ್​ ಕಾರ್ಡ್​ನಿಂದ ನಿಮಗೆ ಸಿಗಲಿದೆ ಈ ಐದು ಸೀಕ್ರೆಟ್​ ಲಾಭಗಳು!