ಹಾಸನ ರಣಘಟ್ಟ ನೀರಾವರಿ ಯೋಜನೆಗೆ ಮರು ಜೀವ: ಕೇಂದ್ರ ಸಚಿವರ ಭೇಟಿಯಿಂದ ಚಿಗುರೊಡೆದ ಹೊಸ ಕನಸು

ಕರ್ನಾಟಕವನ್ನು ಆಳಿದ ಪ್ರಮುಖ ರಾಜ ವಂಶಸ್ಥರಾದ ಹೊಯ್ಸಳರ ಕಾಲದ ಮಹತ್ವಾಕಾಂಕ್ಷೆಯ ರಣಘಟ್ಟ ನೀರಾವರಿ ಯೋಜನೆಗೆ ಇದೀಗ ಮರು ಜೀವ ಪಡೆದುಕೊಂಡು ಕಾಮಗಾರಿ ನಡೆಯುತ್ತಿದೆ.

ಹಾಸನ ರಣಘಟ್ಟ ನೀರಾವರಿ ಯೋಜನೆಗೆ ಮರು ಜೀವ: ಕೇಂದ್ರ ಸಚಿವರ ಭೇಟಿಯಿಂದ ಚಿಗುರೊಡೆದ ಹೊಸ ಕನಸು
ರಣಘಟ್ಟ ನೀರಾವರಿ ಯೋಜನೆ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 15, 2022 | 7:26 PM

ಹಾಸನ: ಜಿಲ್ಲೆಯ ಬಯಲು ಸೀಮೆ ಭಾಗದ ಪ್ರಮುಖ ರಣಘಟ್ಟ ನೀರಾವರಿ ಯೋಜನೆ (Irrigation Scheme)ಗೆ, ದಶಕಗಳಿಂದ  ಅನೇಕ ಜನರು ಹೋರಾಟ ಮಾಡಿದ್ದಾರೆ. ಈ ಕುರಿತು ಹೋರಾಟಗಾರರು ಸಿಎಂ ಸೇರಿ ಹಲವಾರು ಸಚಿವರುಗಳನ್ನು ಭೇಟಿ ಮಾಡಿದ್ದಾರೆ. ಕುಡಿಯುವ ನೀರಿನ ಮಹತ್ವದ 128 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ. ಆದರೆ ಇದೀಗ ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಗೆ ಸಚಿವ ಕ್ರಿಷನ್ ಪಾಲ್ ಗುರ್ಜಾರ್ (krishan pal gurjar) ಭೇಟಿ ಹೊಸ ಕನಸು ಚಿಗುರೊಡೆಯುವಂತೆ ಮಾಡಿದೆ. ಕಾಮಗಾರಿ ಬೇಗ ಮುಗಿಸಬೇಕೆಂಬ ಒತ್ತಾಯದ ನಡುವೆ ಹತ್ತಾರು ಕೆರೆಗಳಿಗೆ ಗುರುತ್ವಾಕರ್ಷಣೆ ಬಲದಿಂದ ನೀರು ಹರಿಸುವ ಕಾಮಗಾರಿಗೆ ಮರು ಜೀವಂತ ಬಂದಿದೆ.

ಶತಮಾನಗಳ ಹಳೆ ಯೋಜನೆಗೆ ಕೊನೆಗೂ ಮರು ಜೀವ ಬಂದಿದೆ. ದಶಕಗಳ ನೀರಾವರಿ ಹೋರಾಟಕ್ಕೆ ಗೆಲುವು ಸಿಕ್ಕರೂ ಮುಗಿಯದ ರಣಘಟ್ಟ ನೀರಾವರಿ ಯೋಜನೆ ಕಾಮಗಾರಿ, ಅನುಷ್ಠಾನವು ವಿಳಂಬವಾಗಿದಕ್ಕೆ ಜನರ ಅಸಮಧಾನ ವ್ಯಕ್ತವಾಗಿತ್ತು. ಬೇಗ ಕಾಮಗಾರಿ ಮುಗಿದರೆ ಶೀಘ್ರವೇ ಹರಿದು ಬರಲಿದೆ ಕೆರೆಗಳಿಗೆ ನೀರು. ಬೇಲೂರು ತಾಲ್ಲೂಕಿನ ರಣಘಟ್ಟ ನೀರಾವರಿ ಯೋಜನೆ ಜಾರಿಯಾಗಬೇಕು ಎಂದು ದಶಕಗಳ ಕಾಲ ಜನರು ಹೋರಾಟ ಮಾಡಿದ್ದಾರೆ. ಪುಷ್ಪಗಿರಿ ಮಠದ ಶ್ರೀಗಳು ಕೂಡ ಹೋರಾಟ  ಮಾಡಿ ಕೇಸ್ ಹಾಕಿಸಿಕೊಂಡಿದ್ದರು.

ಇನ್ನು ಬೇಲೂರಿನ ವಿಷ್ಣು ಸಮುದ್ರದಿಂದ ಹೊಯ್ಸಳರ ರಾಜಧಾನಿ ದ್ವಾರಸಮುದ್ರಕ್ಕೆ ನೀರನ್ನು ಹರಿಸುವ ಬಹುದೊಡ್ಡ ಯೋಜನೆ ಇದಾಗಿದೆ. ಆದರೆ ಕೊಚ್ಚಿಹೋದ ಡ್ಯಾಂ ನಿಂದ ಯೋಜನೆ ನೆನಗುದಿಗೆ ಬಿದ್ದಿತ್ತು, ಈ ಯೋಜನೆ ಜಾರಿಯಾದರೆ ಬೇಲೂರು ತಾಲ್ಲೂಕಿನ 12 ಕರೆಗಳು ಸೇರಿ ಚಿಕ್ಕಮಗಳೂರಿನ ಕೆರೆಗಳಿಗೂ ನೀರು ಹರಿದು ಬರುವ ಸಾಧ್ಯತೆಯಿದೆ. ಹಾಗಾಗಿಯೇ ಈ ಭಾಗದ ರೈತರ ಮಹತ್ವಾಕಾಂಕ್ಷೆಯ ಯೋಜನೆ ಜಾರಿ ಆಗಬೇಕು ಅನ್ನೋದು ಜನರ ಹೋರಾಟವಾಗಿತ್ತು.

ಜನರ ಹೋರಾಟದ ಫಲವಾಗಿ 2019ರಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಅಂದಿನ ಸಿಎಂ ಆಗಿದ್ದ ಹೆಚ್​.ಡಿ.ಕುಮಾರಸ್ವಾಮಿ ಈ ಯೋಜನೆಗೆ ಬಜೆಟ್​ನಲ್ಲಿ ನೂರು ಕೋಟಿ ರೂ. ಹಣ ಘೋಷಣೆ ಮಾಡಿದ್ದರು. ನಂತರ ಸಿಎಂ ಹುದ್ದೆಗೇರಿದ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿಯವರ ಈ ಯೋಜನೆಗೆ ಚುರುಕು ನೀಡಿದ್ದಾರೆ. ಬೇಲೂರಿನ ರಣಘಟ್ಟದಿಂದ ಗುರುತ್ವಾಕರ್ಷಣೆ ಬಲದಿಂದ ಕೆರೆಗಳಿಗೆ ನೀರು ಹರಿಸುವ ಯೋಜನೆ ಇದಾಗಿದ್ದು ಕಾಮಗಾರಿಯೂ ಆರಂಭಗೊಂಡಿದೆ. ಜನರ ಒತ್ತಾಯದ ಮೇರೆಗೆ ಇಂದು ಹಾಸನ ಜಿಲ್ಲೆಯ ಭೇಟಿವೇಳೆ ಕೇಂದ್ರ ಸಚಿವರು ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ ವೇಗಕ್ಕೆ ಸೂಚನೆ ನೀಡಿದ್ದಾರೆ.

ರಣಘಟ್ಟ ನೀರಾವರಿ ಯೋಜನೆಯಿಂದ ಸಾವಿರಾರು ಎಕರೆ ಭೂ ಪ್ರದೇಶ ನೀರಾವರಿ ಆಗಲಿದೆ, ಜನ ಜಾನುವಾರುಗಳಿಗೆ ಕುಡಿಯುವ ನೀರು ಸಿಕ್ಕಿ ಅಂತರ್ಜಲ ಮಟ್ಟವೂ ಏರಿಕೆಯಾಗಲಿದೆ. ಹಾಗಾಗಿಯೇ ಈ ಯೋಜನೆ ಅನುಷ್ಠಾನ ಆಗಬೇಕು ಎನ್ನುವ ಕೂಗು ಕೇಳಿ ಬಂದಿತ್ತು,ಇದೀಗ ಸಾಕಷ್ಟು ವಿಘ್ನಗಳ ನಡುವೆ ಯೋಜನೆ ಶುರುವಾಗಿದ್ದು, 8 ಕಿ.ಮೀ ತೆರೆದ ಕಾಲುವೆ 5 ಕಿಲೋಮೀಟರ್ ಸುರಂಗದ ಮೂಲಕ ಸಾಗುತ್ತದೆ.

ಈ ನೀರಾವರಿ ಯೋಜನೆ ಬೇಲೂರು ತಾಲ್ಲೂಕಿನ ಹಳೆಬೀಡಿನಲ್ಲಿ ದ್ವಾರ ಸಮುದ್ರದ ಕೆರೆಗೆ ನೀರು ತುಂಬಿಸಿ ಬಳಿಕ ಚಿಕ್ಕಮಂಗಳೂರು ಜಿಲ್ಲೆಯ ಕೆರೆಗಳಿಗೂ ನೀರು ಹರಿಸುವ ಬಗ್ಗೆ ಚಿಂತನೆ ನಡೆದಿದೆ. ಶತಮಾನಗಳ ಹಿಂದೆ ರಾಜಮಹಾರಾಜರ ಕಾಲದಲ್ಲಿ ಜಾರಿಯಾಗಿದ್ದ ಯೋಜನೆಯಿಂದ ಈ ಭಾಗದ ಜನರು ನೆಮ್ಮದಿಯಿಂದ ನೀರು ಕುಡಿಯುವ ಸ್ಥಿತಿ ಇತ್ತು, ಆದರೆ ಕಾಲಾನಂತರದಲ್ಲಿ ಈ ಯೋಜನೆ ಮೂಲೆಗುಂಪಾಗಿತ್ತು, ಆದರೆ ಇದೀಗ ಮತ್ತೆ ಪುಷ್ಠಿ ಸಿಕ್ಕಿದ್ದು, ಈ ಯೋಜನೆ ಬೇಗ ಮುಗಿಯಬೇಕು. ಒಟ್ಟಿನಲ್ಲಿ ಶತಮಾನಗಳ ಹಿಂದಿನ ಯೋಜನೆಯು ಎಲ್ಲರ ಪ್ರಯತ್ನದ ಫಲವಾಗಿ ಈಗ ಯೋಜನೆ ಕಾರ್ಯಗತವಾಗುತ್ತಿದ್ದು, ಆದಷ್ಟು ಬೇಗ ಕೆಲಸ ಮುಗಿದು ಈ ಮಹತ್ವದ ಯೋಜನೆ ಜನರ ಅನುಕೂಲಕ್ಕೆ ಬರಲಿ ಎನ್ನುವುದು ಎಲ್ಲರ ಆಶಯವಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವರದಿ:ಮಂಜುನಾಥ್.ಕೆ.ಬಿ. ಟಿವಿ9 ಹಾಸನ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​