- Kannada News Karnataka Hassan Dog Show a huge attraction and success in Hassan, Dog Show a huge success in Hassan
Hassan: ಜನರಲ್ಲಿ ಹೆಚ್ಚಾಗ್ತಿದೆ ಶ್ವಾನ ಪ್ರೀತಿ, ಅದಕ್ಕೆ ಹಾಸನದಲ್ಲಿ ನಡೆದ ಈ ಡಾಗ್ ಷೋ ಸಾಕ್ಷಿ! ಫೋಟೊ ಗ್ಯಾಲರಿ
Dog Show: ಅಲ್ಲಿದ್ದ ಎಲ್ಲರ ಮುಖದಲ್ಲಿ ಅದೇನೋ ಖುಷಿ ಕಾಣ್ತಿತ್ತು.. ಮುದ್ದು ಮುದ್ದಾದ ಶ್ವಾನಗಳನ್ನ ಕಂಡು ಪುಳಕಗೊಂಡಿದ್ದರು. ಅಪರೂಪದಲ್ಲಿ ಅಪರೂಪಕ್ಕೆ ಎನ್ನುವಂತೆ ನಡೆಯೋ ಡಾಗ್ ಶೋ ನೋಡೋಕೆ ಸಾವಿರಾರ ಜನರು ಮುಗಿಬಿದ್ದಿದ್ದರು. ಪುಟಾಣಿ ಶ್ವಾನಗಳ ಚಿನ್ನಾಟ, ಕ್ಯೂಟ್ ಕ್ಯೂಟ್ ಡಾಗ್ ಗಳ ಓಡಾಟ.. ಎದೆ ಎತ್ತರಕ್ಕೆ ಬೆಳೆದ ಶ್ವಾನಗಳ ಸೆಳೆತ ಒಂದಲ್ಲಾ ಎರಡಲ್ಲ ನೂರಾರು ದೇಶೀಯ ಹಾಗು ವಿದೇಶಿಯ ತಳಿಗಳನ್ನ ಕಂಡು ಶ್ವಾನ ಪ್ರಿಯರು ಬೆಕ್ಕಸ ಬೆರಗಾದ್ರೆ ತಮ್ಮ ಪ್ರೀತಿಯ ಪುಟ್ ಪುಟಾಣಿ ಶ್ವಾನಗಳನ್ನ ಪ್ರದರ್ಶನ ಮಾಡಿದ ಶ್ವಾನ ಮಾಲೀಕರುಗಳು ಖುಷಿಯ ಅಲೆಯಲ್ಲಿ ತೇಲಿದರು. ಭಾನುವಾರದ ಆಕರ್ಷಣೆಯಂತೆ ನಡೆದ ಡಾಗ್ ಶೋ ಹೇಗಿತ್ತು ಅಂತೀರಾ ಈ ಸ್ಟೊರಿ ನೋಡಿ.
Updated on: Nov 28, 2022 | 1:55 PM

1. ಅಲ್ಲಿದ್ದ ಎಲ್ಲರ ಮುಖದಲ್ಲಿ ಅದೇನೋ ಖುಷಿ ಕಾಣ್ತಿತ್ತು.. ಮುದ್ದು ಮುದ್ದಾದ ಶ್ವಾನಗಳನ್ನ ಕಂಡು ಪುಳಕಗೊಂಡಿದ್ದರು. ಅಪರೂಪದಲ್ಲಿ ಅಪರೂಪಕ್ಕೆ ಎನ್ನುವಂತೆ ನಡೆಯೋ ಡಾಗ್ ಶೋ ನೋಡೋಕೆ ಸಾವಿರಾರ ಜನರು ಮುಗಿಬಿದ್ದಿದ್ದರು. ಪುಟಾಣಿ ಶ್ವಾನಗಳ ಚಿನ್ನಾಟ, ಕ್ಯೂಟ್ ಕ್ಯೂಟ್ ಡಾಗ್ ಗಳ ಓಡಾಟ.. ಎದೆ ಎತ್ತರಕ್ಕೆ ಬೆಳೆದ ಶ್ವಾನಗಳ ಸೆಳೆತ ಒಂದಲ್ಲಾ ಎರಡಲ್ಲ ನೂರಾರು ದೇಶೀಯ ಹಾಗು ವಿದೇಶಿಯ ತಳಿಗಳನ್ನ ಕಂಡು ಶ್ವಾನ ಪ್ರಿಯರು ಬೆಕ್ಕಸ ಬೆರಗಾದ್ರೆ ತಮ್ಮ ಪ್ರೀತಿಯ ಪುಟ್ ಪುಟಾಣಿ ಶ್ವಾನಗಳನ್ನ ಪ್ರದರ್ಶನ ಮಾಡಿದ ಶ್ವಾನ ಮಾಲೀಕರುಗಳು ಖುಷಿಯ ಅಲೆಯಲ್ಲಿ ತೇಲಿದರು. ಭಾನುವಾರದ ಆಕರ್ಷಣೆಯಂತೆ ನಡೆದ ಡಾಗ್ ಶೋ ಹೇಗಿತ್ತು ಅಂತೀರಾ ಈ ಸ್ಟೊರಿ ನೋಡಿ.....

ಶ್ವಾನದ ಮಹತ್ವದ ಬಗ್ಗೆ ಅರಿವು ಮೂಡಿಸೋ ಸಲುವಾಗಿ ಕಳೆದ ಮೂರು ವರ್ಷಗಳಿಂದ ಡಾಗ್ ಶೋ ಆಯೋಜನೆ ಮಾಡುತ್ತಿರೋ ಕೆನೆಲ್ ಕ್ಲಬ್ ಕೋವಿಡ್ ಆತಂಕದ ಬಳಿಕ ಈ ವರ್ಷ ಮೊದಲ ಬಾರಿಗೆ ಡಾಗ್ ಶೋ ಆಯೋಜನೆಮಾಡಿತ್ತು. ಪುಟ್ ಪುಟಾಣಿ ಶ್ವಾನಗಳಿಂದ ಹಿಡಿದು ಬೃಹತ್ತಾದ ದೊಡ್ಡ ದೊಡ್ಡ ಶ್ವಾನಗಳವರೆಗೆ ದೇಶೀಯ ವಿದೇಶೀಯ ತಳಿಯ ಶ್ವಾನಗಳು ಇಲ್ಲಿ ಪ್ರದರ್ಶನಕ್ಕೆ ಬಂದಿದ್ದವು.

7. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಎಲ್ಲಿಯೂ ಡಾಗ್ ಶೋಗಳ ಆಯೋಜನೆ ಇರಲಿಲ್ಲ. ಇದೀಗ ಕೋವಿಡ್ ಆತಂಕ ದೂರವಾಗಿದೆ. ಹಾಗಾಗಿಯೇ ಮತ್ತೆ ಸಾಕು ಪ್ರಾಣಿಗಳ ಹಬ್ಬವೇ ಆರಂಭಗೊಂಡಿದೆ. ಅದ್ರಲ್ಲೂ ಚಾರ್ಲಿ 777 ಸಿನಿಮಾ ಬಿಗ್ ಹಿಟ್ ಆದ ಬಳಿಕ ಶ್ವಾನಗಳ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಗಿದೆ. ಕೇವಲ ಭದ್ರತೆಗಾಗಿ ಶ್ವಾನಗಳನ್ನ ಸಾಕುತ್ತಿದ್ದವರು ಈಗ ಪ್ರೀತಿಗಾಗಿ, ತಮ್ಮ ಇಷ್ಟದಿಂದ ಶ್ವಾನಗಳನ್ನ ಸಾಕುತ್ತಾ ನಾಯಿಗಳು ಕೂಡ ತಮ್ಮ ಮನೆಯ ಸದಸ್ಯ ಎಂಬಂತೆ ಮುದ್ದು ಮಾಡುತ್ತಾ ಪ್ರೀತಿಸುತ್ತಾ ತಮ್ಮ ನೆಚ್ಚಿನ ಶ್ವಾನವನ್ನ ಆರೈಕೆ ಮಾಡ್ತಾರೆ.

5. ಪುಟ್ ಪುಟಾಣಿ ಶ್ವಾನಗಳಿಂದ ಹಿಡಿದು ಬೃಹತ್ತಾದ ದೊಡ್ಡ ದೊಡ್ಡ ಶ್ವಾನಗಳವರೆಗೆ ದೇಶೀಯ ವಿದೇಶೀಯ ತಳಿಯ ಶ್ವಾನಗಳು ಇಲ್ಲಿ ಪ್ರದರ್ಶನಕ್ಕೆ ಬಂದಿದ್ದವು. ಲ್ಯಾಬ್ರಡರ್, ಗೋಲ್ಡನ್ ರಿಟ್ರಿವರ್, ಪಿಟ್ ಬುಲ್, ಪಗ್, ರಾಟ್ ವೀಲರ್, ಜರ್ಮನ್ ಷಫರ್ಡ್, ಸೈಬೀರಿಯನ್ ಹಸ್ಕಿ, ಬುಲ್ಡಾಗ್, ಡಾಬರ್ ಮನ್, ಬೀಗಲ್ ಸೇರಿ 20ಕ್ಕೂ ಹೆಚ್ಚು ತಳಿಯ 380 ಶ್ವಾನಗಳು ಪ್ರದರ್ಶನಗೊಂಡವು

8. ಇಂತಹ ಶೋ ಗಳಿದ್ಧಾಗ ಕರೆತಂದು ನಾಯಿಗಳಿಗೆ ಇತರೆ ನಾಯಿಗಳ ಜೊತೆಗೆ ಬೆರೆಯುವಂತೆ ಮಾಡಿ ತಾವೂ ಎಂಜಾಯ್ ಮಾಡ್ತಾರೆ. ತಮ್ಮ ಶ್ವಾನಗಳ ಜೊತೆಗೆ ಇತರೆ ಶ್ವಾನಗಳನ್ನು ಕಂಡು ಖುಷಿ ಪಡ್ತಾರೆ. ಈ ವರ್ಷ ಹಾಸನದಲ್ಲಿ ನಡೆಯುತ್ತಿರೋ ಡಾಗ್ ಶೋ ನಲ್ಲಿ ಅತಿ ಹೆಚ್ಚು ಶ್ವಾನಗಳು ಭಾಗವಹಿಸಿರೋದು ಜನರಲ್ಲಿ ಶ್ವಾನ ಪ್ರೀತಿ ಹೆಚ್ಚಾಗಿರೋದನ್ನ ತೋರಿಸುತ್ತಿದೆ. ಶೋವನ್ನ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಉದ್ಘಾಟನೆ ಮಾಡಿ ತಾವೂ ಕೂಡ ಶ್ವಾನ ಪ್ರಿಯೆ, ತಮ್ಮ ಮನೆಯಲ್ಲೂ 9 ತಳಿಯ ಶ್ವಾನಗಳಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜಿತ ರೀತಿಯಲ್ಲಿ ಡಾಗ್ ಶೋಗಳು ನಡೆಯಬೇಕು ಅನ್ನೊ ಆಶಯ ವ್ಯಕ್ತಪಡಿಸಿದರು. ಶೋನಲ್ಲಿ ಭಾಗಿಯಾಗಿದ್ದವರು ಇಡೀ ದಿನ ಡಿಫರೆಂಟ್ ಆದ ಕ್ಯೂಟ್ ಕ್ಯೂಟ್ ಶ್ವಾನಗಳ ಜೊತೆಗೆ ಕಲೆತು ಬೆರೆತು ಖುಷಿಯಿಂದ ಎಂಜಾಯ್ ಮಾಡಿದ್ರು.

2. ಮುದ್ದು ಮುದ್ದಾದ ಕಲರ್ ಕಲರ್ ಶ್ವಾನಗಳ ಓಡಾಟ...ಕ್ಯಾಟ್ ವಾಕ್ (ಡಾಗ್ ವಾಕ್)) ಮಾಡುತ್ತಾ ಎಲ್ಲರ ಗಮನ ಸೆಳೆದ ಕ್ಯೂಟ್ ಶ್ವಾನಗಳ ನೋಟ.. ನೂರಾರು ಶ್ವಾನಗಳನ್ನ ಒಂದೇ ಕಡೆ ಕಣ್ತುಂಬಿಕೊಂಡು ಖುಷಿಯಾದ ಶ್ವಾನ ಪ್ರಿಯರು... ಹಾಸನದಲ್ಲಿ ಕಣ್ಮನ ಸೆಳೆದ ಡಾಗ್ ಶೋ ಹೌದು ಹಾಸನದಲ್ಲಿ ಭಾನುವಾರ ಹಾಸನ ಕೆನೆಲ್ ಕ್ಲಬ್ ಆಯೋಜನೆ ಮಾಡಿದ್ದ ಡಾಗ್ ಶೋ ಶ್ವಾನ ಪ್ರಿಯರಿಗೆ ಮಸ್ತ್ ಮನೋ ರಂಜನೆ ನೀಡ್ತು.

3. ಕೋವಿಡ್ ಆತಂಕದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಆಯೋಜನೆಗೊಂಡಿದ್ದ ಡಾಗ್ ಶೋಗೆ ಜನರು ಮುಗಿಬಿದ್ದಿದ್ದರು. ತಮ್ಮ ಪ್ರೀತಿಯ ಶ್ವಾನದ ಜೊತೆಗೆ ಬಂದಿದ್ದ ನುರಾರು ಜನರು ತಮ್ಮ ನೆಚ್ಚಿನ ನಾಯಿಯನ್ನ ಪ್ರದರ್ಶನ ಮಾಡುತ್ತಾ, ಇತರೆ ಶ್ವಾನಗಳನ್ನ ಕಣ್ತುಂಬಿಕೊಳ್ಳುತ್ತಾ ಖುಷಿಯಿಂದ ಎಂಜಾಯ್ ಮಾಡಿದ್ರು.

4. ಶ್ವಾನ ಸಾಕಲು ಇಷ್ಟಪಡೋ ಜನರಿಗೆ ಶ್ವಾನಗಳ ಬಗ್ಗೆ ಶ್ವಾನಗಳ ತಳಿಗಳ ಬಗ್ಗೆ ಜಾಗೃತಿ ಮೂಡಿಸೋದು, ಶ್ವಾನದ ಮಹತ್ವದ ಬಗ್ಗೆ ಅರಿವು ಮೂಡಿಸೋ ಸಲುವಾಗಿ ಕಳೆದ ಮೂರು ವರ್ಷಗಳಿಂದ ಡಾಗ್ ಶೋ ಆಯೋಜನೆ ಮಾಡುತ್ತಿರೋ ಕೆನೆಲ್ ಕ್ಲಬ್ ಕೋವಿಡ್ ಆತಂಕದ ಬಳಿಕ ಈ ವರ್ಷ ಮೊದಲ ಬಾರಿಗೆ ಡಾಗ್ ಶೋ ಆಯೋಜನೆಮಾಡಿತ್ತು.

6. ಶ್ವಾನಗಳ ಅಹಾರ ಕ್ರಮ, ಆರೈಕೆ ರೀತಿ, ಅವುಗಳ ಆಕ್ಟಿವಿಟಿ ಆಧರಿಸಿ ತೀರ್ಪುಗಾರರ ಎದುರು ಆ ಶ್ವಾನಗಳನ್ನ ಪ್ರದರ್ಶನ ಮಾಡಲಾಯ್ತು, ವಿವಿಧ ವಿಭಾಗಗಳಲ್ಲಿ ನಡೆದ ಶೋನಲ್ಲಿ ಮುದ್ದು ಮುದ್ದಾಗಿ ಹೆಜ್ಜೆ ಹಾಕುತ್ತಾ, ಕ್ಯಾಟ್ ವಾಕ್ ಮಾಡುತ್ತಿದ್ದ ಶ್ವಾನಗಳನ್ನ ಕಂಡು ಜನರು ಖುಷಿಯಾದ್ರು.

8. ಇಂತಹ ಶೋ ಗಳಿದ್ಧಾಗ ಕರೆತಂದು ನಾಯಿಗಳಿಗೆ ಇತರೆ ನಾಯಿಗಳ ಜೊತೆಗೆ ಬೆರೆಯುವಂತೆ ಮಾಡಿ ತಾವೂ ಎಂಜಾಯ್ ಮಾಡ್ತಾರೆ. ತಮ್ಮ ಶ್ವಾನಗಳ ಜೊತೆಗೆ ಇತರೆ ಶ್ವಾನಗಳನ್ನು ಕಂಡು ಖುಷಿ ಪಡ್ತಾರೆ. ಈ ವರ್ಷ ಹಾಸನದಲ್ಲಿ ನಡೆಯುತ್ತಿರೋ ಡಾಗ್ ಶೋ ನಲ್ಲಿ ಅತಿ ಹೆಚ್ಚು ಶ್ವಾನಗಳು ಭಾಗವಹಿಸಿರೋದು ಜನರಲ್ಲಿ ಶ್ವಾನ ಪ್ರೀತಿ ಹೆಚ್ಚಾಗಿರೋದನ್ನ ತೋರಿಸುತ್ತಿದೆ. ಶೋವನ್ನ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಉದ್ಘಾಟನೆ ಮಾಡಿ ತಾವೂ ಕೂಡ ಶ್ವಾನ ಪ್ರಿಯೆ, ತಮ್ಮ ಮನೆಯಲ್ಲೂ 9 ತಳಿಯ ಶ್ವಾನಗಳಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜಿತ ರೀತಿಯಲ್ಲಿ ಡಾಗ್ ಶೋಗಳು ನಡೆಯಬೇಕು ಅನ್ನೊ ಆಶಯ ವ್ಯಕ್ತಪಡಿಸಿದರು. ಶೋನಲ್ಲಿ ಭಾಗಿಯಾಗಿದ್ದವರು ಇಡೀ ದಿನ ಡಿಫರೆಂಟ್ ಆದ ಕ್ಯೂಟ್ ಕ್ಯೂಟ್ ಶ್ವಾನಗಳ ಜೊತೆಗೆ ಕಲೆತು ಬೆರೆತು ಖುಷಿಯಿಂದ ಎಂಜಾಯ್ ಮಾಡಿದ್ರು.

9. ಒಟ್ನಲ್ಲಿ ವೀಕೆಂಡ್ ನಲ್ಲಿ ನಡೆದ ವಿಭಿನ್ನ ರೀತಿಯ ಡಾಗ್ ಶೋ ನೋಡಲು ಸಾವಿರಾರು ಜನರು ಮುಗಬಿದ್ದಿದ್ದರು, ತೀರ್ಪುಗಾರರೆದುರು ಪುಟಾಣಿ ಶ್ವಾನಗಳ ಓಡಾಟ, ದೊಡ್ಡ ದೊಡ್ಡ ಡಾಗ್ ಗಳ ಕ್ಯಾಟ್ ವಾಕ್, ಕ್ಯೂಟಾದ ನಾಯಿಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.ಹೇಳಿ ಕೇಳಿ ಭಾನುವಾರವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಜನರು ನೂರಾರು ಬಗೆಯ ಶ್ವಾನಗಳನ್ನ ಕಣ್ತುಂಬಿಕೊಂಡು ಖುಷಿಪಟ್ಟರು. (ವರದಿ: ಮಂಜುನಾಥ್ ಕೆ.ಬಿ, ಟಿವಿ9, ಹಾಸನ)



















