AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ಎಂದು ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನೆ

ಹಾಸನದಲ್ಲಿ ದೇವೇಗೌಡರು ನೈಸ್ ಯೋಜನೆಯನ್ನು ಸಮರ್ಥಿಸಿಕೊಂಡು, ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಕಿಡ್ನಿ ಸಮಸ್ಯೆಯಿದ್ದರೂ 'ಬ್ರೇನ್ ಪಕ್ಕಾ' ಎಂದಿರುವ ಅವರು, ಪಿತೃಪಕ್ಷದ ಬಳಿಕ ಸಕ್ರಿಯ ರಾಜಕೀಯಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದರು. ಜೆಡಿಎಸ್-ಬಿಜೆಪಿ ಮೈತ್ರಿ ಖಚಿತಪಡಿಸಿ, ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಕರೆ ನೀಡಿದರು. ರೈತಪರ ತಮ್ಮ ಬದುಕಿನ ಬಗ್ಗೆ ಹೇಳಿ, ಸಂಸತ್ ಭಾಷಣಗಳ ಪುಸ್ತಕ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದರು.

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ಎಂದು ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನೆ
ಹೆಚ್​​ಡಿಡಿ ಮತ್ತು ಡಿಕೆಶಿ
ಮಂಜುನಾಥ ಕೆಬಿ
| Edited By: |

Updated on: Oct 06, 2026 | 6:33 PM

Share

ಹಾಸನ, ಅ.6: ನೈಸ್ (NICE) ರಸ್ತೆ ಯೋಜನೆ ದೇವೇಗೌಡರ ಕೂಸು ಎಂದು ಟೀಕಿಸುವವರು, ಆ ಯೋಜನೆಯನ್ನು ಹೆರಿಗೆ ಮಾಡಿಸಿದ ಸೂಲಗಿತ್ತಿ ಯಾರು ಎಂಬುದನ್ನೂ ಹೇಳಬೇಕಲ್ಲವೇ?” ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಅವರು ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ. ಹಾಸನದಲ್ಲಿ ಮಂಗಳವಾರ (ಅ.6) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇವೇಗೌಡರು, ನೈಸ್ ಯೋಜನೆ, ಎಸ್‌ಐಆರ್ ಕದನ, ಕಾಂಗ್ರೆಸ್ ನಾಯಕರ ಪ್ರಚಾರ ವೈಖರಿ ಹಾಗೂ ತಮ್ಮ ಸಕ್ರಿಯ ರಾಜಕೀಯ ಭವಿಷ್ಯದ ಕುರಿತು ಸುದೀರ್ಘವಾಗಿ ಹಂಚಿಕೊಂಡಿದ್ದಾರೆ.

1992 ರಲ್ಲಿ ಅಂದಿನ ಆರ್ಥಿಕ ಸುಧಾರಣೆಗಳ ಕಾಲದಲ್ಲಿ ನಡೆದ ಒಪ್ಪಂದಗಳ ಕುರಿತು ಸ್ಮರಿಸಿದ ಮಾಜಿ ಪ್ರಧಾನಿ, “ಅಮೆರಿಕದ ಕಂಪನಿ ಸೇರಿದಂತೆ ಮೂರು ಸಂಸ್ಥೆಗಳು ಸೇರಿ ಮಾಡಿದ ಎಂಒಯುಗೆ ನಾನು ಅಂದು ಸಹಿ ಹಾಕಿದೆ ಅಷ್ಟೇ. ನಂತರ ನಾನು ದೆಹಲಿ ರಾಜಕೀಯಕ್ಕೆ ಹೋದೆ. ಬಳಿಕ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ನೈಸ್ ಆಸ್ತಿ ವಿಚಾರದಲ್ಲಿ ಎಷ್ಟೇ ಪ್ರಯತ್ನಿಸಿದರೂ ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ಸಿದ್ಧರಾಮಯ್ಯ ಅವರು ದೀಪದ ಬೆಳಕಿನಲ್ಲಿ ಓದಿದೆ ಎನ್ನುತ್ತಾರೆ. ನಾನಂತೂ ಲೈಟೇ ಇಲ್ಲದ ಹಳ್ಳಿಯಲ್ಲಿ ಓದಿ ಬಂದವನು. ದೇವೇಗೌಡ ಸಾಯಬಹುದು, ಆದರೆ ಆತ ಮಾಡಿದ ಕೆಲಸಗಳನ್ನು ಇತಿಹಾಸ ಮರೆಯುವುದಿಲ್ಲ” ಎಂದರು.

“ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ”: ಸಕ್ರಿಯ ರಾಜಕೀಯಕ್ಕೆ ಕಂ‌ಬ್ಯಾಕ್ ಎಚ್ಚರಿಕೆ

ತಮ್ಮ ಆರೋಗ್ಯದ ಸ್ಥಿತಿಗತಿಯ ಕುರಿತು ಮಾತನಾಡಿದ 93 ವರ್ಷದ ಹಿರಿಯ ನಾಯಕ, “ನನಗೆ ಕಿಡ್ನಿ ಸಮಸ್ಯೆ ಇದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಡಯಾಲಿಸಿಸ್ ಆಗುತ್ತಿರುವುದು ಕಿಡ್ನಿಗೆ ಮಾತ್ರ, ಬ್ರೇನ್‌ಗಲ್ಲ, ನನ್ನ ಬ್ರೇನ್ ಪಕ್ಕಾ ಆಗಿದೆ. ಈ ಬಾರಿಯ ಪಿತೃಪಕ್ಷದ ಕಾರ್ಯಕ್ರಮಗಳನ್ನು ನಮ್ಮ ಸ್ವಗ್ರಾಮ ಹರದನಹಳ್ಳಿಯಲ್ಲೇ ನಾಲ್ವರೂ ಗಂಡುಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿ ನೆರವೇರಿಸಲಿದ್ದೇವೆ. ಪಿತೃಪಕ್ಷ ಮುಗಿದ ತಕ್ಷಣವೇ ನಾನು ರಾಜಕೀಯದಲ್ಲಿ ಮತ್ತಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ” ಎಂದು ಸ್ಪಷ್ಟಪಡಿಸಿದರು.

ಎಸ್‌ಐಆರ್ (SIR) ವಿಚಾರ ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯವೇ ತೀರ್ಪು ನೀಡಲಿದೆ. ರಾಹುಲ್ ಗಾಂಧಿ ಯುವಕರಿದ್ದಾರೆ, ಅನುಭವದ ಕೊರತೆ ಎಂದು ನಾನು ಹೇಳಲ್ಲ. ಆದರೆ ತುಂಬಾ ಸ್ಪೀಡ್ ಆಗಿ ಹೋಗಬೇಕು ಎನ್ನುವ ಗಡಿಬಿಡಿಯಲ್ಲಿದ್ದಾರೆ. ನ್ಯಾಯಾಲಯದ ಅಂತಿಮ ತೀರ್ಪಿನ ಬಳಿಕ ದೇಶದ ಹಿರಿಯ ನಾಗರಿಕನಾಗಿ ಪ್ರತಿಕ್ರಿಯಿಸುತ್ತೇನೆ ಎಂದರು. ಮುಂಬರುವ ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಬಿ.ಎಸ್. ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ಎರಡೂ ಪಕ್ಷಗಳು ಶಕ್ತಿಯುತವಾಗಿ ಒಂದಾಗಿ ಹೋರಾಡಲಿದ್ದು, ಮೈತ್ರಿಯಲ್ಲಿ ಯಾವುದೇ ಕೊರತೆಯಿಲ್ಲ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಂಬರೀಶ್​​ಗೆ ‘ಕರ್ನಾಟಕ ರತ್ನ’: ಸರ್ಕಾರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪತ್ರ

“ನನ್ನ ಇಡೀ ರಾಜಕೀಯ ಜೀವನ ರೈತರಿಗಾಗಿ”: ಸಂಸತ್ ಭಾಷಣದ ಪುಸ್ತಕಗಳು ಬಿಡುಗಡೆಗೆ ಸಜ್ಜು

ತಮ್ಮ ರಾಜಕೀಯ ಯಾನ ಹಾಗೂ ರೈತಪರ ಹೋರಾಟವನ್ನು ಸ್ಮರಿಸಿದ ದೇವೇಗೌಡರು, “ನಾನು ಸತತ 22 ವರ್ಷಗಳ ಕಾಲ ಸಂಸತ್ತಿನಲ್ಲಿ ಕನ್ನಡದಲ್ಲೇ ಮಾತನಾಡಿದ್ದೇನೆ. ನನ್ನ ಇಡೀ ರಾಜಕೀಯ ಜೀವನವನ್ನು ರೈತರ ಹಿತರಕ್ಷಣೆಗಾಗಿಯೇ ಮುಡುಪಾಗಿಟ್ಟಿದ್ದೇನೆ. ಇತ್ತೀಚೆಗೆ ಕೇಂದ್ರದ ಬರ ಅಧ್ಯಯನ ತಂಡ ಬಂದಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ” ಎಂದರು. ಸಂಸತ್ತಿನ ಎರಡೂ ಸದನಗಳಲ್ಲಿ ಅವರು ಮಾಡಿದ ಐತಿಹಾಸಿಕ ಭಾಷಣಗಳನ್ನು ಒಳಗೊಂಡ ‘ನೇಗಿನ ಗೆರೆಗಳು’ ಹಾಗೂ ಇಂಗ್ಲಿಷ್ ಅವೃತ್ತಿಯ ಎರಡು ಪುಸ್ತಕಗಳು ಶೀಘ್ರವೇ ಬಿಡುಗಡೆಯಾಗಲಿವೆ. ಈ ಪೈಕಿ ಕನ್ನಡ ಪುಸ್ತಕದ 15,000 ಪ್ರತಿಗಳು ಈಗಾಗಲೇ ಪ್ರಿಂಟ್ ಆಗಿ ಸಂಪೂರ್ಣ ಮಾರಾಟವಾಗಿವೆ ಎಂದು ತಿಳಿಸಿದರು. ದಿವಂಗತ ಎಸ್. ಬಂಗಾರಪ್ಪ ಅವರು ನದಿ ನೀರು ಬಿಡಲ್ಲ ಎಂದು ನಿರ್ಧಾರ ಕೈಗೊಂಡಾಗ, ಅದನ್ನು 9 ನ್ಯಾಯಮೂರ್ತಿಗಳ ಲಾರ್ಜ್ ಬೆಂಚ್‌ಗೆ ರಾಷ್ಟ್ರಪತಿಗಳು ರೆಫರ್ ಮಾಡಿದ್ದ ಘಟನೆಯನ್ನು ಗೌಡರು ನೆನಪಿಸಿಕೊಂಡರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್