AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಮೈಸೂರು ದಸರಾ ಮಾದರಿಯಲ್ಲಿ ಹಾಸನಾಂಬೆ ಉತ್ಸವ ಆಚರಿಸುತ್ತೇವೆ: ಸಚಿವ ಕೆಎಂ ಶಿವಲಿಂಗೇಗೌಡ

ಹಾಸನಾಂಬೆ ದರ್ಶನೋತ್ಸವಕ್ಕೆ ಇಂದು ಅದ್ಧೂರಿ ತೆರೆ ಬಿದ್ದಿದೆ. ಮೈಸೂರು ದಸರಾ ಮೀರಿಸುವ ರೀತಿ ಇತ್ತು ಎಂದು ಜನರು ಹೊಗಳಿದ್ದಾರೆ. ಹಾಗಾಗಿ ಇನ್ಮುಂದೆ ಹಾಸನಾಂಬೆ ದರ್ಶನೋತ್ಸವವನ್ನು ದೊಡ್ಡ ನಾಡಹಬ್ಬವಾಗಿ ಆಚರಣೆ ಮಾಡಲು ನಿರ್ಣಯ ಮಾಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ತಿಳಿಸಿದ್ದಾರೆ.

ಇನ್ಮುಂದೆ ಮೈಸೂರು ದಸರಾ ಮಾದರಿಯಲ್ಲಿ ಹಾಸನಾಂಬೆ ಉತ್ಸವ ಆಚರಿಸುತ್ತೇವೆ: ಸಚಿವ ಕೆಎಂ ಶಿವಲಿಂಗೇಗೌಡ
ಹಾಸನಾಂಬೆ ದರ್ಶನೋತ್ಸವ
ಮಂಜುನಾಥ ಕೆಬಿ
| Edited By: |

Updated on: Nov 11, 2026 | 7:35 PM

Share

ಮುಖ್ಯಾಂಶಗಳು

  • ಹಾಸನಾಂಬೆ ದರ್ಶನೋತ್ಸ ಸಂಪನ್ನ
  • 12 ದಿನಗಳಲ್ಲಿ 30.07 ಲಕ್ಷ ಭಕ್ತರಿಂದ ಹಾಸನಾಂಬೆ ದರ್ಶನ
  • ಹಾಸನಾಂಬೆ ದರ್ಶನೋತ್ಸವನ್ನು ನಾಡಹಬ್ಬವಾಗಿ ಆಚರಿಸಲು ನಿರ್ಧಾರ

ಹಾಸನ, ನವೆಂಬರ್​​ 11: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. 12 ದಿನದಲ್ಲೇ ಬರೋಬ್ಬರಿ 30 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ದೇಗುಲಕ್ಕೆ ಕೋಟ್ಯಂತರ ರೂ ಆದಾಯ ಹರಿದುಬಂದಿದೆ. ಇನ್ಮುಂದೆ ದಸರಾ ಮಾದರಿಯಲ್ಲಿ ಹಾಸನಾಂಬೆ ಉತ್ಸವ ನಾಡಹಬ್ಬವಾಗಿ ಆಚರಣೆ ಮಾಡಲು ನಿರ್ಣಯಿಸಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಮಾಹಿತಿ ನೀಡಿದ್ದಾರೆ.

ಹಾಸನಾಂಬೆ ಉತ್ಸವ ನಾಡಹಬ್ಬವಾಗಿ ಆಚರಣೆ ಆಗಲಿದೆ

ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ‘ಹಾಸನಾಂಬೆ ದರ್ಶನೋತ್ಸವವನ್ನು ಇನ್ಮುಂದೆ ದೊಡ್ಡ ನಾಡ ಹಬ್ಬವಾಗಿ ಆಚರಣೆ ಮಾಡಲು ನಿರ್ಣಯ ಮಾಡಿದ್ದೇವೆ. ಇನ್ಮುಂದೆ ದಸರಾ ಮಾದರಿಯಲ್ಲಿ ಹಾಸನಾಂಬೆ ಉತ್ಸವ ನಾಡಹಬ್ಬವಾಗಿ ಆಚರಣೆ ಆಗಲಿದೆ. ಸಾಗರೋಪಾದಿಯಲ್ಲಿ ಹರಿದು ಬಂದಿರುವ ಜನ ಸಂಖ್ಯೆ ಹಾಸನ‌ ಜಿಲ್ಲೆಗೆ ಆದರ್ಶವಾಗಿ ಉಳಿಯಲಿದೆ’ ಎಂದು ಅವರು ಹೇಳಿದರು.

ತಪ್ಪು ಆಗಿದ್ದರೆ ನಾವು ಕ್ಷಮೆ‌ ಕೇಳುತ್ತೇವೆ ಎಂದ ಸಚಿವ

‘ನಾಡ ಹಬ್ಬ ಆಗಲು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಗಬೇಕು ಎಂದರು. ಹಾಗಾಗಿ ಆ ದಸರಾ ನೋಡಿ ಬಂದು ನಾಡ ಹಬ್ಬದ ರೀತಿ ಆಚರಣೆ ಮಾಡಿದ್ದೇವೆ. ಕೆಲವು ಕಡೆ ಸಣ್ಣ-ಪುಟ್ಟ ತಪ್ಪು ಆಗಿರಬಹುದು. ತಪ್ಪು ಆಗಿದ್ದರೆ ನಾವು ಕ್ಷಮೆ‌ ಕೇಳುತ್ತೇವೆ. ಅನೇಕರು ರಾಜಕೀಯ ಮಾಡಬಹುದು, ಅದಕ್ಕೆ ತಾಯಿ ಒಳ್ಳೆ ಬುದ್ಧಿ ಕೊಡಲಿ. ಇಂತಹ ಪವಿತ್ರ ಜಾತ್ರೆಯಲ್ಲಿ ರಾಜಕೀಯ ಮಾಡಬಾರದು’ ಎಂದಿದ್ದಾರೆ.

LIVE TV

25.60 ಕೋಟಿ ರೂ ಆದಾಯ

‘ದೇಗುಲಕ್ಕೆ ಹರಿದುಬಂದ ಆದಾಯದ ಬಗ್ಗೆ ಮಾತನಾಡಿದ ಅವರು, ‘300 ರೂ ಟಿಕೆಟ್​​ಯಿಂದ 6.04 ಕೋಟಿ, 1 ರೂ ಟಿಕೆಟ್​ಯಿಂದ 13.18 ಕೋಟಿ, ಆನ್ಲೈನ್​ನಲ್ಲಿ 5.8 ಕೋಟಿ ರೂ ಸೇರಿ 24.31 ಕೋಟಿ ಆದಾಯ ಬಂದಿದೆ. ಲಡ್ಡು ಪ್ರಸಾದ ಮಾರಾಟದಿಂದ 1.29 ಕೋಟಿ ರೂ ಆದಾಯ ಬಂದಿದ್ದು, ಒಟ್ಟು ಹುಂಡಿ ಎಣಿಕೆ ಮುನ್ನವೇ 25.60 ಕೋಟಿ ರೂ ಆದಾಯ ಬಂದಿದೆ’ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ, ಆಡಳಿತ ಅಧಿಕಾರಿಗಳು ಒಳ್ಳೆ ಕೆಲಸ ಮಾಡಿದ್ದಾರೆ ಎಂದ ಶಿವಲಿಂಗೇಗೌಡ

‘ಈ ಸಾರಿ ಮಳೆ‌, ಬೆಳೆ‌ ಕಡಿಮೆ‌ಯಾಗಿದೆ. ನಾನು ದರ್ಶನ‌ ಮಾಡಿದಾಗ ರೈತ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿ ಮಾಡಲು ಉತ್ತಮ‌ ಮಳೆ ಕೊಡು ತಾಯಿ ಎಂದು ಕೇಳಿದ್ದೇನೆ. ಜಿಲ್ಲಾಧಿಕಾರಿ, ಆಡಳಿತ ಅಧಿಕಾರಿ ಒಳ್ಳೆ ಕೆಲಸ ಮಾಡಿದಾರೆ. ಈ ಸಂದರ್ಭದಲ್ಲಿ ಏನೇನೋ ಕತೆ ಕಟ್ಟಿದರು. ಮುಂದೆ ಅದು ಮಹಾಭಾರತ ಶುರುವಾಗುತ್ತೆ. ಒಳ್ಳೆ ಕೆಲಸ ಮಾಡಿದ್ದೇವೆ ಎನ್ನುವ ಸಮಾಧಾನವಿದೆ. ಸಿಎಂ, ಮಾಜಿ ಸಿಎಂ, ಸಚಿವರು, ಶಾಸಕರು ಬಂದು ಹೋಗಿದಾರೆ. ಇದರಲ್ಲಿ ಕಲ್ಲು ಹುಡುಕುವ ಕೆಲಸ ಯಾರು ಮಾಡಬೇಡಿ. ಜಿಲ್ಲೆಯ ಜನರು ಈ ಜಾತ್ರೆಯನ್ನು ಹೊಗಳಿದಾರೆ. ಮೈಸೂರು ಮೀರಿಸರುವ ರೀತಿ ಇತ್ತು ಎಂದು ಜನರು ಹೇಳಿದಾರೆ’ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು
ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ
ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ
ಹಾಸನಾಂಬೆ ದರ್ಶನೋತ್ಸವ ಸಂಪನ್ನ: ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್
ಹಾಸನಾಂಬೆ ದರ್ಶನೋತ್ಸವ ಸಂಪನ್ನ: ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್
ಈ ವರ್ಷ ಪಟಾಕಿ ಅವಘಡಗಳಿಂದ ಹೆಚ್ಚು ಮಂದಿಗೆ ಗಾಯ: ವೈದ್ಯರಿಂದ ಮಾಹಿತಿ
ಈ ವರ್ಷ ಪಟಾಕಿ ಅವಘಡಗಳಿಂದ ಹೆಚ್ಚು ಮಂದಿಗೆ ಗಾಯ: ವೈದ್ಯರಿಂದ ಮಾಹಿತಿ
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!