AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್​ಡಿ ರೇವಣ್ಣ ಆರೋಪಗಳಿಗೆ ಬೇಸತ್ತು ಸ್ವಯಂ ವರ್ಗಾವಣೆ ಕೋರಿದ ಹಾಸನ DySP ಉದಯ್​ ಭಾಸ್ಕರ್

ರೇವಣ್ಣ ಅವರ ಆರೋಪಕ್ಕೆ ಬೇಸತ್ತು DySP ಉದಯ್ ಭಾಸ್ಕರ್ ಸ್ವಯಂ ವರ್ಗಾವಣೆ ಕೋರಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ವರ್ಗಾವಣೆಗೆ ಕೋರಿದ್ದಾರೆ.

ಹೆಚ್​ಡಿ ರೇವಣ್ಣ ಆರೋಪಗಳಿಗೆ ಬೇಸತ್ತು ಸ್ವಯಂ ವರ್ಗಾವಣೆ ಕೋರಿದ ಹಾಸನ DySP ಉದಯ್​ ಭಾಸ್ಕರ್
ಹೆಚ್​ಡಿ ರೇವಣ್ಣ, ಹಾಸನ DySP ಉದಯ್​ ಭಾಸ್ಕರ್
ಆಯೇಷಾ ಬಾನು
|

Updated on: Apr 02, 2023 | 11:14 AM

Share

ಹಾಸನ: DySP ಉದಯ್​ ಭಾಸ್ಕರ್​(Hassan DySP Uday Bhaskar) ನಿಷ್ಪಕ್ಷಪಾತವಾಗಿ ಕೆಲಸ ಮಾಡದ ಆರೋಪದ ಮೇಲೆ ಉದಯ್​ ಭಾಸ್ಕರ್ ವಿರುದ್ಧ ಕ್ರಮಕ್ಕೆ ಹೆಚ್​ಡಿ ರೇವಣ್ಣ(HD Revanna) ಒತ್ತಾಯಿಸಿದ್ದಾರೆ. ರೇವಣ್ಣ ಅವರ ಆರೋಪಕ್ಕೆ ಬೇಸತ್ತು DySP ಉದಯ್ ಭಾಸ್ಕರ್ ಸ್ವಯಂ ವರ್ಗಾವಣೆ ಕೋರಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ವರ್ಗಾವಣೆಗೆ ಕೋರಿದ್ದಾರೆ. ಹೆಚ್​ಡಿ ರೇವಣ್ಣ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ನಿಷ್ಪಕ್ಷಪಾತ, ನೇರ ನುಡಿ ವ್ಯಕ್ತಿತ್ವವುಳ್ಳವನು. ಅವರ ಒತ್ತಾಯಕ್ಕೆ ಮಣಿಯದ ಕಾರಣ ಅನಗತ್ಯ ಆರೋಪ ಮಾಡ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡಿ ಮೇಲಧಿಕಾರಿಗಳಿಗೆ ಒತ್ತಡ ಹಾಕ್ತಿದ್ದಾರೆ. ಇದರಿಂದ ಮೇಲಧಿಕಾರಿಗಳಿಗೂ ಇರಿಸುಮುರಿಸು ಉಂಟಾಗುತ್ತದೆ ಎಂದು ಹೆಚ್​.ಡಿ.ರೇವಣ್ಣ ವಿರುದ್ಧ DySP ಉದಯ್​ ಭಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕುಂದಗೋಳ ಕ್ಷೇತ್ರದಿಂದ ಎಂಆರ್​ ಪಾಟೀಲ್​ಗೆ ಟಿಕೆಟ್​ ಪಕ್ಕಾ: ಜಗದೀಶ್​ ಶೆಟ್ಟರ್​ ಹಳೆ ವಿಡಿಯೋ ವೈರಲ್​

ಹದಿನೈದು ವರ್ಷಗಳ ಹಿಂದೆ ಹಾಸನದಲ್ಲಿ ಪಿಎಸ್ ಐ ಆಗಿ ಕೆಲಸ ಮಾಡಿದ್ದು ಈಗ ಡಿವೈಎಸ್ಪಿ ಆಗಿ ಹಾಸನದಲ್ಲಿದಾರೆ. ಇವರು ಬಿಜೆಪಿ ಜೊತೆ ಶಾಮೀಲಾಗಿದಾರೆ. ಇವರ ವ್ಯಾಪ್ತಿಯ ಠಾಣೆಗಳಲ್ಲಿ ಬಿಜೆಪಿ ಮುಖಂಡರೇ ಇರ್ತಾರೆ. ರೌಡಿ ಶೀಟರ್​ಗಳ ಎಲ್ಲ ಕೇಸ್ ಗಳ ರಾಜಿ ಸಂಧಾನ ಮಾಡಿಸ್ತಾರೆ. ಜೆಡಿಎಸ್ ಮುಖಂಡರ ಮೇಲೆ ವಿನಾಕಾರಣ ಕೇಸ್ ಹಾಕಿಸ್ತಾರೆ ಎಂದು ರೇವಣ್ಣ ಪದೇ ಪದೆ ಆರೋಪ ಮಾಡಿದ್ದಾರೆ. ಇವರನ್ನು ಕೂಡಲೆ ವರ್ಗಾವಣೆ ಮಾಡಿ ಎಂದು ಒತ್ತಾಯ ಕೂಡ ಮಾಡಿದ್ದಾರೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಕೊಲೆಯಾದ ಹಾಸನ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಕೇಸ್ ನಲ್ಲಿ ಇವರು ಆರೋಪಿಗಳಿಗೆ ಸಹಾಯ ಮಾಡಿದ್ದರು ಎಂದು ಕೂಡ ರೇವಣ್ಣ ಆರೋಪ ಮಾಡಿದ್ರು ಹಾಗಾಗಿ ತಮ್ಮ ವಿರುದ್ದ ಪದೇ ಪದೇ ಆರೋಪ ಹಿನ್ನೆಲೆಯಲ್ಲಿ ಮನನೊಂದು ಸ್ವಯಂ ವರ್ಗಾವಣೆಗೆ ಉದಯ್ ಭಾಸ್ಕರ್ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!