Hassan: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕಾಡಾನೆ ದಾಳಿ: ಇಬ್ಬರಿಗೆ ಗಂಭೀರ ಗಾಯ, ಮತ್ತಿಬ್ಬರು ಪಾರು

| Updated By: ಗಂಗಾಧರ​ ಬ. ಸಾಬೋಜಿ

Updated on: Feb 10, 2024 | 8:30 PM

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕಾಡಾನೆ ದಾಳಿ ಮಾಡಿದ್ದು, ಇಬ್ಬರಿಗೆ ಗಂಭೀರ ಗಾಯವಾದರೆ, ಮತ್ತಿಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ನಡೆದಿದೆ. ಇತ್ತೀಚೆಗೆ ಜ.4 ರಂದು ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ವಂಸತ್ ಎಂಬುವವರನ್ನು ಬಲಿ ಪಡೆದಿತ್ತು.

Hassan: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕಾಡಾನೆ ದಾಳಿ: ಇಬ್ಬರಿಗೆ ಗಂಭೀರ ಗಾಯ, ಮತ್ತಿಬ್ಬರು ಪಾರು
ಕಾಡಾನೆ ದಾಳಿ
Follow us on

ಹಾಸನ, ಫೆಬ್ರವರಿ 10: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕಾಡಾನೆ ದಾಳಿ (wild elephant attack) ಮಾಡಿದ್ದು,  ಇಬ್ಬರಿಗೆ ಗಂಭೀರ ಗಾಯವಾದರೆ, ಮತ್ತಿಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ. ವಸಂತ್ (52), ತಿಮ್ಮೇಗೌಡ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗಳು. ಶಾಂತಪ್ಪ, ಲೋಕೇಶ್ ಪ್ರಾಣಾಪಾಯದಿಂದ ಪಾರಾದವರು. ದನಗಳನ್ನು ಮೇಯಿಸಿಕೊಂಡು ಕುಳಿತಿದ್ದ ತಿಮ್ಮೇಗೌಡ, ಶಾಂತಪ್ಪ, ಲೋಕೇಶ್​ ಮೇಲೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಕಾಡಾನೆಯಿಂದ ತಪ್ಪಿಸಿಕೊಳ್ಳಲು ಕಾಫಿ ತೋಟದೊಳಗೆ ಮೂವರು ಓಡಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವಂಸಸ್​ ಮೇಲೆ ಕರಡಿ ಹೆಸರಿನ ಒಂಟಿಸಲಗ ದಾಳಿ ಮಾಡಿದೆ. ಕಾಡಾನೆಯಿಂದ ತಪ್ಪಿಸಿಕೊಳ್ಳುವಾಗ ಬಿದ್ದು ಗಾಯಗೊಂಡಿರುವ ತಿಮ್ಮೇಗೌಡ, ವಸಂತ್ ಹಾಗೂ ತಿಮ್ಮೇಗೌಡ ಸಕಲೇಶಪುರ ಕ್ರಾಫರ್ಡ್ ದಾಖಲು ಮಾಡಲಾಗಿದೆ.

ಬುಧವಾರ ಕಲ್ಕುಂದ ಗ್ರಾಮದಲ್ಲಿ ಇಬ್ಬರ ಮೇಲೆ ದಾಳಿ ಮಾಡಿದ್ದ ಕರಡಿ ಹೆಸರಿನ ಕಾಡಾನೆ ಜ.4 ರಂದು ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ವಂಸತ್ ಎಂಬುವವರನ್ನು ಬಲಿ ಪಡೆದಿತ್ತು. ಆಸ್ಪತ್ರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸಕಲೇಶಪುರ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಕಾಡಾನೆ ಜನರನ್ನು ಅಟ್ಟಾಡಿಸುವ ವೀಡಿಯೋ ಮೊಬೈಲ್​ನಲ್ಲಿ ಸೆರೆ ಆಗಿದೆ.

ಕಾಡಿನಿಂದ ಹೊರಬಂದ ಒಂಟಿ ಸಲಗ: ಹಿರಿಯ ಜೀವ ಬಲಿ

ಮೈಸೂರು: ಜಿಲ್ಲೆಯಲ್ಲಿ ಕಾಡು ಪ್ರಾಣಿ ಮಾನವ ಸಂಘರ್ಷ‌ ಮುಂದುವರಿದಿದೆ. ಇತ್ತೀಚೆಗೆ ಕಾಡಿನಿಂದ ಹೊರಬಂದ ಒಂಟಿ ಸಲಗವೊಂದು ಹಿರಿಯ ಜೀವವನ್ನು ಬಲಿ ಪಡೆದಿತ್ತು. ಜಮೀನಿಗೆ ಹೋದ ವೃದ್ಧನನ್ನ ಜವರಾಯನ ರೂಪದಲ್ಲಿ ಬಂದ ಒಂಟಿ ಸಲಗ ತುಳಿದು ಸಾಯಿಸಿತ್ತು. ಜಿಲ್ಲೆಯ ಹುಣಸೂರು ತಾಲ್ಲೂಕು ಮುದಗನೂರು ಗ್ರಾಮದಲ್ಲಿ ಇವತ್ತು ಅಕ್ಷರಶಃ ಭಯದ ಬೆಚ್ಚಿ ಬೀಳಿಸುವ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಕಾರಣವಾಗಿದ್ದು ಕಾಡಿನಿಂದ ನಾಡಿಗೆ ಬಂದಿದ್ದ ಒಂಟಿ ಸಲಗ.

ಇದನ್ನೂ ಓದಿ: ಹಾಸನ: ಕಾಫಿತೋಟದಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಕಾಡಾನೆ ದಾಳಿ; ಓರ್ವನ ಕಾಲುಮುರಿತ, ಮತ್ತೋರ್ವನಿಗೆ ಗಾಯ

ಹುಲಿ ದಾಳಿಯ ಭಯದಿಂದ ಇನ್ನೂ ಹೊರಬರದ ಕಾಡಂಚಿನ ಜನರಿಗೆ ಕಾಡಾನೆ ಕಾಟ ಎದುರಾಗಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದ ಒಂಟಿ ಸಲಗ ಹುಣಸೂರು ತಾಲೂಕಿನ ವೀರನಹೊಸಳ್ಳಿ ಅರಣ್ಯ ವ್ಯಾಪ್ತಿಯ ಮುದಗನೂರು ಗ್ರಾಮದ ಬಳಿ ಜಮೀನಿನಲ್ಲಿ ರಾಗಿ ಹುಲ್ಲು ತರಲು ಹೋಗಿದ್ದ ವೃದ್ಧ 75 ವರ್ಷದ ಚೆಲುವಯ್ಯ ಮೇಲೆ ದಾಳಿ ಮಾಡಿತ್ತು. ಈ ವೇಳೆ ಒಂಟಿ ಸಲಗದ ದಾಳಿಗೆ ಸಿಲುಕಿ ಬಜಾವ್ ಆಗಲು ಸಾಧ್ಯವಾಗದೆ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಕಾಡಾನೆ ದಾಳಿಯಿಂದ ಕಾರ್ಮಿಕನ ಸಾವು, ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್

ಜಿಲ್ಲೆಯಲ್ಲಿ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ಅರಣ್ಯ ಇಲಾಖೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಮತ್ತಷ್ಟು ಅಮೂಲ್ಯ ಜೀವಗಳು ಬಲಿಯಾಗಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:28 pm, Sat, 10 February 24