ತಂದೆ ಮುಂದೆಯೇ ಮಗಳ ಕಿಡ್ನಾಪ್, ಕಾರಿನಲ್ಲಿ ಜೋತಾಡಿದ ಅಪ್ಪ: ಹಾಸನ ಪ್ರೇಮ​ ಕಹಾನಿ ಅನಾಹುತ..!

ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಭೀಕರ ಘಟನೆ ನಡೆದಿದೆ. ಚನ್ನರಾಯಪಟ್ಟಣದ ಮಗಳನ್ನು ಕಾರಿನಲ್ಲಿ ಅಪರಹಿಸಿಕೊಂಡು ಹೋಗುವಾಗ ಯುವತಿಯ ತಂದೆ ಆಕೆಯನ್ನು ಕಾಪಾಡಲು ಹೋಗಿ ಚಲಿಸುತ್ತಿದ್ದ ಕಾರಿಗೆ ಜೋತು ಬಿದ್ದಿದ್ದಾರೆ. ಸುಮಾರು 200 ಮೀಟರ್‌ಗಳಷ್ಟು ದೂರ ಕಾರು ಸಾಗಿದೆ. ಯುವತಿಯ ಪೋಷಕರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಪ್ರೇಮಿಗಳು ನಂತರ ಚನ್ನರಾಯಪಟ್ಟಣ ಪೊಲೀಸರ ಮುಂದೆ ಹಾಜರಾಗಿದ್ದಾರೆ.

ತಂದೆ ಮುಂದೆಯೇ ಮಗಳ ಕಿಡ್ನಾಪ್, ಕಾರಿನಲ್ಲಿ ಜೋತಾಡಿದ ಅಪ್ಪ: ಹಾಸನ ಪ್ರೇಮ​ ಕಹಾನಿ ಅನಾಹುತ..!
ಕಾರಿಗೆ ಜೋತು ಬಿದ್ದ ಯುವತಿಯ ತಂದೆ
Updated By: ವಿವೇಕ ಬಿರಾದಾರ

Updated on: May 13, 2025 | 10:34 PM

ಹಾಸನ, ಮೇ 13: ಅಪ್ಪನ ಎದುರೇ ಮಗಳನ್ನು ಕಾರಿನಲ್ಲಿ ಅಪಹರಿಸಿದ ಆರೋಪ ಕೇಳಿಬಂದಿದೆ. ಬೇಲೂರು (Belur) ತಾಲೂಕಿನ, ಅರೇಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಮಗಳನ್ನು ಕಾಪಾಡಲು ಹೋಗಿ ತಂದೆ ಚಲಿಸುತ್ತಿದ್ದ ಕಾರಿನ (Car) ಡೋರ್​ಗೆ ನೇತಾಡುತ್ತ ಸುಮಾರು 200 ಮೀಟರ್ ದೂರ ಸಾಗಿದ್ದಾರೆ. ಬಳಿಕ, ಕೆಳೆಗೆ ಬಿದ್ದು ಗಾಯಗೊಂಡಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದೊಂದು ಪ್ರೇಮ ಕಹಾನಿ

ಚನ್ನರಾಯಪಟ್ಟಣ ಮೂಲದ ಯುವಕ ಪ್ರಜ್ವಲ್ ಮತ್ತು ಮಲಸಾವರ ಗ್ರಾಮದ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ (19) ಪ್ರೇಮಿಗಳು. ಎರಡು ತಿಂಗಳ ಹಿಂದೆ ಮದುವೆಯಾಗಿದ್ದಾರೆ. ಈ ವಿಚಾರ ತಿಳಿದ ಯುವತಿ ಪ್ರಸ್ಟಲ್ ಡಿಯಲಾರ ತಂದೆ-ತಾಯಿ ಮರಳಿ ಮನೆಗೆ ಬರುವಂತೆ ಮಗಳ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಪೋಷಕರ ಒತ್ತಡ ಹಿನ್ನೆಲೆಯಲ್ಲಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಮರಳಿ ಮನೆಗೆ ಬಂದಿದ್ದಾರೆ.

ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್​ ಮನೆಗೆ ಮರಳುತ್ತಿದ್ದಂತೆ ಆಕೆಯ ಪೋಷಕರು ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿರುವುದರ ಬಗ್ಗೆ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಪತಿ ಪ್ರಜ್ವಲ್​ಗೆ ಹೇಳಿದ್ದಾರೆ. ಅಲ್ಲದೇ, ತನ್ನನ್ನು ಕರೆದುಕೊಂಡು ಹೋಗುವಂತೆ ಪತಿ ಪಜ್ವಲ್​ಗೆ ಹೇಳಿದ್ದಾರೆ.

ಇದನ್ನೂ ಓದಿ
ಅತ್ಯಾಚಾರ ಪ್ರಕರಣ: ಪ್ರಜ್ವಲ್​ ರೇವಣ್ಣಗೆ ಮತ್ತೊಂದು ಶಾಕ್ ಕೊಟ್ಟ ಕೋರ್ಟ್​
ಅತ್ಯಾಚಾರ ಪ್ರಕರಣ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಬಿಗ್ ಶಾಕ್!
ಹಾಸನ: ಅಪರಿಚಿತ ಮಹಿಳೆಯ ಅತ್ಯಾಚಾರ ಎಸಗಿ ಬರ್ಬರ ಕೊಲೆ
ಪ್ರೀತಿಸಿದಾಕೆ ಮೋಸ ಮಾಡಿದ್ಲು ಎಂದು ಜೀವ ಕಳೆದುಕೊಂಡ ಲವರ್ ಬಾಯ್..!

ಪತ್ನಿಯ ಇಚ್ಚೆಯಂತೆ ಅರೇಹಳ್ಳಿ ಗ್ರಾಮಕ್ಕೆ ಪ್ರಜ್ವಲ್​ ಬಂದಿದ್ದಾರೆ. ಪತ್ನಿಯನ್ನು ತನ್ನ ಜೊತೆ ಕಳಸಿಕೊಡುವಂತೆ ಪತಿ ಪ್ರಜ್ವಲ್ ಹೇಳಿದಾಗ​ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್​ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ (ಮೇ.13) ರಂದು ತಂದೆ ಜೊತೆ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್​ ಅರೇಹಳ್ಳಿ ಪಟ್ಟಣದ ಹೈಸ್ಕೂಲ್ ಮುಂಭಾಗ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪ್ರಜ್ವಲ್​, ಪತ್ನಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್​ರನ್ನು ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಹೆಡ್​​ ಕಾನ್ಸ್​ಟೇಬಲ್​ನಿಂದಲೇ ಮೀಟರ್ ಬಡ್ಡಿ ದಂಧೆ

ಈ ವೇಳೆ ತಡೆಯಲು ಹೋಗಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್​​ ರ ತಂದೆ ಕಾರಿನ ಡೋರ್​ಗೆ ಜೋತು ಬಿದ್ದಿದ್ದಾರೆ. ಚಾಲಕ ಮಾತ್ರ ಕಾರು ನಿಲ್ಲಿಸಿದೆ ಸುಮಾರು 200 ಮೀಟರ್ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್​ರ ತಂದೆಯನ್ನು ಎಳೆದೊಯ್ದಿದ್ದಾನೆ. ದಂಪತಿಗಳು ಚನ್ನರಾಯಪಟ್ಟಣ ಶಹರ ಠಾಣೆ ಪೊಲೀಸರ ಎದುರು ಹಾಜಾರಾಗಿದ್ದಾರೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:56 pm, Tue, 13 May 25