Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಸಿದಾಕೆ ಮೋಸ ಮಾಡಿದ್ಲು ಎಂದು ಜೀವ ಕಳೆದುಕೊಂಡ ಯುವಕ: ನಾಲ್ಕೈದು ದಿನ ನರಳಿ ನರಳಿ ಪ್ರಾಣಬಿಟ್ಟ

ಆತ ಹೆತ್ತವರಿಗೆ ಇದ್ದ ಒಬ್ಬನೇ ಮಗ. ತಾವು ಕೂಲಿ ಮಾಡಿದ್ರು ಮಗ ಓದಲಿ ಎಂದು ಕಾಲೇಜಿಗೆ ಸೇರಿಸಿದ್ರು, ಮೂರು ವರ್ಷ ಪದವಿ ಮಾಡಿ ಕೆಲಸ ಅರಸುತ್ತಿದ್ದವನು ಪ್ರೀತಿಯ ಬಲೆಗೆ ಬಿದ್ದಿದ್ದ, ಫ್ರೆಂಡ್ ಶಿಪ್, ಲವ್ ಅಂತಾ ಸಿಕ್ಕ ಸಿಕ್ಕಲ್ಲಿ ಸುತ್ತಾಡಿದ್ದ, ಅವಳೇ ನನ್ನ ಜೀವನದ ಒಡತಿ ಎಂದು ಕನಸು ಕಟ್ಟಿಕೊಂಡಿದ್ದವನು ಆಕೆಗೆ ಇನ್ನೊಬ್ಬ ಬಾಯ್ ಫ್ರೆಂಡ್ ಇದಾನೆ ಎಂದು ಆಘಾತಗೊಂಡಿದ್ದಾನೆ. ಕೊನೆಗೆ ಪ್ರೇಯಸಿ ಮೋಸ ಮಾಡಿದ್ದಾಳೆ ಎಂದು ಮನನೊಂದು ಜೀವವನ್ನೇ ಕಳೆದುಕೊಂಡಿದ್ದಾನೆ. ನಾಲ್ಕು ದಿನ ನರಳಿ ನರಳಿ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದು, ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದ ಮಗನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರೀತಿಸಿದಾಕೆ ಮೋಸ ಮಾಡಿದ್ಲು ಎಂದು ಜೀವ ಕಳೆದುಕೊಂಡ ಯುವಕ: ನಾಲ್ಕೈದು ದಿನ ನರಳಿ ನರಳಿ ಪ್ರಾಣಬಿಟ್ಟ
Hassan Darshan
Follow us
ಮಂಜುನಾಥ ಕೆಬಿ
| Updated By: ರಮೇಶ್ ಬಿ. ಜವಳಗೇರಾ

Updated on: Feb 11, 2025 | 4:12 PM

ಹಾಸನ, (ಫೆಬ್ರವರಿ 11): ಪ್ರೀತಿಸಿದ ಹುಡುಗಿ ತನ್ನನ್ನ ಮದುವೆಗೆ ಆಗಲು ಒಪ್ಪಲಿಲ್ಲ ಎಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯತಮ ಸಾವನ್ನಪ್ಪಿದ್ದಾನೆ. ಹಾಸನ ಜಿಲ್ಲೆ ಅರಸೀಕೆರೆ ಬೈರಗೊಂಡನಹಳ್ಳಿಯ ದರ್ಶನ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೂರು ವರ್ಷ ಪ್ರೇತಿ ಪ್ರೇಮಾ ಎಂದು ಸುತ್ತಾಡಿ ಕೊನೆಗೆ ಪ್ರೇಯಸಿ ಕೈಕೊಟ್ಟಿದ್ದಕ್ಕೆ ಪ್ರಿಯಕರ ದರ್ಶನ್ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ದರ್ಶನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಅಜ್ಜಿ ಮನೆಯಲ್ಲಿ ಇದ್ದುಕೊಂಡು ಪದವಿ ಓದುತ್ತಿದ್ದಾಗ ಪರಿಚಯವಾಗಿದ್ದ ಯುವತಿ ಜೊತೆಗೆ ಸ್ನೇಹ ಮಾಡಿದ್ದ ದರ್ಶನ್ ಆಕೆಯ ಪ್ರೀತಿಯ ಬಲೆಗೆ ಬಿದ್ದಿದ್ದ, ಪ್ರೀತಿ ಪ್ರೇಮಾ ಫ್ರೆಂಡ್ ಶಿಪ್ ಅಂತಾ ಸುತ್ತಾಡಿದ್ದ, ಮನೆಯವರಿಗೂ ವಿಚಾರ ತಿಳಿಯದಂತೆ ಕದ್ದು ಮುಚ್ಚಿ ಓಡಾಡ್ತಾ ನೀನೇ ನನ್ನ ಜೀವನ, ನೀನೇ ನನ್ನ ಜೀವಾ ಅಂತೆಲ್ಲಾ ಹೇಳಿಕೊಂಡು ಖುಷಿಯಾಗಿದ್ದ, ಆದ್ರೆ ಹುಡುಗನ ಕುಟುಂಬ ಸದಸ್ಯರು ಆರೋಪವೇನೆಂದರೆ ಹುಡುಗಿ ದರ್ಶನ್ ಜೊತೆಗೆ ಗೆಳೆತನದಲ್ಲಿದ್ದುಕೊಂಡೇ ಬೇರೊಬ್ಬ ಹುಡುಗನ ಜೊತೆ ಲವ್ವಿಡವ್ವಿ ಶುರುಮಾಡಿದ್ದಂಳತೆ. ಈ ವಿಚಾರ ತಿಳಿದ ದರ್ಶನ್ ಆಕೆಯನ್ನ ಪ್ರಶ್ನೆ ಮಾಡಿದಾಗ ಆಕೆ ನೀನು ಹೀಗೆಲ್ಲಾ ತೊಂದ್ರೆ ಕೊಟ್ಟರೆ ನಾನು ಸೂಸೈಡ್​ ಮಾಡಿಕೊಳ್ಳುತ್ತೇನೆ ಹೆದರಿಸಿದ್ದಾಳಂತೆ.

ಇದನ್ನೂ ಓದಿ: ಪತಿಯ ಗುಟ್ಟು ರಟ್ಟು: ಗಂಡನ ಜಿಮ್‌ ಸೆಂಟರ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ನಿನ್ನಿಂದ ನನಗೆ ಮೋಸ ಆಯ್ತು. ನಾನೇ ಬದುಕುವುದಿಲ್ಲ ಎಂದು ದರ್ಶನ್, ಫೆಬ್ರವರಿ 5ರ ಬುಧವಾರ ಮನೆಯಲ್ಲೇ ವಿಷ ಸೇವನೆ ಮಾಡಿದ್ದ. ಕೂಡಲೇ ಮನೆಯವರು ದರ್ಶನನ್ನು ಹಾಸನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಏನು ಚೇತರಿಕೆ ಕಂಡುಬರದಿದ್ದರಿಂದ ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ನಾಲ್ಕು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ದರ್ಶನ್, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

ನಿತ್ಯವೂ ತನ್ನೊಟ್ಟಿಗೆ ಕಾಲೇಜಿಗೆ ಬರುತ್ತಿದ್ದ ಯುವತಿಯ ಜೊತೆಗೆ ಸ್ನೇಹ ಮಾಡಿದ್ದ ದರ್ಶನ್, ನಿತ್ಯ ಆಕೆ ಜೊತೆ ಓಡಾಡುತ್ತಿದ್ದನಂತೆ. ಇಬ್ಬರೂ ಜೊತೆಗೆ ಜೊತೆಯಾಗಿ ಓಡಾಡುತ್ತಾ ಖುಷಿ ಖುಷಿಯಾಗಿದ್ದರು. ಈ ನಡುವೆ ಮತ್ತೊಬ್ಬ ಬಂದಾಗ ಇಬ್ಬರ ನಡುವೆ ವಿರಸ ಶುರುವಾಗಿದೆ, ಪ್ರೇಮಿಗಳ ನಡುವಿನ ವಿರಸ ಪರಸ್ಪರ ಜಗಳಕ್ಕೂ ಕಾರಣವಾಗಿದೆ, ತನ್ನನ್ನ ನಂಬಿಸಿ ಹೀಗೆ ಮಾಡ್ತೀಯಾ, ಫೋನ್ ಮಾಡಲ್ಲ ಫೋನ್ ಮಾಡಿದ್ರೆ ರಿಸೀವ್ ಮಾಡಲ್ಲ, ಮೆಸೇಜ್ ಮಾಡಲ್ಲ ಎಂದು ಯುವತಿಯನ್ನ ಪ್ರಶ್ಬೆ ಮಾಡಿ ಅಸಮಾಧಾನ ಹೊರಹಾಕಿದ್ದಾನೆ. ಇದರಿಂದ ಸಿಟ್ಟಾಗಿದ್ದ ಯುವತಿ, ನೀನು ಹೀಗೆ ಮಾಡಿದ್ರೆ ನಾನು ವಿಷ ಕುಡಿಯುತ್ತೇನೆ ಎಂದು ಬೆದರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಆಘಾತಗೊಂಡಿದ್ದ ದರ್ಶನ್, ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿ ಮನೆಗೆ ಹೋಗಿ ವಿಷ ಸೇವನೆ ಮಾಡಿದ್ದಾನೆ.

ಕೂಲಿಮಾಡಿ ಜೀವನ ಸಾಗಿಸೋ ದರ್ಶನ್ ಪೋಷಕರು ಇದ್ದ ಒಬ್ಬನೇ ಮಗ ಚೆನ್ನಾಗಿರಲಿ ಎಂದು ಶಿಕ್ಷಣ ಕೊಡಿಸಿದ್ರು. ಆದ್ರೆ ಪ್ರೀತಿ ಪ್ರೇಮ ಅಂತಾ ಸುತ್ತಾಡಿ ಈಗ ಜೀವವನ್ನೇ ಕಳೆದುಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಒಟ್ಟಿನಲ್ಲಿ ಇಷ್ಟಪಟ್ಟ ಹುಡುಗಿ ಪ್ರೀತಿ ನಿರಾಕರಿಸಿದ್ಲು ಎನ್ನೋ ಒಂದೇ ಒಂದು ಕಾರಣಕ್ಕೆ ದುಡುಕಿ ಆತ್ಮಹತ್ಯೆಯ ಯತ್ನ ಮಾಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ, ಇದ್ದ ಒಬ್ಬ ಮಗನ ಮೇಲೆ ಬೆಟ್ಟದಷ್ಟು ಕನಸು ಕಟ್ಟಿಕೊಂಡು ಕಾದಿದ್ದ ಹೆತ್ತವರು ಈಗ ಅನಾಥವಾಗಿದ್ದಾರೆ, ಓದೋ ವಯಸ್ಸಿನಲ್ಲಿ ಯುವಜನರ ಇಂತಹ ದಾರಿತಪ್ಪಿದ ಪ್ರೀತಿ ಪ್ರೇಮದಿಂದ ತಮ್ಮ ಜೀವನಕ್ಕೂ ಕೊಳ್ಳಿಇಟ್ಟು ಕುಟುಂಬಗಳನ್ನು ಅತಂತ್ರಮಾಡುತ್ತಿರೋದು ನಿಜಕ್ಕು ದುರಂತ.

‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್