ಹಾಸನ: ಕೋಳಿ ಕದ್ದಿದ್ದೇಕೆ ಎಂದಿದ್ದಕ್ಕೆ ಚಾಕುವಿನಿಂದ ಮಹಿಳೆಯ ಕತ್ತು ಸೀಳಿದ ಕಿರಾತಕ!

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ತಾಳೂರು ಗ್ರಾಮದಲ್ಲಿ, ಕೋಳಿ ಕಳ್ಳತನದ ಕಾರಣ ಕೊಲೆ ಯತ್ನ ನಡೆದಿದೆ. ಭೂಮಿಕಾ ಎಂಬ ಮಹಿಳೆ ತನ್ನ ಕೋಳಿಯನ್ನು ಹುಡುಕುತ್ತಿರುವಾಗ, ಪಕ್ಕದ ಮನೆಯಲ್ಲಿ ಕಂಡುಕೊಂಡು ಮರಳಿ ತೆಗೆದುಕೊಂಡಿದ್ದಾರೆ. ಪ್ರತಿಕಾರವಾಗಿ, ಜಯಮ್ಮನ ಮಗ ಗಿರೀಶ್ ಭೂಮಿಕಾ ಮೇಲೆ ಚಾಕುವಿನಿಂದ ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾನೆ. ಗಾಯಗೊಂಡ ಭೂಮಿಕಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪೊಲೀಸರು ಆರೋಪಿಯನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ.

ಹಾಸನ: ಕೋಳಿ ಕದ್ದಿದ್ದೇಕೆ ಎಂದಿದ್ದಕ್ಕೆ ಚಾಕುವಿನಿಂದ ಮಹಿಳೆಯ ಕತ್ತು ಸೀಳಿದ ಕಿರಾತಕ!
ಹಾಸನ: ಕೋಳಿ ಕದ್ದಿದ್ದೇಕೆ ಎಂದಿದ್ದಕ್ಕೆ ಚಾಕುವಿನಿಂದ ಮಹಿಳೆಯ ಕತ್ತು ಸೀಳಿದ ಕಿರಾತಕ!
Updated By: Ganapathi Sharma

Updated on: Jun 07, 2025 | 2:45 PM

ಹಾಸನ, ಜೂನ್ 7: ಕೋಳಿ ಕದ್ದಿದ್ದನ್ನು ಪ್ರಶ್ನೆ ಮಾಡಿದ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿದ ವಿಲಕ್ಷಣ ಘಟನೆ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ತಾಳೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಭೂಮಿಕಾ ಎಂಬ ಮಹಿಳೆ ಬೆಳಿಗ್ಗೆಯೇ ಎದ್ದು ಕೋಳಿ ಕಾಣುತ್ತಿಲ್ಲ ಎಂದು ಹುಡಕಾಡಿದ್ದಾರೆ. ಎಷ್ಟೇ ಹುಡುಕಿದರೂ ಕೋಳಿಯ ಸುಳಿವು ಮಾತ್ರ ಸಿಕ್ಕಲ್ಲ. ಆದರೆ, ಅಷ್ಟರಲ್ಲಿ ಪಕ್ಕದ ಮನೆಯೊಳಗಿಂದ ಕೋಳಿಯೊಂದು ಕೊಕ್ಕರಿಸುತ್ತಿರುವ ಸದ್ದು ಕೇಳಿದೆ. ಬಸ್ ಹತ್ತಲು ಸಿದ್ಧರಾಗಿದ್ದ ಪಕ್ಕದ ಮನೆಯ ಜಯಮ್ಮ ಎಂಬವರನ್ನು ಕರೆದ ಭೂಮಿಕಾ, ‘ನಮ್ಮ ಕೋಳಿ ನಿಮ್ಮನೆಯೊಳಗಿದೆ ಬಿಟ್ಟು ಬಿಡಿ’ ಎಂದು ಹೇಳಿದ್ದಾರೆ. ಇಲ್ಲವೇ ಇಲ್ಲ ಎಂದು ಬಾಗಿಲು ತೆಗೆದ ಮಹಿಳೆಯ ಮನೆ ಒಳಗೆ ನೋಡಿದರೆ ಚೀಲದಲ್ಲಿ ಕೋಳಿ ಬಂಧಿಯಾಗಿದ್ದು ಕಾಣಿಸಿದೆ. ನಂತರ ಭೂಮಿಕಾ ಅದನ್ನು ಬಿಡಿಸಿಕೊಂಡು ಹೋಗಿದ್ದಾರೆ.

ಕೊಲೆಯತ್ನದ ಹಂತಕ್ಕೆ ‘ಕೋಳಿ’ ಜಗಳ

ಎಲ್ಲ ಆದಮೇಲೆ, ಮಧ್ಯಾಹ್ನದ ವೇಳೆಗೆ ಜಯಮ್ಮ ಮಗ ಗಿರೀಶ್ ಭೂಮಿಕಾ ಮನೆ ಬಳಿ ಬಂದಿದ್ದಲ್ಲದೆ, ‘ನನ್ನಮ್ಮನನ್ನೇ ಕಳ್ಳಿ ಎನ್ನುತ್ತೀಯಾ’ ಎಂದು ದಾಳಿ ಮಾಡಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಕುತ್ತಿಗೆ ಸೀಳಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕೂಡಲೇ ಮಹಿಳೆಯ ರಕ್ಷಣೆಗೆ ಬಂದ ಆಕೆಯ ಮಾವ ಈರೇಶ್ ಮೇಲೂ ಗಿರೀಶ್ ದಾಳಿ ಮಾಡಿದ್ದಾನೆ. ಅಲ್ಲೇ ಇದ್ದ ಊರ ಜನರು ನೆರವಿಗೆ ಬರುತ್ತಲೇ ಸ್ಥಳದಿಂದ ಪರಾರಿಯಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡ ಭೂಮಿಕಾರನ್ನು ಆಲೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿದೆ. ಸದ್ಯ ಅವರು, ಅಪಾಯದಿಂದ ಪಾರಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಕೊಲೆಮಾಡಲು ಬಂಧವನ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಗಾಯಾಳು ಮಹಿಳೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ
ಬೆಂಗಳೂರು ಕಾಲ್ತುಳಿತ: ಕೆಎಸ್​ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ
ವಿಧಾನಸೌಧ ಮುಂದೆ RCB ವಿಜಯೋತ್ಸವಕ್ಕೆ 19 ಷರತ್ತು ವಿಧಿಸಿದ್ದ ರಾಜ್ಯ ಸರ್ಕಾರ
Stampede: ಆರ್​ಸಿಬಿ ವಿರುದ್ಧ 3ನೇ ಎಫ್​ಐಆರ್​, ಹೆಚ್ಚಿದ ಸಂಕಷ್ಟ
Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ವಿರುದ್ಧ ಬಿಜೆಪಿ ದೂರು

ಅಸಲಿಗೆ, ಆರೋಪಿ ಗಿರೀಶ್ ಗಾಯಾಳು ಮಹಿಳೆಯ ಪತಿ ನಾಗೇಶ್ ಸ್ವಂತ ಚಿಕ್ಕಪ್ಪನ ಮಗನಾಗಿದ್ದಾನೆ. ಸಂಬಂಧಿಕರು ಎಂಬುದನ್ನೂ ಮರೆತು ಕ್ರೌರ್ಯ ಮರೆದಿದ್ದಾನೆ. ಮೊದಲಿಗೆ ಆರೋಪಿಯು ಕುಡಿದ ಅಮಲಿನಲ್ಲಿ ಆಸ್ತಿ ವ್ಯಾಜ್ಯದ ಹಳೆ ನೆಪ ತೆಗೆದು ಭೂಮಿಕಾ ಮಾವ ಈರಯ್ಯನ ಜೊತೆಗೆ ಜಗಳ ತೆಗೆದಿದ್ದ. ಆ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಿದ್ದ ಭೂಮಿಕಾ, ‘ನಮ್ಮ ಕೋಳಿ ನಿಮ್ಮನೆಯಲ್ಲಿತ್ತು. ನಮ್ಮ ಮಾವನ ಜೊತೆ ಜಗಳ ಮಾಡುವ ಬದಲು ನಿಮ್ಮಮ್ಮನಿಗೆ ಬುದ್ಧಿ ಹೇಳು’ ಎಂದಿದ್ದರು. ಅಮಲಿನಲ್ಲಿ ತೇಲುತ್ತಿದ್ದ ದುಷ್ಟನಿಗೆ ಅಷ್ಟು ಸಾಕಾಯ್ತು. ಏಕಾಏಕಿ ಚಾಕು ಹೊರ ತೆಗೆದು ದಾಳಿ ಮಾಡಿದ್ದಾನೆ. ಆತ ಅಷ್ಟು ಕ್ರೂರವಾಗಿ ನಡೆದುಕೊಳ್ಳಬಹುದು ಎಂಬ ಸಣ್ಣ ಸುಳಿವು ಕೂಡ ಇಲ್ಲದ ಮಹಿಳೆ ಹೇಗೋ ತಪ್ಪಿಸಿಕೊಂಡು ಬಚಾವ್ ಆಗಲು ಯತ್ನಿಸಿದ್ದಾರೆ. ಮಾವ ಈರಯ್ಯ ಕೂಡ ತಡೆಯುವ ಯತ್ನ ಮಾಡುತ್ತಲೇ ಕಿರಾತಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಇದನ್ನೂ ಓದಿ: ಹಾಸನ: ಕಾಫಿ ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದ ಮಳೆ, ಕೊಳೆ ರೋಗಕ್ಕೆ ತುತ್ತಾದ ಕಾಫಿ

ಸದ್ಯ ಆಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲುಮಾಡಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಹೀಗೆ ಸೈಕೋ ರೀತಿನಡೆದುಕೊಂಡಿರುವ ದುಷ್ಟನ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯ ಸಂಬಂಧಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Sat, 7 June 25