AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣಪತಿ ವಿಸರ್ಜನೆ ಜಟಾಪಟಿ: ಎಸ್ಪಿಗೆ ನೋಟಿಸ್​​ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ; ಡಿಸಿ ನಡೆಗೆ JDS ಶಾಸಕ ಗರಂ

ಹಾಸನದಲ್ಲಿ ಪೆಂಡಾಲ್ ಗಣಪತಿ ವಿಸರ್ಜನೆ ಹಾಗೂ ಎಸ್ಪಿಗೆ ನೀಡಿದ ನೋಟಿಸ್ ವಿಚಾರವಾಗಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಡಿಸಿ ನಡೆ ವಿರುದ್ಧ ಜೆಡಿಎಸ್​​ ಶಾಸಕ ಸ್ವರೂಪ್​​ ಪ್ರಕಾಶ್​​ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಎಸ್ಪಿಗೆ ಕೊಟ್ಟ ನೊಟೀಸ್​​ನಲ್ಲಿ ಪೆಂಡಾಲ್ ಗಣಪತಿ ಆಯೋಜಕರ ವಿರುದ್ದ ಕ್ರಮಕ್ಕೆ ಸೂಚಿಸಿದ್ದಾರೆ. ಆದರೆ ಅವರ ಆದೇಶವನ್ನ ನಾವು ಬಹಿಷ್ಕಾರ ಮಾಡ್ತೇವೆ ಎಂದಿದ್ದಾರೆ.

ಗಣಪತಿ ವಿಸರ್ಜನೆ ಜಟಾಪಟಿ: ಎಸ್ಪಿಗೆ ನೋಟಿಸ್​​ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ; ಡಿಸಿ ನಡೆಗೆ JDS ಶಾಸಕ ಗರಂ
ಶಾಶಕ ಸ್ವರೂಪ್​​ ಮತ್ತು ಹಾಸನ ಡಿಸಿ ಕೆ.ಎಸ್.ಲತಾಕುಮಾರಿImage Credit source: Tv9 Kannada
ಮಂಜುನಾಥ ಕೆಬಿ
| Edited By: |

Updated on: Oct 06, 2026 | 12:34 PM

Share

ಹಾಸನ, ಅಕ್ಟೋಬರ್​​ 06: ಪೆಂಡಾಲ್ ಗಣಪತಿ ವಿಸರ್ಜನೆ ವಿಚಾರವಾಗಿ ಹಾಸನದಲ್ಲಿ ಜಟಾಪಟಿ ಮುಂದುವರಿದಿದೆ. ಹಾಸನ SP ಶುಭನ್ವಿತಾಗೆ ನೋಟಿಸ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತಕ್ಕೆ ಸಮಸ್ಯೆ ಆಗುತ್ತಿತ್ತು. ಅದರ ಹೊಣೆ ಯಾರು ಹೊರುತ್ತಿದ್ದರು? ದೇವರ ದಯೆಯಿಂದ ಏನೂ ಆಗಿಲ್ಲ. ಗಣಪತಿ ವಿಸರ್ಜಿಸುವವರು ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಕಳೆದ ವರ್ಷ ಮೊಸಳೆಹೊಸಳ್ಳಿಯಲ್ಲಿ ಟ್ರಕ್ ಹರಿದು 11 ಜನ ಮೃತಪಟ್ಟಿದ್ರು. ತೊಂದರೆ ಆದಾಗ ಮಾತ್ರ ನಿಯಮಗಳನ್ನು ತೋರಿಸುತ್ತಾರೆ. ಅಲ್ಲಿಯವರೆಗೂ ಕಣ್ಮುಚ್ಚಿ ಕುಳಿತುಕೊಂಡಿರುತ್ತಾರೆ ಎಂದಿದ್ದಾರೆ.

‘ಪರಿಶೀಲಿಸಿ ಆದೇಶ ಕೊಡಬೇಕಿತ್ತು’

ನಿಯಮಗಳನ್ನು ಪಾಲಿಸ್ತಿಲ್ಲ, ಕಾನೂನು ಸುವ್ಯವಸ್ಥೆ ಕಾಂಪ್ರಮೈಸ್ ಆಗುತ್ತೆ. ಏನಾದರೂ ಘಟನೆ ಆದರೆ ಮಾತ್ರ ಕಾನೂನು ಸುವ್ಯವಸ್ಥೆ ಬರುತ್ತೆ. ತಹಶೀಲ್ದಾರ್‌ ವರದಿ ಸೂಕ್ಷ್ಮವಾಗಿದೆ, ಪರಿಶೀಲಿಸಿ ಆದೇಶ ಕೊಡಬೇಕಿತ್ತು. ಅದು ಆಡಳಿತಾತ್ಮಕ ವಿಚಾರ, ಅವರು ಒಬ್ಬರು ಅಧಿಕಾರಿಯಾಗಿದ್ದಾರೆ. ಅವರದ್ದೇ ಆದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಯಾವ ಅಧಿಕಾರಿಯ ಬಗ್ಗೆಯೂ ನನಗೆ ವೈಯುಕ್ತಿಕ ದ್ವೇಷ ಇಲ್ಲ. ನಾನು ಆದೇಶ ಹೊರಡಿಸಿದ್ದನ್ನು ತಹಶೀಲ್ದಾರ್, ಮತ್ತೊಬ್ಬರು ಪಾಲಿಸಬೇಕು ಎಂದು ಎಸ್‌ಪಿ ಶುಭನ್ವಿತಾ ವಿರುದ್ಧ ಹಾಸನ ಡಿಸಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಪೆಂಡಾಲ್ ಗೌರಿ-ಗಣಪತಿ ಮೂರ್ತಿ ವಿಸರ್ಜನೆ ವಿಚಾರ: ಎಸ್ಪಿಗೆ ಡಿಸಿ ಲತಾ ಕುಮಾರಿ ನೋಟಿಸ್!

‘ಡಿಸಿ ಸಚಿವರ ಮಾತನ್ನೇ ಕೇಳದ ಮಟ್ಟಕ್ಕೆ ಬಂದಿದ್ದಾರೆ’

ಮತ್ತೊಂದೆಡೆ ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಜಿಲ್ಲಾಧಿಕಾರಿಗಳ ನಡೆ ವಿರುದ್ಧ ಜೆಡಿಎಸ್​​ ಶಾಸಕ ಸ್ವರೂಪ್ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸಿ ಅವರ ಬೇಜವಾವ್ದಾರಿ ಹೇಳಿಕೆಯಿಂದ ಜನರಿಗೆ, ಭಕ್ತರಿಗೆ ನೋವಾಗಿದೆ. ಬೇರೆ ಗಣಪತಿಗಳ ವಿಸರ್ಜನೆಗೆ ಇಲ್ಲದ ಅಡ್ಡಿ ಪೆಂಡಾಲ್ ಗಣಪತಿ ವಿಸರ್ಜನೆಗೆ ಯಾಕೆ ಎಂಬುದು ನಮ್ಮ ಪ್ರಶ್ನೆ. ಎಸ್ಪಿಗೆ ಕೊಟ್ಟ ನೊಟೀಸ್​​ನಲ್ಲಿ ಪೆಂಡಾಲ್ ಗಣಪತಿ ಆಯೋಜಕರ ವಿರುದ್ದ ಕ್ರಮಕ್ಕೆ ಸೂಚಿಸಿದ್ದಾರೆ. ಆದರೆ ಅವರ ಆದೇಶವನ್ನ ನಾವು ಬಹಿಷ್ಕಾರ ಮಾಡ್ತೇವೆ. ನಿನ್ನೆ ದೇವಿಗೆರೆ ಸಂರಕ್ಷಣೆ ಅಂತಾ ಸಮಿತಿ ರಚನೆ ಮಾಡಿದಾರೆ. ಶಾಸಕನಾದ ನನ್ನ ಗಮನಕ್ಕೆ ತರದೆ ಹೀಗೆ ಮಾಡಿದ್ದಾರೆ. ಈ ಸಂಬಂಧ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದವರು ತಿಳಿಸಿದ್ದಾರೆ.

ಡಿಸಿ ಅವರ ನಿಲುವು ಖಂಡನೀಯ, ಅವರ ಉದ್ದಟತನ ನಮಗೆ ನೋವು ತಂದಿದೆ. ಅವರು ಎಸ್ಪಿ ಅವರಿಗೆ ಕೊಟ್ಟಿರುವ ನೋಟಿಸ್ ಸರಿ ಇಲ್ಲ. ಈ ವಿಚಾರದಲ್ಲಿ ಸಚಿವರು, ಸಂಸದರು ಮಧ್ಯಪ್ರವೇಶ ಮಾಡಬೇಕು. ಅಧಿಕಾರಿಗಳ ನಡುವೆ ಗೊಂದಲ ಆದರೆ ಹಾಸನಾಂಬೆ ಉತ್ಸವ ಹೇಗೆ ಮಾಡ್ತಿರಿ? ಡಿಸಿ ಅವರು ಸಚಿವರ ಮಾತನ್ನೇ ಕೇಳದ ಮಟ್ಟಕ್ಕೆ ಬಂದಿದ್ದಾರೆ. ಕೆರೆ ಸ್ಚಚ್ಛತೆ ಬಗ್ಗೆ ನಮಗೂ ಕಾಳಜಿ ಇದೆ. ಅವರ ಏಕಪಕ್ಷೀಯ ನಿಲುವು ಸರಿಯಲ್ಲ. ಪೆಂಡಾಲ್ ಗಣಪತಿ ವಿಸರ್ಜನೆ ಮೆರವಣಿಗೆಗೆ ಅಕ್ಟೋಬರ್ 3ರಂದು ಚಾಲನೆ ನೀಡಲಾಗಿತ್ತು. ಆಗ ಯಾವುದೇ ಆದೇಶ ಇರಲಿಲ್ಲ. ಕಳೆದ ವರ್ಷವೂ ಇವರೇ ಡಿಸಿ ಆಗಿದ್ರಲ್ಲ, ಆಗ ಯಾಕೆ ಕೆರೆ ಸ್ಚಚ್ಛತೆ ಬಗ್ಗೆ ಕ್ರಮ ವಹಿಸಲಿಲ್ಲ ಎಂದು ಶಾಸಕರು ಪ್ರಶ್ನಿಸಿದ್ದಾರೆ. ಇನ್ನು ಎಸ್​ಪಿಗೆ ಹಾಸನ ಡಿಸಿ ನೋಟಿಸ್​ ನೀಡಿರುವ ವಿಚಾರ ನನಗೂ ಈಗ ಗೊತ್ತಾಗಿದೆ. ಸಿಎಂ ಜೊತೆ ಚರ್ಚೆ ಮಾಡಿ ಅದನ್ನು ಬಗೆಹರಿಸುತ್ತೇನೆ ಎಂದು ಸಚಿವ ಶಿವಲಿಂಗೇಗೌಡ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು
ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು
ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ
ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ
ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?
ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?