ಎಸಿಬಿ ದಾಳಿ ತಪ್ಪಿಸುತ್ತೇವೆಂದು ರಾಜ್ಯಾದ್ಯಂತ ಅಧಿಕಾರಿಗಳ ಬಳಿ ಹಣಕ್ಕೆ ಬೇಡಿಕೆಯಿಡುತ್ತಿದ್ದ ಇಬ್ಬರು ಆರೋಪಿಗಳು ಹಾಸನದಲ್ಲಿ ಬಂಧನ!

| Updated By: sandhya thejappa

Updated on: May 28, 2022 | 2:28 PM

ಆರೋಪಿಗಳು ಅಧಿಕಾರಿಗಳಿಗೆ ಕರೆ ಮಾಡಿ ನಿಮ್ಮ ಮೇಲೆ ಎಸಿಬಿ ದಾಳಿ ನಡೆಯುತ್ತದೆ. ಇದನ್ನ ತಪ್ಪಿಸಬೇಕಾದರೆ ತಮ್ಮ ಖಾತೆಗೆ ಹಣ ಹಾಕಿ ಎಂದು ಬೇಡಿಕೆ ಇಡುತ್ತಿದ್ದರು. ಬ್ಲಾಕ್ ಮೇಲ್ ಮಾಡಿ ಹಲವರಿಂದ ಹಣ ವಸೂಲಿ ಮಾಡಿಕೊಂಡಿದ್ದಾರಂತೆ.

ಎಸಿಬಿ ದಾಳಿ ತಪ್ಪಿಸುತ್ತೇವೆಂದು ರಾಜ್ಯಾದ್ಯಂತ ಅಧಿಕಾರಿಗಳ ಬಳಿ ಹಣಕ್ಕೆ ಬೇಡಿಕೆಯಿಡುತ್ತಿದ್ದ ಇಬ್ಬರು ಆರೋಪಿಗಳು ಹಾಸನದಲ್ಲಿ ಬಂಧನ!
ಬಂಧಿತ ಆರೋಪಿಗಳು
Follow us on

ಹಾಸನ: ಎಸಿಬಿ (ACB) ಅಧಿಕಾರಿಗಳ ಸೋಗಿನಲ್ಲಿ ವಂಚಿಸುತ್ತಿದ್ದ ಇಬ್ಬರ ವಂಚಕರನ್ನು ಪೊಲೀಸರು (Police) ಅರೆಸ್ಟ್ ಮಾಡಿದ್ದಾರೆ. ಸಕಲೇಶಪುರ ತಾಲೂಕಿನ ಮುಗುಲಿ ಗ್ರಾಮದ ರಜನಿಕಾಂತ್ ಹಾಗೂ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದ ಮುರಿಗೆಪ್ಪಾ ಬಂಧನಕ್ಕೆ ಒಳಗಾಗಿದ್ದಾರೆ. ಆರೋಪಿಗಳು ರಾಜ್ಯಾದ್ಯಂತ ಅನೇಕ ಇಲಾಖೆಗಳ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು. ನಿಮ್ಮ ಮೇಲೆ ಎಸಿಬಿ ದಾಳಿ ಮಾಡಲಾಗುವುದು ಎಂದು ಫೋನ್ ಮಾಡಿ ಬೆದರಿಸಿ ಬ್ಲಾಕ್ ಮೆಲ್ ಮಾಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ.

ಆರೋಪಿಗಳು ಅಧಿಕಾರಿಗಳಿಗೆ ಕರೆ ಮಾಡಿ ನಿಮ್ಮ ಮೇಲೆ ಎಸಿಬಿ ದಾಳಿ ನಡೆಯುತ್ತದೆ. ಇದನ್ನ ತಪ್ಪಿಸಬೇಕಾದರೆ ತಮ್ಮ ಖಾತೆಗೆ ಹಣ ಹಾಕಿ ಎಂದು ಬೇಡಿಕೆ ಇಡುತ್ತಿದ್ದರು. ಬ್ಲಾಕ್ ಮೇಲ್ ಮಾಡಿ ಹಲವರಿಂದ ಹಣ ವಸೂಲಿ ಮಾಡಿಕೊಂಡಿದ್ದಾರಂತೆ. ಆನ್​ಲೈನ್​ ಮೂಲಕ ತಮ್ಮ ಖಾತೆಗೆ ಹಣ ಹಾಕಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಆರರೋಪಿ ಮುರಿಗೆಪ್ಪಾ ವಿರುದ್ಧ 40ಕ್ಕೂ ಕೇಸ್ ಇದ್ದು, ರಜಿನಿಕಾಂತ್ ಕೂಡ 6 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಇಂದು ಹಾಸನದಲ್ಲಿ ಎಸಿಬಿ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತರಿಂದ ಹಲವು ಸಿಮ್ ಕಾರ್ಡ್ ಹಾಗೂ ಮೊಬೈಲ್ಗಳನ್ನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Universal Account Number: ನಿಮ್ಮ ಇಪಿಎಫ್ ಖಾತೆಯ ಯುಎಎನ್ ಅನ್ನು ಕಂಡುಹಿಡಿಯುವುದು ಹೇಗೆ

ಇದನ್ನೂ ಓದಿ
ಪಾಶ್ಚಿಮಾತ್ಯ ರಾಷ್ಟ್ರಗಳು ನಮ್ಮ ಜನತೆ ಮತ್ತು ಸಂಸ್ಕೃತಿ ವಿರುದ್ಧ ಯುದ್ಧ ಸಾರಿವೆ: ಸೆರ್ಗೇಯಿ ಲವ್ರೋವ್, ರಷ್ಯಾ ವಿದೇಶಾಂಗ ಸಚಿವ
RR vs RCB Qualifier 2: ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣವಾಗಿದ್ದು ಈ ಒಬ್ಬ ಬೌಲರ್
NT Rama Rao Birth Anniversary: ಇವರಂಥ ಜನಪ್ರಿಯ ನಟ ಮತ್ತು ಜನಾನುರಾಗಿ ನಾಯಕ ಶತಮಾನಕ್ಕೊಬ್ಬರೇ
RR vs RCB Qualifier 2, IPL 2022: ಆರ್​ಸಿಬಿ ವಿರುದ್ಧ ಅಬ್ಬರದ ಶತಕ ಸಿಡಿಸಿ ಕೊಹ್ಲಿ ದಾಖಲೆ ಸರಿಗಟ್ಟಿದ ಬಟ್ಲರ್!

ಏಪ್ರಿಲ್ 29ಕ್ಕೆ ಬಾಗಲಕೋಟೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೂ ಕರೆ ಮಾಡಿದ್ದರು. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಎಇಇ ಈಶ್ವರ ಕುರಬಗಟ್ಟಿ ದೂರು ದಾಖಲಿಸಿದ್ದರು.

ನಕಲಿ ಎಸಿಬಿ ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚನೆ:
ಗದಗ ಎಸಿಬಿ ಡಿವೈಎಸ್‌ಪಿ ಎಮ್ ವಿ ಮಲ್ಲಾಪುರ ಹೆಸರಲ್ಲಿ ಫೋನ್ ಮಾಡಿ ಗದಗ ಜಿಲ್ಲೆಯ ರೋಣ ತಹಶೀಲ್ದಾರ್ ಸೇರಿದಂತೆ ಅನೇಕರಿಗೆ ಹಣದ ಬೇಡಿಕೆ ಇಟ್ಟಿದ್ದರು. ಬಾಗಲಕೋಟೆ ಎಸ್‌ಪಿ ಲೋಕೇಶ್ ಜಗಲಾಸರ್, ಹಾಸನ ಎಸ್‌ಪಿ ಆರ್.ಶ್ರೀನಿವಾಸ್‌ಗೌಡ, ಬೆಳಗಾವಿ ಎಸಿಬಿ ಉತ್ತರ ವಲಯದ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ, ಮೈಸೂರು ಎಸಿಬಿ ದಕ್ಷಿಣ ವಲಯದ ಪೊಲೀಸ್ ಅಧೀಕ್ಷಕ ಸಜೀತ ವಿ.ಜೆ. ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ತಲಾಶ್ ನಡೆಸಿ ಸದ್ಯ ಇಬ್ಬರನ್ನ ಅರೆಸ್ಟ್ ಮಾಡಲಾಗಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:22 am, Sat, 28 May 22