ಡ್ಯೂಟಿ ಮುಗಿಸಿಕೊಂಡು ಮನೆಗೆ ಹೋಗುವಾಗ ಪೊಲೀಸರು ಟ್ರಿಪಲ್ ರೈಡ್ ಹೋಗಬಹುದು! ಹೆಲ್ಮೆಟ್ ಅಗತ್ಯವೂ ಇಲ್ಲ!!
ಅಸಲಿಗೆ ನಿವಾಸಿ ಅವರನ್ನು ಓವರ್ ಟೇಕ್ ಮಾಡಿ ‘ಏನ್ ಸ್ವಾಮಿ ಇದು,’ ಅಂತ ಕೇಳಿದರಂತೆ. ಅದಕ್ಕವರು ‘ಡ್ಯೂಟಿ ಮುಗುಸ್ಕೊಂಡ್ ಮನೆಗ್ ಹೋಗ್ತಿದ್ದೀವಿ,’ ಅಂದರಂತೆ. ಡ್ಯೂಟಿ ಅವರ್ಸ್ ಮುಗಿಸಿಕೊಂಡು ಮನೆಗೆ ಹೋಗುವ ಪೊಲೀಸರಿಗೆ ಹೆಲ್ಮೆಟ್ ಇಲ್ಲದೆ, ಟ್ರಿಪಲ್ ರೈಡ್ ಹೋಗುವ ಅವಕಾಶ ಕಲ್ಪಿಸಲಾಗಿದೆಯೇ ಅಂತ ಅವರು ಕೇಳುತ್ತಾರೆ.
Bengaluru: ಒಂದು ಬೈಕು, ಅದರ ಮೇಲೆ ಒಬ್ಬ ಪೊಲೀಸಪ್ಪ ಅಂತೇನಾದ್ರೂ ನಾವು ಹೇಳಿದ್ದರೆ ಇದ್ಯಾವ ಸೀಮೆ ಸುದ್ದಿ ಸ್ವಾಮಿ ನಿಮ್ಗೆ ಬೇರೆ ಸುದ್ದಿ ಸಿಕ್ಕಲ್ವಾ ಅಂತ ನೀವು ಕೇಳಿರೋರು, ಹೌದು ತಾನೆ? ಆದರೆ ಕತೆ ಅದಲ್ಲ ಮಾರಾಯ್ರೇ. ಅದೇ ಬೈಕ್ ಮೇಲೆ ಇಬ್ಬರು ಪೋಲಿಸಮ್ಮಗಳು! ಅಂದರೆ ಒಂದು ದ್ವಿಚಕ್ರ ವಾಹನದ (two-wheeler) ಮೇಲೆ ಒಬ್ಬ ಪೊಲೀಸಪ್ಪ ಮತ್ತು ಇಬ್ಬರು ಪೊಲೀಸಮ್ಮಗಳು. ಪೊಲೀಸಪ್ಪನ ತಲೆ ಮೇಲೆ ಹೆಲ್ಮೆಟ್ ಇದೆ ಅದರೆ ಅಮ್ಮಂದಿರ ತಲೆಗಳ ಮೇಲೆ ಇಲ್ಲ. ಈ ದೃಶ್ಯ ಕಂಡುಬಂದಿದ್ದು ಬೆಂಗಳೂರಿನ ಟಿನ್ ಫ್ಯಾಕ್ಟರಿ (tin factory) ಮತ್ತು ಕೆಅರ್ ಪುರಂ (KR Puram) ನಡುವಿನ ರಸ್ತೆಯಲ್ಲಿ. ಈ ಬೈಕ್ ಹಿಂದೆ ಹೋಗುತ್ತಿದ್ದ ಬೆಂಗಳೂರಿನ ನಿವಾಸಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಪೊಲೀಸರ ಧೋರಣೆಯನ್ನು ಟೀಕಿಸುತ್ತಾ ಅವರು ಲೈವ್ ಕಾಮೆಂಟರಿಯನ್ನೂ ನೀಡುತ್ತಿದ್ದಾರೆ. ಸಾರ್ವಜನಿಕರಿಗೊಂದು ಕಾನೂನು ಪೊಲೀಸರಿಗೊಂದು ಕಾನೂನಾ? ನಾವು ಏನಾದರೂ ಹೀಗೆ ಹೋಗಿದ್ದರೆ, ಟ್ರಿಪಲ್ ರೈಡ್, ವಿದೌಟ್ ಹೆಲ್ಮಟ್, ರೆಕ್ಲೆಸ್ ರೈಡಿಂಗ್ ಅಂತೆಲ್ಲ ಜುಲ್ಮಾನೆ ವಿಧಿಸಿರೋರು, ಇವರನ್ನು ಕೇಳೋರು ಯಾರೂ ಇಲ್ವಾ? ಅಂತ ನಿವಾಸಿ ಹೇಳುತ್ತಿದ್ದಾರೆ.
ಅಸಲಿಗೆ ನಿವಾಸಿ ಅವರನ್ನು ಓವರ್ ಟೇಕ್ ಮಾಡಿ ‘ಏನ್ ಸ್ವಾಮಿ ಇದು,’ ಅಂತ ಕೇಳಿದರಂತೆ. ಅದಕ್ಕವರು ‘ಡ್ಯೂಟಿ ಮುಗುಸ್ಕೊಂಡ್ ಮನೆಗ್ ಹೋಗ್ತಿದ್ದೀವಿ,’ ಅಂದರಂತೆ. ಡ್ಯೂಟಿ ಅವರ್ಸ್ ಮುಗಿಸಿಕೊಂಡು ಮನೆಗೆ ಹೋಗುವ ಪೊಲೀಸರಿಗೆ ಹೆಲ್ಮೆಟ್ ಇಲ್ಲದೆ, ಟ್ರಿಪಲ್ ರೈಡ್ ಹೋಗುವ ಅವಕಾಶ ಕಲ್ಪಿಸಲಾಗಿದೆಯೇ ಅಂತ ಅವರು ಕೇಳುತ್ತಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾನಲ್ಲಿ ಪೋಸ್ಟ್ ಮಾಡುವೆ ಅಂತ ಅವರು ಹೇಳುವುದನ್ನು ಕೇಳಿಸಿಕೊಳ್ಳಬಹುದು. ಪೊಲೀಸರು ಟ್ರಿಪಲ್ ಸವಾರಿ ಮಾಡುತ್ತಿರುವ ಗಾಡಿಯ ರಿಜಿಸ್ಟ್ರೇಷನ್ ನಂಬರ್, ಮೇಕ್ ಮೊದಲಾದವುಗಳ ವಿವರ ಸಹ ಅವರು ನೀಡುತ್ತಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.