AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸವಕಲ್ಯಾಣದ ಪೀರ್​ಪಾಶಾ ದರ್ಗಾನಲ್ಲಿ ಅನುಭವ ಮಂಟಪದ ಕುರುಹು ಕಾಣುತ್ತಿವೆ ಎನ್ನುತ್ತಾರೆ ಲಿಂಗಾಯತ ಸಮುದಾಯದವರು

ಬಸವಕಲ್ಯಾಣದ ಪೀರ್​ಪಾಶಾ ದರ್ಗಾನಲ್ಲಿ ಅನುಭವ ಮಂಟಪದ ಕುರುಹು ಕಾಣುತ್ತಿವೆ ಎನ್ನುತ್ತಾರೆ ಲಿಂಗಾಯತ ಸಮುದಾಯದವರು

TV9 Web
| Edited By: |

Updated on: May 27, 2022 | 6:47 PM

Share

12 ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರು ಬಸವಕಲ್ಯಾಣನಲ್ಲಿ ಅನುಭವ ಮಂಟಪ ನಿರ್ಮಿಸಿದ್ದು ಕನ್ನಡಿಗರಿಗೆಲ್ಲ ಗೊತ್ತಿದೆ. ಇದನ್ನು ವಿಶ್ವದ ಮೊಟ್ಟಮೊದಲ ಸಂಸತ್ತು ಅಂತ ಉಲ್ಲೇಖಿಸುವುದು ಪ್ರಾಯಶಃ ಬಹಳ ಜನಕ್ಕೆ ಗೊತ್ತಿರಲಾರದು.

Bidar: ವಾರಣಾಶಿ ಜ್ಞಾನವಾಪಿ ಮಸೀದಿ, ಶ್ರೀರಂಗಪಟ್ಟಣದ ಜುಮಾ ಮಸೀದಿ, ಮಂಗಳೂರಿನ ಮಳಲಿ ಮಸೀದಿಯ ಬಳಿಕ ಈಗ ಬೀದರ್ ಜಿಲ್ಲೆ ಬಸವಕಲ್ಯಾಣನಲ್ಲಿರುವ ಹಜರತ್ ಪೀರ್ ಪಾಶಾ ದರ್ಗಾ (Peer Pasha Dargah) ಸುದ್ದಿಯಲ್ಲಿದೆ. ಈ ಭಾಗದ ಲಿಂಗಾಯತ ಸಮುದಾಯದವರು (Lingayat community) ಹೇಳುವ ಪ್ರಕಾರ ಸುಮಾರು ನಾಲ್ಕು ಎಕರೆ ವಿಸ್ತೀರ್ಣದಲ್ಲಿ ಹಬ್ಬಿರುವ ದರ್ಗಾ ಪ್ರದೇಶದಲ್ಲಿ 12 ನೇ ಶತಮಾನದ ಅನುಭವ ಮಂಟಪದ (Anubhava Mantapa) ಕುರುಹುಗಳು ಪತ್ತೆಯಾಗಿವೆ. ಹೈದರಾಬಾದ್-ಕರ್ನಾಟಕ ಪ್ರದೇಶ ಹೈದರಾಬಾದಿನ ನಿಜಾಮ್ ನವಾಬರ ಆಳ್ವಿಕೆಗೆ ಒಳಪಟ್ಟಿತ್ತು. ಇತಿಹಾಸದ ಪುಟಗಳನ್ನು ತಿರುವಿದರೆ ನಿಜಾಮರು ಮತ್ತು ಅವರ ರಜಾಕ್ ಪಡೆ ದಬ್ಬಾಳಿಕೆ ನಡೆಸಿದ ವಿವರಗಳು ಸಿಗುತ್ತವೆ.

ಈ ವಿಡಿಯೋನಲ್ಲಿ ಲಿಂಗಾಯತ ಸಮುದಾಯದ ಪ್ರತಿನಿಧಿಗಳು ಅನುಭವ ಮಂಟಪ ಮತ್ತು ದೇವರ ವಿಗ್ರಹದ ಕುರುಹುಗಳನ್ನು ಕೆಮೆರಾಗೆ ತೋರಿಸುತ್ತಿದ್ದಾರೆ. ದರ್ಗಾ ಇರುವ ಪ್ರದೇಶವನ್ನು ಸರ್ವೇ ಮಾಡಿಸಬೇಕು ಮತ್ತು ನಿಜಾಮರು ಅನುಭವ ಮಂಟಪವನ್ನು ಕೆಡವಿ ದರ್ಗಾ ನಿರ್ಮಿಸಿದ್ದರೆ ಸರ್ಕಾತ ದರ್ಗಾವನ್ನು ತೆರವು ಮಾಡಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.

12 ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರು ಬಸವಕಲ್ಯಾಣನಲ್ಲಿ ಅನುಭವ ಮಂಟಪ ನಿರ್ಮಿಸಿದ್ದು ಕನ್ನಡಿಗರಿಗೆಲ್ಲ ಗೊತ್ತಿದೆ. ಇದನ್ನು ವಿಶ್ವದ ಮೊಟ್ಟಮೊದಲ ಸಂಸತ್ತು ಅಂತ ಉಲ್ಲೇಖಿಸುವುದು ಪ್ರಾಯಶಃ ಬಹಳ ಜನಕ್ಕೆ ಗೊತ್ತಿರಲಾರದು. ಈ ಅನುಭವ ಮಂಟಪದಲ್ಲಿ ಬಸವಣ್ಣನವರು; ಅಕ್ಕಮಹಾದೇವಿ, ಅಲ್ಲಮಪ್ರಭು, ಚೆನ್ನಬಸವಣ್ಣ ಮತ್ತು ಆಗಿನ ಸಾಮಾಜಿಕ ಮುಖಂಡರ ಜೊತೆ ಚರ್ಚೆಗಳನ್ನು ನಡೆಸುತ್ತಿದ್ದರು. ಮಂಟಪದಲ್ಲಿ ಜಾತಿ ಧರ್ಮಗಳ ತಾರತಮ್ಯವಿರಲಿಲ್ಲ. ಎಲ್ಲ ಜಾತಿಗಳ ಜನ ಸಭೆ, ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು.

ಅಂಥ ಮಹಾಮನೆಯನ್ನು (ಅನುಭವ ಮಂಟಪದ ಇನ್ನೊಂದು ಹೆಸರು) ನಿಜಾಮರು ಕೆಡವಿ ದರ್ಗಾ ನಿರ್ಮಿಸಿರುವ ಸಾಧ್ಯತೆಯಿದೆ ಎಂದು ಲಿಂಗಾಯತ ಸಮುದಾಯದವರು ಹೇಳುತ್ತಿದ್ದಾರೆ. ಅವರ ವಾದದ ಹಿನ್ನೆಲೆಯಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅಂತ ಕಾದು ನೋಡಬೇಕು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.