ದರೋಜಿ ಧಾಮದಿಂದ ತಪ್ಪಿಸಿಕೊಂಡು ಊರೊಳಗೆ ಬಂದ ಕರಡಿ ಮರವೇರಿ ಕುಳಿತ ಮೇಲೆ ಕೆಳಗಿಳಿಯಲೇ ಇಲ್ಲ

ಸಮಸ್ಯೆ ಶುರುವಾಗಿದ್ದೇ ಆಗ. ಅದನ್ನು ಕೆಳಗಿಳಿಸುವುದು ಹೇಗೆ? ಕರಡಿ ಮರದ ಮೇಲೆ ಊರ ಜನರೆಲ್ಲ ಮರದ ಕೆಳಗೆ! ಆದರೆ, ಅದರ ಹತ್ತಿರ ಹೋಗುವಂತಿಲ್ಲ ಮಾರಾಯ್ರೇ, ಯಾಕೆಂದರೆ ಕರಡಿ ಆಕ್ರಮಣ ಮಾರಣಾಂತಿಕವಾಗಿರುತ್ತದೆ

TV9kannada Web Team

| Edited By: Arun Belly

May 27, 2022 | 8:56 PM

ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನಲ್ಲಿರುವ ಕರೇಕುಪ್ಪ (Karekuppa) ಗ್ರಾಮದ ಜನರಿಗೆ ಶುಕ್ರವಾರದಂದು ಪುಕ್ಕಟೆ ಮನರಂಜನೆ ಸಿಕ್ಕಿತು ಮಾರಾಯ್ರೇ. ಗ್ರಾಮಸ್ಥರಿಗೆ ಫುಲ್ ಆನ್ ಎಂಟರ್ಟೇನ್ಮೆಂಟ್ ಒದಗಿಸಿದ್ದು ಒಂದು ಕರಡಿ. ಇಷ್ಟರವರೆಗೆ ನಾವು ಹುಲಿ, ಚಿರತೆ, ಕಾಡಾನೆಗಳು ಜನವಸತಿ ಪ್ರದೇಶ ಪ್ರವೇಶಿಸಿ ಜನರಿಗೆ ಕಾಟ ಕೊಡುತ್ತಿದ್ದನ್ನು ನೋಡುತ್ತಿದ್ದೆವು. ಈ ಎಲೀಟ್ ಗುಂಪಿಗೆ ಈಗ ಕರಡಿ ಸೇರಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕರಡಿ ಆಹಾರವನ್ನರಿಸಿಕೊಂಡು ಹತ್ತಿರದ ದರೋಜಿ ಕರಡಿ ಧಾಮದಿಂದ ತಪ್ಪಿಸಿಕೊಂಡು ಬಂದಿದೆ. ಹಾಗೆ ಬಂದ ಕರಡಿ ಊರಲ್ಲಿ ಸುಮ್ಮನೆ ಒಂದು ಸುತ್ತು ತಿರುಗಿ ವಾಪಸ್ಸು ಹೋಗಿದ್ದರೆ ಚೆನ್ನಾಗಿತ್ತು. ಆದರೆ ಜನರ ಗದ್ದಲದಿಂದ ಕಂಗೆಟ್ಟ ಅದು ಪ್ರಾಯಶಃ ಹೆದರಿ ಮರ ಹತ್ತಿ ಕುಳಿತುಬಿಟ್ಟಿದೆ.

ಸಮಸ್ಯೆ ಶುರುವಾಗಿದ್ದೇ ಆಗ. ಅದನ್ನು ಕೆಳಗಿಳಿಸುವುದು ಹೇಗೆ? ಕರಡಿ ಮರದ ಮೇಲೆ ಊರ ಜನರೆಲ್ಲ ಮರದ ಕೆಳಗೆ! ಆದರೆ, ಅದರ ಹತ್ತಿರ ಹೋಗುವಂತಿಲ್ಲ ಮಾರಾಯ್ರೇ, ಯಾಕೆಂದರೆ ಕರಡಿ ಆಕ್ರಮಣ ಮಾರಣಾಂತಿಕವಾಗಿರುತ್ತದೆ. ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜೊತೆ, ದರೋಜಿ ಕರಡಿ ಧಾಮದ ಸಿಬ್ಬಂದಿ ಕೂಡ ಮರದ ಕೆಳಗೆ ಘೇರಾಯಿಸಿದ್ದಾರೆ. ಕರಡಿ ಮಾತ್ರ ಕ್ಯಾರೆ ಅನ್ನುತ್ತಿಲ್ಲ. ಸಾಯಂಕಾಲದವರೆಗೆ ಅದನ್ನು ಕೆಳಗಿಳಿಸುವ ಪ್ರಯತ್ನ ಸಾಕಾರಗೊಂಡಿರಲಿಲ್ಲ.

ಸಂಡೂರು ತಾಲ್ಲೂಕು ದರೋಜಿ ಮತ್ತು ಹೊಸಪೇಟೆ ತಾಲೂಕಿನ ರಾಮಸಾಗರ ನಡುವೆ ಇರುವ ಬಂಡೆಗಳಿಂದ ಆವೃತವಾಗಿರುವ ವಿಸ್ತಾರವಾದ ಪ್ರದೇಶ ಭಾರತೀಯ ಕರಡಿಗಳ ವಾಸಸ್ಥಾನವಾಗಿದೆ. ಅಕ್ಟೋಬರ್ 1994 ರಲ್ಲಿ, ಕರ್ನಾಟಕ ಸರ್ಕಾರವು 5,587.30 ಹೆಕ್ಟೇರ್ ಬಿಳಿಕಲ್ಲು ಮೀಸಲು ಅರಣ್ಯವನ್ನು ದರೋಜಿ ಕರಡಿ ಅಭಯಾರಣ್ಯವೆಂದು ಘೋಷಿಸಿತು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Click on your DTH Provider to Add TV9 Kannada