Bhagavad Gita: ಶಾಲೆಗಳಲ್ಲಿ ಭಗವಗ್ದೀತೆ ಬೋಧನೆ -ಮಾಜಿ ಸಿಎಂ ಕುಮಾರಸ್ವಾಮಿ ಅಪಸ್ವರ, ಶಿಕ್ಷಣಕ್ಕೆ ಒತ್ತು ನೀಡಿ ಎಂದರು

HD Kumaraswamy: ಭಗವದ್ಗೀತೆಯಲ್ಲಿ ಇರೋದು ಧರ್ಮೋ ರಕ್ಷತಿ ರಕ್ಷಿತಃ. ಕುಟುಂಬದಲ್ಲಿ ನೆಮ್ಮದಿ ಸಾಮರಸ್ಯದ ಜೀವನ ಬೇಕು. ರಾಜ್ಯದಲ್ಲಿ ಸಮಸ್ಯೆಗಳು ಸಾಕಷ್ಟು ಇವೆ, ರೈತರ ಕಷ್ಟ ಇದೆ, ಈ ಬಗ್ಗೆ ಸರ್ಕಾರ ಗಮನಹರಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದರು.

Bhagavad Gita: ಶಾಲೆಗಳಲ್ಲಿ ಭಗವಗ್ದೀತೆ ಬೋಧನೆ -ಮಾಜಿ ಸಿಎಂ ಕುಮಾರಸ್ವಾಮಿ ಅಪಸ್ವರ, ಶಿಕ್ಷಣಕ್ಕೆ ಒತ್ತು ನೀಡಿ ಎಂದರು
ಹೆಚ್​ಡಿ ಕುಮಾರಸ್ವಾಮಿ
Follow us
| Updated By: ಸಾಧು ಶ್ರೀನಾಥ್​

Updated on:Mar 18, 2022 | 4:41 PM

ಹಾಸನ: ರಾಜ್ಯದಲ್ಲಿಯೂ ವಿದ್ಯಾರ್ಥಿಗಳಿಗೆ ಭಗವಗ್ದೀತೆ ಬೋಧನೆ (Bhagavad Gita in schools) ಮಾಡುವ ವಿಚಾರ ಚರ್ಚೆಯಲ್ಲಿದ್ದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅಪಸ್ವರ ಎತ್ತಿದ್ದಾರೆ. ನಮಗೆ ಬೇಕಿರುವುದು ಜನರಿಗೆ ಬದುಕನ್ನ ಕಟ್ಟಿ ಕೊಡುವ ಕಾರ್ಯಕ್ರಮ. ಅಲ್ಲೆಲ್ಲೋ ಗುಜರಾತ್ ನಲ್ಲಿ (Gujarat) ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಇಡುತ್ತಾರೆಂಬ ವಿಚಾರ ಇಲ್ಲೂ ಚರ್ಚೆ ಆರಂಭ ಆಗುವಂತೆ ಮಾಡಿದೆ. ನಮ್ಮ ಸಂಸ್ಕತಿಯಲ್ಲಿ ಭಗವಗ್ದೀತೆಯನ್ನ ಕುಟುಂಬದಲ್ಲೇ ಹೇಳಿಕೊಡ್ತಾರೆ. ಮಕ್ಕಳ ಬದುಕು ಕಟ್ಟಿಕೊಡೋದಕ್ಕೆ ಸರ್ಕಾರ ಇರೋದು ಎಂದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಟಿ ಮಾಯಗೌಡನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ಮಕ್ಕಳ ಭವಿಷ್ಯ ನಿರ್ಮಾಣದ ಕಡೆ ಗಮನ ನೀಡಿ ಎಂದು ಎಚ್ಚರಿಸಿದ ಕುಮಾರಸ್ವಾಮಿ: ಮಕ್ಕಳ ಭವಿಷ್ಯ ನಿರ್ಮಾಣ ಮಾಡೋ ರೀತಿಯ ವಿಚಾರ ಶಾಲೆಗಳಲ್ಲಿ ಇರಬೇಕು. ನಾನು ಹಿಂದೂ ಬಂಧುಗಳಲ್ಲಿ ಮನವಿ ಮಾಡುತ್ತೇನೆ, ನಾವು ಹುಟ್ಟಿರೋದು ಹಿಂದೂ ಕುಟುಂಬದಲ್ಲೇ. ನಮ್ಮ ಕುಟುಂಬಗಳಲ್ಲಿ ಇರುವಷ್ಟು ದೈವಭಕ್ತಿ, ನಂಬಿಗೆ ಇಡೀ ದೇಶದಲ್ಲಿ ಇಲ್ಲ. ರಾಜ್ಯದಲ್ಲಿ ಕೇವಲ ಮತ ಬ್ಯಾಂಕ್ ಗಾಗಿ ಇಂತಹ ವಿಚಾರಗಳು ನಡೆಯುತ್ತಿವೆ. ಒಂದು ಕಾಲದಲ್ಲಿ ವಿದ್ಯೆ ಒಂದು ವರ್ಗಕ್ಕೆ ಸೇರಿದ್ದು ಎನ್ನೋ ವಾತಾವರಣ ಇತ್ತು. ಅದೇ ವರ್ಗದ ಜನವೇ ಈ ರೀತಿಯ ವಾತಾವರಣ ಎಲ್ಲರ ಮೇಲೂ ಹೇರಲು ಹೊರಟಿದ್ದಾರೆ. ಮಕ್ಕಳು ಅವರ ಜ್ಞಾನ ಬೆಳೆಸಿಕೊಳ್ಳಲು ಇರೋ ನ್ಯೂನ್ಯತೆ ಸರಿಪಡಿಸಬೇಕು. ಭಗವದ್ಗೀತೆಯಲ್ಲಿ ಇರೋದು ಧರ್ಮೋ ರಕ್ಷತಿ ರಕ್ಷಿತಃ. ಕುಟುಂಬದಲ್ಲಿ ನೆಮ್ಮದಿ ಸಾಮರಸ್ಯದ ಜೀವನ ಬೇಕು. ರಾಜ್ಯದಲ್ಲಿ ಸಮಸ್ಯೆಗಳು ಸಾಕಷ್ಟು ಇವೆ, ರೈತರ ಕಷ್ಟ ಇದೆ, ಈ ಬಗ್ಗೆ ಸರ್ಕಾರ ಗಮನಹರಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದರು.

ಹಿಜಾಬ್‌ ಯಾಕೆ ದೊಡ್ಡದು ಮಾಡ್ತೀರಾ… ಸರ್ಕಾರವೇ ಈ ಬಗ್ಗೆ ಕಾಂಪ್ರೊಮೈಸ್ ಮಾಡಲು ಮುಂದಾಗಲಿ: ಹಿಜಾಬ್‌ ಸಂಬಂಧ ನಾನು ನೀಡಿದ್ದ ಹೇಳಿಕೆ ತಿರುಚಲಾಗಿದೆ. ಹೈಕೋರ್ಟ್‌ನ ತೀರ್ಪನ್ನು ತಲೆಬಾಗಿ ಸ್ವೀಕರಿಸಬೇಕೆಂದಿದ್ದೆ. ಸರ್ಕಾರಿ ಶಾಲೆಯಲ್ಲಿ ಸಮವಸ್ತ್ರ ನಿಯಮ ಪಿಯುವರೆಗಿದೆ. ಈ ಗೊಂದಲ ನಿವಾರಣೆಗೆ ಸರ್ಕಾರ ಪ್ರಯತ್ನ ಮಾಡಬೇಕು. ಹೈಕೋರ್ಟ್ ಇದರ ಹಿಂದೆ ಕಾಣದ ಕೈ ಇದೆ ಎಂದು ಹೇಳಿದೆ. ಸರ್ಕಾರ ಆ ಕಾಣದ ಕೈಗಳನ್ನ ಗುರ್ತಿಸಲಿ. ಹಿಜಾಬ್‌ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಅಗತ್ಯವಿದೆ. ಶಾಲಾ ಮಕ್ಕಳು ಹಾಲಿನಂತಾ ಪರಿಶುದ್ಧ ಮನಸ್ಸಿನವರು, ಅದನ್ನ ಕಲುಷಿತ ಮಾಡಬೇಡಿ.

ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಸರ್ಕಾರ ಆರೂವರೆ ಕೋಟಿ ಜನರಿಗೆ ಇದೆ, ಅವರಿಗಾಗಿ ಕೆಲಸ ಮಾಡಬೇಕು. ಸರ್ಕಾರವೇ ಕೊಟ್ಟ ಯೂನಿಫಾರ್ಮ್ ದುಪ್ಪಟ್ಟಾವನ್ನು ಹೆಣ್ಣು ಮಕ್ಕಳು ತಲೆ ಮೇಲೆ‌ ಸುತ್ತಿ ಹಾಕಿಕೊಳ್ಳಲಿ ಬಿಡಿ. ಇದನ್ನ ಅವರು ನೆರಳಿಗಾಗಿಯೊ, ಧೂಳಿಗಾಗಿ ಹಾಕೊತ್ತಾರೋ ಗೊತ್ತಿಲ್ಲ. ಕಸ್ತೂರಬಾ, ಮದರ್ ತೆರೆಸಾ ಹಾಕುತ್ತಿರಲಿಲ್ಲವಾ ಅದನ್ನೇ ಯಾಕೆ ದೊಡ್ಡದು ಮಾಡ್ತೀರಾ. ಸರ್ಕಾರವೇ ಈ ಬಗ್ಗೆ ಕಾಂಪ್ರೊಮೈಸ್ ಮಾಡಲು ಮುಂದಾಗಲಿ ಎಂದೂ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಟಿ. ಮಾಯಗೌಡನಹಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದರು.

ಇದನ್ನೂ ಓದಿ: ಸೋದರಿಯರ ಮದುವೆ ಸಾಲ ತೀರಿಸಲು ಶಾಲೆಯ ಹಣ ಬಳಸಿಕೊಂಡ ಮುಖ್ಯ ಶಿಕ್ಷಕ; 36 ಲಕ್ಷ ರೂ ಲೂಟಿ, ಸೈಬರ್ ಕ್ರೈಂ ಠಾಣೆಗೆ ದೂರು

Published On - 3:37 pm, Fri, 18 March 22