ಹಾಸನ, ಮೇ.22: ‘ನನಗೆ ದೇವರ ಆಶೀರ್ವಾದ ಇದೆ. ಹಾಸನ(Hassan) ಜಿಲ್ಲೆಯ ಜನರು ಯಾರೂ ಕೂಡ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಹೆಚ್ಡಿ ರೇವಣ್ಣ(HD Revanna) ಹೇಳಿದರು. ‘ನಾನು ಜಿಲ್ಲೆಯ ಜನತೆಗೆ ಋಣಿಯಾಗಿ ಇದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ, ಅಧಿಕಾರಕ್ಕಾಗಿ ಹೋರಾಟ ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಗೆಲುವು-ಸೋಲು ಸಹಜ. ನಮ್ಮ ತಂದೆ ದೇವೇಗೌಡರು ರಾಜಕೀಯವಾಗಿ ನೆಲೆ ಊರಲು ಈ ಜಿಲ್ಲೆಯೇ ಕಾರಣ ಎಂದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಹಾಸನದಲ್ಲಿ ಶಾಸಕರಾದ ಎ ಮಂಜು, ಸ್ವರೂಪ್ ಪ್ರಕಾಶ್ ಹಾಗೂ ಅಭ್ಯರ್ಥಿ ವಿವೇಕಾನಂದ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನಿನ್ನೆ ಮೈಸೂರಿನಲ್ಲಿ ಸಭೆ ನಡೆಸಲಾಗಿದೆ. ಶಿಕ್ಷಣಕ್ಕೆ ಈ ರಾಜ್ಯದಲ್ಲಿ ಒತ್ತುಕೊಟ್ಟು ಹೊಸ ಪದವಿ , ಹೈಸ್ಕೂಲ್, ಪದವಿ ಪೂರ್ವ ಕಾಲೇಜು ಸ್ಥಾಪನೆ ಮಾಡಿದ್ದು ಮಾಜಿ ಸಿಎಂ ಕುಮಾರಸ್ವಾಮಿ. ಶಾಲಾ ಶಿಕ್ಣಕರು, ಪದವಿ ಉಪನ್ಯಾಸ ಕರ ನೇಮಕ ಮಾಡಿದ್ದೂ ಕೂಡ ಕುಮಾರಸ್ವಾಮಿ ಅವರ ಕಾಲದಲ್ಲಿ. ಜೊತೆಗೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಸೇರಿ ಶಿಕ್ಷಣಕ್ಕೆ ಕ್ರಾಂತಿಕಾರಕ ಬದಲಾವಣೆ ಮಾಡಿದ್ದರು.
ಇದನ್ನೂ ಓದಿ:ಪುತ್ರ ಪ್ರಜ್ವಲ್ ವಿರುದ್ಧದ ಆರೋಪದ ಕುರಿತು ಹೆಚ್ಡಿ ರೇವಣ್ಣ ಮೊದಲ ಬಾರಿಗೆ ಹೇಳಿದ್ದಿಷ್ಟು
ಈ ಹಿಂದೆ ಇದ್ದವರು ಗೆಲ್ಲಿಸಿದ ಬಳಿಕ ತಿರುಗಿ ನೋಡ್ತಾ ಇರಲಿಲ್ಲ. ಈಗ ನಮ್ಮ ಅಭ್ಯರ್ಥಿ, ತಮ್ಮ ಸಂಬಳ ಸೇರಿದಂತೆ ಸಂಪೂರ್ಣ ಅನುದಾನ ಶಿಕ್ಷಕರಿಗೆ ಮೀಸಲಿಡೊದಾಗಿ ಹೇಳಿದ್ದಾರೆ. ಹೀಗೆ ಘೋಷಣೆ ಮಾಡಿದ ವ್ಯಕ್ತಿ ಹಿಂದೆ ಯಾರು ಇರಲಿಲ್ಲ ಎಂದು ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ಈಗ ಕಾಂಗ್ರೆಸ್ನಿಂದ ನಿಂತಿರುವ ವ್ಯಕ್ತಿ ಇಲ್ಲೇ ಇದ್ದು, ಸಕಲ ಸವಲತ್ತು ಅನುಭವಿಸಿದರು. ಈ ಜಿಲ್ಲೆಗೆ ಅವರ ಕೊಡುಗೆ ಏನು? ಈ ಸರ್ಕಾರ ಬಂದ ಬಳಿಕ ಶಿಕ್ಷಣ ಕ್ಷೇತ್ರ ಕುಸಿಯುತ್ತಿದೆ. ನಮ್ಮ ಪಕ್ಷದ ಅಭ್ಯರ್ಥಿ ವಿವೇಕಾನಂದಗೆ ಮತ ನೀಡಿ ಎಂದು ಮನವಿ ಮಾಡಿದರು. ಇನ್ನು ಶೀಘ್ರವಾಗಿ ಬಿಜೆಪಿ-ಜೆಡಿಎಸ್ ನಾಯಕರ ಜಂಟಿ ಸಭೆ ನಡೆಸುತ್ತೇವೆ. ನಮ್ಮ ಜಿಲ್ಲೆಗೆ ಕಾಂಗ್ರೆಸ್ನಿಂದ ಐಐಟಿ ತಪ್ಪಿ ಹೋಗಿದೆ. ಅವರು ಅಂದು ನಮ್ಮ ಜಿಲ್ಲೆಯ ಪಟ್ಟಿ ಕಳಿಸಿದ್ರೆ ಆಗಿರೋದು. ರಾಜಕಾರಣದಲ್ಲಿ ಕೃತಜ್ಞತೆ ಇರಬೇಕು. ಓರ್ವ ಸಾಮಾನ್ಯನನ್ನ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದರು ಎಂದು ಹೆಸರು ಹೇಳದೆ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ವಿರುದ್ಧ ರೇವಣ್ಣ ಟೀಕೆ ಮಾಡಿದ್ದಾರೆ.
ಈ ಸರ್ಕಾರ ಬಂದು ಒಂದು ವರ್ಷ ಆಗಿದೆ. ವರ್ಷದಲ್ಲಿ ಸರ್ಕಾರದ ಕೊಡುಗೆ ಏನಿದೆ? ಶಿಕ್ಷಣ ಇಲಾಖೆಯಲ್ಲಿ ಗೊಂದಲ ಎಬ್ಬಿಸಲಾಗಿದೆ. ಸಚಿವರೇ ದಮ್ಕಿ ಹಾಕ್ತಾರೆ ಎನ್ನುವ ಮಾತಿದೆ. ಯಾರೂ ಕೂಡ ಹೆದರಬೇಕಾಗಿಲ್ಲ. ನಿನ್ನೆ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಹಾಗಾಗಿ ನಾನು ಹೇಳಿದ್ದೇನೆ. ನಾನು ಯಾವ ಸಚಿವರ ಹೆಸರನ್ನು ಹೇಳೋದಿಲ್ಲ. ನಮ್ಮಲ್ಲೆ ಇದ್ದವರು ಹೋಗಿದ್ದಾರೆ. ಅವರು ಆಡಳಿತ ಪಕ್ಷಕ್ಕೆ ಸೇರಿ ವರ್ಷ ಆಯ್ತಲ್ಲ. ಶಿಕ್ಣಣ ಕ್ಷೇತ್ರಕ್ಕೆ, ಶಿಕ್ಷಕರಿಗೆ ಕೊಡುಗೆ ಏನಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ