AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ’: ಹಾಸನ ಡಿಸಿ ಲತಾಕುಮಾರಿ ನಡೆ ಬಗ್ಗೆ ಹೆಚ್.ಡಿ.ರೇವಣ್ಣ ಮತ್ತೆ ಕಿಡಿ

ಹಾಸನ ಎಸ್ಪಿಗೆ ನೋಟಿಸ್ ನೀಡಿದ ಡಿಸಿ ಲತಾಕುಮಾರಿ ನಡೆ ವಿರುದ್ಧ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದು, ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲೆಯನ್ನು ಶಾಂತ ರೀತಿಯಿಂದ ನಡೆಸಿಕೊಂಡು ಹೋಗಲಿ. ನಾನೇ ಹ್ಯಾಂಡಲ್ ಮಾಡ್ತಿನಿ ಎಂದ ಮೇಲೆ ನಾವೇಕೆ ಹೇಳಬೇಕು ಎಂದಿದ್ದಾರೆ. ನೈಸ್ ಯೋಜನೆ ವಿಚಾರವಾಗಿ ಸಚಿವ ಶಿವಲಿಂಗೇಗೌಡ ಹೇಳಿಕೆಗೂ ಇದೇ ವೇಳೆ ಅವರು ತಿರುಗೇಟು ನೀಡಿದ್ದಾರೆ.

'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ': ಹಾಸನ ಡಿಸಿ ಲತಾಕುಮಾರಿ ನಡೆ ಬಗ್ಗೆ ಹೆಚ್.ಡಿ.ರೇವಣ್ಣ ಮತ್ತೆ ಕಿಡಿ
ಹಾಸನ ಡಿಸಿ ಲತಾಕುಮಾರಿ ನಡೆ ಬಗ್ಗೆ ಹೆಚ್.ಡಿ.ರೇವಣ್ಣ ಕಿಡಿImage Credit source: HD Revanna Facebook Page
ಮಂಜುನಾಥ ಕೆಬಿ
| Edited By: |

Updated on:Oct 06, 2026 | 2:38 PM

Share

ಹಾಸನ, ಅಕ್ಟೋಬರ್​​ 06: ಪೆಂಡಾಲ್ ಗಣಪತಿ ವಿಸರ್ಜನೆ ವಿಚಾರವಾಗಿ ಹಾಸನ ಎಸ್​ಪಿ ಶುಭನ್ವಿತಾಗೆ ಡಿಸಿ ಲತಾಕುಮಾರಿ ನೋಟಿಸ್ ನೀಡಿದ ವಿಚಾರವಾಗಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಲೇವಡಿ ಮಾಡಿದ್ದಾರೆ. ನನಗೆ ಅದೆಲ್ಲಾ ಗೊತ್ತಿಲ್ಲ ಸರ್ . ನನಗೆ ಯಾವುದೇ ನೋಟಿಸ್ ಬಂದಿಲ್ಲ, ನಮಗೆ ಯಾಕೆ ಬೇಕು? ಎಸ್​​ಪಿಗೇ ನೋಟಿಸ್​ ಕೊಟ್ಟ ಮೇಲೆ ನನಗೂ ನೋಟಿಸ್​ ಕೊಡಬಹುದು. ಪಾಪ ಅವರು ದೊಡ್ಡವರಿದ್ದಾರೆ, ಅವರ ಬಗ್ಗೆ ಮಾತನಾಡಲ್ಲ. ಎಸ್​ಪಿಗೆ ಜಿಲ್ಲಾಧಿಕಾರಿ ಯಾಕೆ ನೋಟಿಸ್​ ಕೊಟ್ಟಿದ್ದಾರೆಂದು ಗೊತ್ತಿಲ್ಲ ಎಂದವರು ಹೇಳಿದ್ದಾರೆ.

‘ತಾನೇ ಹ್ಯಾಂಡಲ್ ಮಾಡ್ತೀನಿ ಎಂದ ಮೇಲೆ ನಾವೇಕೆ ಹೇಳಬೇಕು?’

72 ವರ್ಷದಿಂದ ಗಣಪತಿ ಉತ್ಸವ ನಡೆಸಿಕೊಂಡು ಬಂದಿದ್ದಾರೆ. ದೇವಿಗೆರೆಯಲ್ಲಿ ಗಣಪತಿ ಬಿಡಲು ಅನುಮತಿ ಕೊಡಿಸಿ ಎಂದು ಕೇಳಿದರು. ನಾನು ತಹಶೀಲ್ದಾರ್​ಗೆ ಕೇಳಿದಾಗ ಎಲ್ಲಾ ಡಿಸಿಯವರದ್ದು ಎಂದು ಹೇಳಿದರು. ಬೇರೆಯವರಿಗೆ ಜಿಲ್ಲಾಧಿಕಾರಿ ಹೇಗೆ ಅನುಮತಿ ಕೊಟ್ಟರು? ಯಾವ ಕಾರಣದಿಂದ ಪೆಂಡಾಲ್ ಗಣಪತಿಗೆ ನಿಷೇಧ ಹೇರಿದರು? ಯಾವುದೇ ಘಟನೆ ಆದರು, ಏನೇ ಆದರೂ ಪೊಲೀಸರು ಬೇಕಿಲ್ಲ. ತಾನೇ ಕ್ರಮ ಕೈಗೊಳ್ತೀನಿ ಎಂದ ಮೇಲೆ ಪೂರ್ತಿ ಬೆಂಬಲ ಕೊಡೋಣ. ಹಾಸನ ಜಿಲ್ಲೆಯನ್ನು ಶಾಂತ ರೀತಿಯಿಂದ ನಡೆಸಿಕೊಂಡು ಹೋಗಲಿ. ನಾನೇ ಹ್ಯಾಂಡಲ್ ಮಾಡ್ತೀನಿ ಎಂದ ಮೇಲೆ ನಾವೇಕೆ ಹೇಳಬೇಕು ಎಂದು ರೇವಣ್ಣ ವ್ಯಂಗ್ಯವಾಡಿದ್ದಾರೆ. ಏನೇನು ನಡೆದಿದೆ ಎಲ್ಲದರ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವಂತೆ ಇದೇ ವೇಳೆ ಶಾಸಕ ಸ್ವರೂಪ್‌ಪ್ರಕಾಶ್​​ಗೂ ತಿಳಿಸಿದ ಹೆಚ್.ಡಿ‌.ರೇವಣ್ಣ, ಅಂತಹ ಪರಿಸ್ಥಿತಿ ಬಂದರೆ ಕೋರ್ಟ್ ಮತ್ತು ಲೋಕಾಯುಕ್ತ ಇದೆ. ಇನ್ನೂ ಕೆಲ ವಿಚಾರ ಇದೆ, ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ ಎಂದಿದ್ದಾರೆ.

LIVE TV

ಇದನ್ನೂ ಓದಿ: ಗಣಪತಿ ವಿಸರ್ಜನೆ ಜಟಾಪಟಿ: ಎಸ್ಪಿಗೆ ನೋಟಿಸ್​​ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ; ಡಿಸಿ ನಡೆಗೆ JDS ಶಾಸಕ ಗರಂ

ಶಿವಲಿಂಗೇಗೌಡ ಹೇಳಿಕೆಗೂ ರೇವಣ್ಣ ತಿರುಗೇಟು

ನೈಸ್ ಯೋಜನೆ ವಿಚಾರದಲ್ಲಿ ಹೆಚ್‌ಡಿಕೆ ಸಿಎಂ ಆಗಿದ್ದಾಗ ಸಮ್ಮನಿದ್ದರು ಎಂಬ ಅಬಕಾರಿ ಸಚಿವ ಶಿವಲಿಂಗೇಗೌಡ ಹೇಳಿಕೆಗೂ ಹೆಚ್‌.ಡಿ.ರೇವಣ್ಣ ತಿರುಗೇಟು ನೀಡಿದ್ದು, ನೈಸ್ ರಸ್ತೆ ವಿಚಾರದ ತನಿಖೆಗೆ ರಚನೆಯಾಗಿದ್ದ ಸದನ ಸಮಿತಿಯಲ್ಲಿ ಇದೇ ಶಿವಲಿಂಗೇಗೌಡ ಜೆಡಿಎಸ್‌ ಪಕ್ಷದಿಂದ ಸದಸ್ಯರಾಗಿದ್ದರು. ಜಯಚಂದ್ರ ನೇತೃತ್ವದ ಸಮಿತಿಗೆ ನಾನೇ ಸದಸ್ಯನಾಗಬೇಕೆಂದು ಹೋಗಿದ್ದರು. ಆಗ ಏನೆಂದು ಬರೆದುಕೊಟ್ಟಿದ್ದಾರೆಂದು ಕೇಳಿ. ನೈಸ್ ಯೋಜನೆ ವಿಚಾರದಲ್ಲಿ ಯಾರು ದುಡ್ಡು ಹೊಡೆದಿದ್ದಾರೆ ಎಂದು ಎಲ್ಲವನ್ನೂ ಪಾಯಿಂಟ್‌ ಮಾಡಿ ಇಟ್ಕೊಂಡಿದ್ದೀನಿ. ಬೆಂಡೆತ್ತಿ ಹಾಕ್ತೀನಿ ಅಂದಿದ್ದರು. ಅರಸೀಕೆರೆಯ ಜೇನುಕಲ್ ಸಿದ್ದೇಶ್ವರನ ಮೇಲೆ ಆಣೆ ಮಾಡಿ ಏನು ಬರೆದುಕೊಟ್ಟಿದಾರೆಂದು ಆಣೆ ಮಾಡಿ ಸಾರ್ವಜನಿಕವಾಗಿ ಹೇಳಲಿ ಎಂದು ಶಿವಲಿಂಗೇಗೌಡರಿಗೆ ರೇವಣ್ಣ ಸವಾಲು ಹಾಕಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:37 pm, Tue, 6 October 26

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು
ರಾಜ್ಯ ಸರ್ಕಾರದ ವಿರುದ್ಧ ಗವರ್ನರ್​​ಗೆ ಬಿಜೆಪಿ-ಜೆಡಿಎಸ್​​ ನಿಯೋಗದಿಂದ ದೂರು
ರಾಜ್ಯ ಸರ್ಕಾರದ ವಿರುದ್ಧ ಗವರ್ನರ್​​ಗೆ ಬಿಜೆಪಿ-ಜೆಡಿಎಸ್​​ ನಿಯೋಗದಿಂದ ದೂರು
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!
ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ​​ ಪ್ರಕರಣ ಬಯಲಾಗಿದ್ದೇ ರೋಚಕ
ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ​​ ಪ್ರಕರಣ ಬಯಲಾಗಿದ್ದೇ ರೋಚಕ
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು