ನಾನು ಹತ್ತು ರೂಪಾಯಿ ತೆಗೆದುಕೊಳ್ಳದೆ ಕೆಲಸ ಕೊಟ್ಟೆ, ಈಗ ಜನರ ಸೇವೆ ಮಾಡಿ ಅಂದ್ರೆ ನಾಟಕ ಆಡ್ತೀರಾ? KPTCL ಸಹಾಯಕ ಇಂಜಿನಿಯರ್ಗೆ ರೇವಣ್ಣ ಕ್ಲಾಸ್
ಹಾಸನ ತಾಲೂಕಿನ ಮೆಳಗೋಡು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಹವಾಲು ಸ್ವೀಕಾರ ಮತ್ತು ಗ್ರಾಮಸಭೆಯಲ್ಲಿ ಅಧಿಕಾರಿ ಅರ್ಜುನ್ ವಿರುದ್ಧ ಮಾಜಿ ಸಚಿವ ಹೆಚ್ಡಿ ರೇವಣ್ಣ ಕೆಂಡಕಾರಿದ್ದಾರೆ.
ಹಾಸನ: KPTCL ಸಹಾಯಕ ಇಂಜಿನಿಯರ್ ಅರ್ಜುನ್ ವಿರುದ್ಧ ಹೆಚ್ಡಿ ರೇವಣ್ಣ(HD Revanna) ಗರಂ ಆಗಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಸನ ತಾಲೂಕಿನ ಮೆಳಗೋಡು ಗ್ರಾಮದಲ್ಲಿ ಅಹವಾಲು ಸ್ವೀಕಾರ ಮತ್ತು ಗ್ರಾಮಸಭೆಯಲ್ಲಿ H.D.ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ಹತ್ತು ರೂಪಾಯಿಯನ್ನೂ ತೆಗೆದುಕೊಳ್ಳದೆ ಕೆಲಸ ಕೊಟ್ಟೆ. ಈಗ ಜನರ ಸೇವೆ ಮಾಡಿ ಅಂದ್ರೆ ನಾಟಕ ಆಡ್ತೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾಸನ ತಾಲೂಕಿನ ಮೆಳಗೋಡು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಹವಾಲು ಸ್ವೀಕಾರ ಮತ್ತು ಗ್ರಾಮಸಭೆಯಲ್ಲಿ ಅಧಿಕಾರಿ ಅರ್ಜುನ್ ವಿರುದ್ಧ ಮಾಜಿ ಸಚಿವ ಹೆಚ್ಡಿ ರೇವಣ್ಣ ಕೆಂಡಕಾರಿದ್ದಾರೆ. ನಾನು ಹತ್ತು ರೂಪಾಯಿಯನ್ನೂ ತೆಗೆದುಕೊಳ್ಳದೆ ಕೆಲಸ ಕೊಟ್ಟೆ. ಈಗ ಜನರ ಸೇವೆ ಮಾಡಿ ಅಂದ್ರೆ ನಾಟಕ ಆಡ್ತೀರಾ ಹಳ್ಳಿಯವರಿಗೆ ಬೇಕಾಗಿರೋದು ಕುಡಿಯುವ ನೀರು, ಚರಂಡಿ ಮತ್ತು ವಿದ್ಯುತ್ ಇನ್ನೇನು ಕೇಳ್ತಾರೆ. ತಿಂಗಳಾದ್ರೂ ಒಂದು ಟ್ರಾನ್ಸ್‌ಫಾರ್ಮರ್ ಚೇಂಜ್ ಮಾಡಿಲ್ಲ ಅಂದ್ರೆ ಏನ್ ಕೆಲಸ ಮಾಡ್ತೀರಾ ನೀವು. ಇನ್ನು ಎರಡು ತಿಂಗಳು ನಿಮ್ಮ ಅಧಿಕಾರಿ ಸಿಗದೆ ಎಲ್ಲೂ ಹೋಗಲ್ಲ ಬಲಿ ಹಾಕ್ತಿನಿ ನಂಗೆ ಗೊತ್ತಿದೆ ಎಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ಅರ್ಜುನ್ ವಿರುದ್ಧ ಹೆಚ್.ಡಿ.ರೇವಣ್ಣ ಸಿಟ್ಟಾದ್ರು.
ಇದನ್ನೂ ಓದಿ: ತುಮಕೂರು: ಕ್ರೇನ್ನಿಂದ ಕಳಜಿ ಬಿದ್ದ ಮೂಸಂಬಿ, ಸೇಬಿನ ಹಾರ; ಅಪಾಯದಿಂದ ಪಾರಾದ ಪರಮೇಶ್ವರ
ಸಭೆ ವೇಳೆ, ಆಶ್ರಯ ಮನೆ ಕೇಳಿದ ಜನರಿಗೆ ರೇವಣ್ಣ ಸಮಾಧಾನದ ಮಾತುಗಳನ್ನಾಡಿದ್ದಾರೆ. ಈಗಿರೋದು ಕೇವಲ. 1.20 ಲಕ್ಷದ ಮನೆ ಯೋಜನೆ. ಈ ಯೋಜನೆಯಲ್ಲಿ ಮನೆ ತಗೊಂಡ್ರೆ ನೀವು ಅಡಿಪಾಯ ಕೂಡ ಹಾಕೋಕೆ ಆಗಲ್ಲ. ಈಗ ಬೇಡಾ ಸುಮ್ನಿರಿ, ಇನ್ನು ಎರಡು ತಿಂಗಳು ಕಾಯಿರಿ. ಮತ್ತೆ ಕುಮಾರಣ್ಣ ಬರ್ತಾರೆ, ಆಗ ಒಂದು ಆಶ್ರಯ ಮನೆಗೆ ಐದು ಲಕ್ಷ ಮಾಡಿಸ್ತಿನಿ ಆಗ ನಿಮಗೆ ಮನೆ ಕೊಡ್ತಿನಿ. ಐದು ಲಕ್ಷದ ಜೊತೆಗೆ ನೀವೊಂದು ಎರಡು ಲಕ್ಷ ಸೇರಿಸಿದ್ರೆ ಒಳ್ಳೆ ಮನೆ ಆಗುತ್ತೆ ಎಂದು ಸಮಾಧಾನ ಹೇಳಿದ್ರು. ಬೇಕಿದ್ರೆ ಹೇಳಿ ಒಂದು ಸಾವಿರ ಮನೆ ರೆಡಿ ಇದಾವೆ ಆದ್ರೆ ಬರಿ ಒಂದು ಲಕ್ಷದ 20 ಸಾವಿರ ಮಾತ್ರ ಸಿಗೋದು. ಆಗ ಮಳೆಯಲ್ಲಿ ಮನೆ ಬಿದ್ದಾಗ ನಾನು ಎಲ್ಲರಿಗು ಐದು ಲಕ್ಷದ ಮನೆ ಕೊಡಿಸ್ಲಿಲ್ವಾ? ಹಾಗೆ ಎಲ್ಲರಿಗೂ ಮನೆ ಕೊಡಿಸ್ತಿನಿ ಸುಮ್ಮನಿರಿ ಎಂದು ಜನರಿಗೆ ಅಶ್ವಾಸನೆ ನೀಡಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:10 am, Mon, 6 March 23