ಆಡಿಯೋದಲ್ಲಿ ಹೇಳಿರುವುದು ಸತ್ಯ ಅಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡಲಿ -ಶಾಸಕ ಶಿವಲಿಂಗೇಗೌಡಗೆ ಹೆಚ್‌.ಡಿ.ರೇವಣ್ಣ ಸವಾಲು

ಹೆಚ್‌.ಡಿ.ರೇವಣ್ಣ‌, ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಡಿಯೋದಲ್ಲಿ ಹೇಳಿರುವುದು ಸತ್ಯ ಅಲ್ಲ ಎಂದು ಶಾಸಕರು ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡಲಿ ಎಂದು ಹಾಸನದಲ್ಲಿ ಸವಾಲು ಹಾಕಿದ್ದಾರೆ.

ಆಡಿಯೋದಲ್ಲಿ ಹೇಳಿರುವುದು ಸತ್ಯ ಅಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡಲಿ -ಶಾಸಕ ಶಿವಲಿಂಗೇಗೌಡಗೆ ಹೆಚ್‌.ಡಿ.ರೇವಣ್ಣ ಸವಾಲು
ಹೆಚ್ ಡಿ ರೇವಣ್ಣ
Follow us
ಆಯೇಷಾ ಬಾನು
|

Updated on:Mar 20, 2023 | 10:36 AM

ಹಾಸನ: ಮಾಜಿ ಸಚಿವ ಹೆಚ್​.ಡಿ ರೇವಣ್ಣ (HD Revanna) ಮತ್ತು ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಜೆಡಿಎಸ್ (JDS) ತೊರೆಯುವ ಮೊದಲು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿತ್ತು. ಈ ಆಡಿಯೋ ಸಂಬಂಧ ಪ್ರತಿಕ್ರಿಯೆ ನೀಡಿದ ಹೆಚ್‌.ಡಿ.ರೇವಣ್ಣ‌, ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಡಿಯೋದಲ್ಲಿ ಹೇಳಿರುವುದು ಸತ್ಯ ಅಲ್ಲ ಎಂದು ಶಾಸಕರು ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡಲಿ ಎಂದು ಹಾಸನದಲ್ಲಿ ಸವಾಲು ಹಾಕಿದ್ದಾರೆ.

ನಿನ್ನೆ(ಮಾರ್ಚ್ 19) ಅರಸೀಕೆರೆಯಲ್ಲಿ ಪಕ್ಷದ ಮುಖಂಡರ ಸಭೆ ಬಳಿಕ ಮಾತನಾಡಿದ ರೇವಣ್ಣ, ಆ ಹುಡುಗ ಆಡಿಯೋ ರೆಕಾರ್ಡ್ ಮಾಡಿಕೊಂಡಿರೋದು ನನಗೆ ಗೊತ್ತಿಲ್ಲ. ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರೋದು ಸತ್ಯ ಅಲ್ಲಾ ಅಂಥ ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡಿಲಿ. ರಾಗಿ ಕಳ್ಳ ಅಂದ ಕೂಡಲೇ ಸತ್ಯ ಮಾಡಲಿಲ್ವಾ. ಕಳೆದ ಒಂದು ವರ್ಷದಿಂದ ಇದು ನಡೀತಿದೆ. ಕುರುಬರು, ಲಿಂಗಾಯತರು, ಒಕ್ಕಲಿಗರು ನನಗೆ ಓಟು ಹಾಕಲ್ಲ ಎಂದು ಆ ಆಡಿಯೋದಲ್ಲೇ ಹೇಳಿದ್ದಾರೆ. ನಾನೇನಾದರು ಒಂದು ಪದ ಎಡಿಟ್ ಮಾಡಿರೋದನ್ನ ತೋರ್ಸಿದ್ರೆ ಆ ಧರ್ಮಸ್ಥಳದ ಮಂಜುನಾಥ ನನ್ನ‌ನ್ನು ನೋಡಿಕೊಳ್ಳಲಿ. ಇಲ್ಲವಾದರೆ ಆ ದೇವರು ಅವರನ್ನ ನೋಡಿಕೊಳ್ಳಲಿ ಎಂದರು.

ಇನ್ ಫ್ರಂಟ್ ದೇವೇಗೌಡರು ಅರಸೀಕೆರೆ ಜನ ದುಡ್ಡು ಇಲ್ಲದೆ ಓಟು ಹಾಕಲ್ಲ ಅಂತಾರೆ. ಹಾಗಾದ್ರೆ ಹದಿನೈದು ವರ್ಷ ಅರಸೀಕೆರೆ ಜನ ದುಡ್ಡು ತಗೊಂಡು ಓಟು ಹಾಕಿದ್ರಾ. 250 ಕೋಟಿ ಕೊಟ್ಟಿದ್ದೇವೆ ಹದಿನಾಲ್ಕು ತಿಂಗಳಿನಲ್ಲಿ, ಯಾರೂ ಕಂಟ್ರಾಕ್ಟರ್. ನಾನು ಒಂದು ಬಿಡಗಾಸು ತಗಂಡಿದ್ದೀನಿ ಅಂದ್ರೆ ರಾಜಕೀಯ ಬಿಟ್ಟು ಹೋಗ್ತಿನಿ. ಯಾರು ಕಂಟ್ರಾಕ್ಟ್ ಮಾಡವ್ರೆ ಹೇಳಲಿ. ದೇವರು ಅನ್ನೋನು ಇದ್ರೆ ಇದೆಲ್ಲಾ ನೋಡಿಕೊಳ್ಳಲಿ. ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲೇಬೇಕು ಅಂತ ಹೊರಟರು ಏನಾಯ್ತು? ಈತ ಗಂಡಸಿಲಿ‌ ಹದಿನೇಳು ಓಟಲ್ಲಿ ಸೋತಿದ್ದ. ರಾಜಕೀಯ ವಿದ್ಯಾಮಾನ ಏನಾಯ್ತು ಸಮಯ ಬಂದಾಗ ಹೇಳ್ತಿನಿ. ಇನ್ನೊಂದು ಸ್ವಲ್ಪ ಬಿಚ್ಚೋದು ಐತೆ, ಎಳೆಎಳೆಯಾಗಿ ಬಿಚ್ತಿನಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಹೆಚ್​ಡಿ ರೇವಣ್ಣ, ಶಾಸಕ ಶಿವಲಿಂಗೇಗೌಡ ಆಡಿಯೋ ವೈರಲ್​: ಪಕ್ಷ ಬಿಟ್ಟು ಹೋಗದಂತೆ ಮನವೊಲಿಸಿರುವ ರೇವಣ್ಣ

ಕೌಶಿಕ್ ಮುಖರ್ಜಿ ಹತ್ತಿರ ಕರೆದುಕೊಂಡು ಹೋಗಿ 360 ಹಳ್ಳಿಗೆ ಕುಡಿಯುವ ನೀರು ಮಂಜೂರು ಮಾಡಿಸಿಕೊಟ್ಟೆ,‌ ಆಗ ಬಿಜೆಪಿ ಸರ್ಕಾರ ಇತ್ತು. ಇದೇ ಈಶ್ವರಪ್ಪ ಬಂದು ಅಡಿಗಲ್ಲು ಹಾಕಿದ್ರು. ಸುಳ್ಳು ಜಾಸ್ತಿ ದಿನ ನಡೆಯಲ್ಲಾ ರೀ, ಜನ ಮೆಚ್ಚಿಸಕ್ಕೋಸ್ಕರ ನಾಟಕ ಆಡ್ತಾರೆ. ಸುಳ್ಳು ಜಾಸ್ತಿ ದಿನ ನಡೆಯಲ್ಲ ಯಾವತ್ತಾದರೂ ಒಂದು ದಿನ ಅಂತ್ಯವಾಗುತ್ತೆ. ನನ್ನ ಕೈಲಿ ಆದದ್ದನ್ನು ಮಾಡಿದ್ದೀನಿ, ಈತನನ್ನು ರಾಜಕೀಯ ಮೇಲೆ ತರಲು ಏನೇನ್ ಶಕ್ತಿ ತುಂಬಬೇಕು ತುಂಬಿದ್ದೀನಿ. ಈಗ ಅವರು ಸ್ವಲ್ಪ ದೃಢವಾಗಿದ್ದಾರೆ, ಹಣಕಾಸಿದೆ. ನೀನೆ ಸಾಕಿದ ಗಿಣಿ ಹದ್ದಾಕಿ ಕುಕ್ಕಿತಲ್ಲೋ‌ ಆ ಪರಿಸ್ಥಿತಿ ನಮಗೆ ಬಂದಿದೆ ಈಗ. ಇನ್ನೂ 45 ದಿನ ಪರದೆ ಇದೆ, ಅದರ ಮೇಲೆ‌ ಎಳೆಎಳೆಯಾಗಿ ತರ್ತಿನಿ. ಅರಸೀಕೆರೆ ಮಹಾಜನತೆ ಸ್ವಾಭಿಮಾನದವರು. ನೀವು ದುಡ್ಡು ತಗೊಂಡು ಹದಿನೈದು ವರ್ಷ ಓಟು ಹಾಕಿದ್ರಾ ಅಂತ ಕೇಳ್ತಿನಿ ಎಂದರು.

ಇನ್ನು ಇದೇ ವೇಳೆ ಹೆಚ್​ಡಿ ರೇವಣ್ಣ ಅರಸೀಕೆರೆ ನಗರಸಭೆ ಏಳು ಜನ ಅನರ್ಹ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಪಾಪದವರು, ಅದರಲ್ಲಿ ನಂದೇ ತಪ್ಪಿದೆ. ನಾನು ಅವರ ಕ್ಷಮೆ ಕೇಳುತ್ತೇನೆ. ನಮ್ಮ ಪಕ್ಷದ ಅಧ್ಯಕ್ಷರಿಗೆ ಸರಿಯಾದ ಮಾಹಿತಿ ನೀಡಲಿಲ್ಲ. ಕೋರ್ಟ್‌ನಲ್ಲಿ ಕೇಸ್ ಇದೆ ಅಂತ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಎರಡು ವರ್ಷದಿಂದ ಶಿವಲಿಂಗೇಗೌಡರು ಕಾಂಗ್ರೆಸ್ ಮನೆ ಬಾಗಿಲು ತಟ್ಟುತ್ತಲೇ ಇದ್ದರು. ಇನ್ನೊಂದು ದಿನ ದೇವೇಗೌಡರ ಮುಂದೆ ಕುಳಿತಿದ್ದು ಆಗ ಯಾರೋ ಫೋನ್ ಮಾಡಿ ಎನ್ ಸಾರ್ ರಾಮಸ್ವಾಮಿ ಇಲ್ಲೇ ಉಳ್ಕತರೆ ಅಂದ್ರು. ಹೇ ಕಾಂಗ್ರೆಸ್‌ನವರು ಅವನ್ ಒದ್ದು ಓಡ್ಸಿದ್ದಾರೆ, ಅದಕ್ಕೆ ನಿಮ್ಮೆ ಮನೆ ಬಾಗಿಲಿಗೆ ಬಂದಿದ್ದಾರೆ ಎಂದು ಶಿವಲಿಂಗೇಗೌಡ ಹೇಳ್ದಾ. ಶಿವಲಿಂಗೇಗೌಡರಿಗೆ ಭಗವಂತ ಒಳ್ಳೆಯದು ಮಾಡಲಿ. ಅವರ ಹತ್ರ ದುಡ್ಡು ಇದೆ ಎಂದು ವಾಗ್ದಾಳಿ ನಡೆಸಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:36 am, Mon, 20 March 23

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ