Sign In

By signing in or creating an account, you agree with Associated Broadcasting Company's Terms & Conditions and Privacy Policy.

Israel-Hamas War: ಹಮಾಸ್ ಭಯೋತ್ಪಾದಕರ ದಾಳಿ: ಇಸ್ರೇಲ್​ನಲ್ಲಿ ಸಿಲುಕಿದ ಹಾಸನದ 20 ಮಂದಿ

ಇಸ್ರೇಲ್ ಮೇಲೆ ಹಮಾಸ್ ಭಯೋತ್ಪಾದಕರ ದಾಳಿ ಮುಂದುವರಿದಿದ್ದು, ಕರ್ನಾಟಕ ಹಲವು ಮಂದಿ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದಾರೆ. ಕರಾವಳಿಯ ಸಾವಿರಾರು ಮಂದಿ ಆ ದೇಶದಲ್ಲಿ ಸಿಲುಕಿದ್ದು, ಹಾಸನದ 20 ಮಂದಿ ಕೂಡ ಸಂಕಷ್ಟದಲ್ಲಿದ್ದಾರೆ.

Israel-Hamas War: ಹಮಾಸ್ ಭಯೋತ್ಪಾದಕರ ದಾಳಿ: ಇಸ್ರೇಲ್​ನಲ್ಲಿ ಸಿಲುಕಿದ ಹಾಸನದ 20 ಮಂದಿ
ಇಸ್ರೇಲ್ ಮೇಲೆ ಹಮಾಸ್ ಭಯೋತ್ಪಾದಕರ ದಾಳಿImage Credit source: AFP Photo
Follow us
ಮಂಜುನಾಥ ಕೆಬಿ
| Updated By: Rakesh Nayak Manchi

Updated on:Oct 09, 2023 | 8:16 PM

ಹಾಸನ, ಅ.9: ಹಮಾಸ್ ಭಯೋತ್ಪಾದಕರ (Hamas Terrorist) ದಾಳಿ ಮುಂದುವರಿದ ಇಸ್ರೇಲ್‌ನಲ್ಲಿ (Israel) ಕರ್ನಾಟಕದ ಹಾಸನ (Hassan) ತಾಲೂಕಿನ 20ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ. ಚನ್ನರಾಯಪಟ್ಟಣ ತಾಲೂಕು, ಸಕಲೇಶಪುರ ತಾಲೂಕು, ಲಕ್ಕುಂದ, ಅಂಕಿಹಳ್ಳಿ, ಬೆಳಗೊಡು ಗ್ರಾಮದವರು ಯುದ್ಧ ಪೀಡಿತ ದೇಶದಲ್ಲಿ ಸಿಲುಕಿದ್ದಾರೆ.

ಜಾನ್ಸನ್, ನವೀನ್, ಡೀನಾ ಡಿಸೋಜಾ, ಎಲಿಜಾ ಪಿಂಟೋ, ಅಂತೋನಿ ಡಿಸೋಜಾ, ಕೃಷ್ಣೇಗೌಡ ಸೇರಿದಂತೆ ನರ್ಸಿಂಗ್ ಹಾಗೂ ಇತರೆ ಉದ್ಯೋಗ ಮಾಡುತ್ತಿರುವ ಹಾಸನ ಮೂಲದ ಹಲವರು ಜೆರುಸರಲೆಮ್ ಮತ್ತು ತಲೈಯಿಯಲ್ಲಿ ನೆಲಸಿದ್ದಾರೆ.

ಇಸ್ರೇಲ್‌ನಲ್ಲಿ ನೆಲೆಸಿರುವ ಕೃಷ್ಣೇಗೌಡ ಅವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಡಿಂಕ ಗ್ರಾಮದವರಾಗಿದ್ದಾರೆ. ಇವರು ಸುಮಾರು 20 ವರ್ಷಗಳಿಂದ ಇಸ್ರೇಲ್‌ನಲ್ಲಿ ನೆಲೆಸಿದ್ದು, ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಭಯೋತ್ಪಾದಕ ದಾಳಿ ಬಗ್ಗೆ ಕೃಷ್ಣೇಗೌಡ ಅವರು ತನ್ನ ಸಹೋದರ ಮಹದೇವ ಅವರ ಜೊತೆ ನಿನ್ನೆ ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ.

ಇಸ್ರೇಲ್​ನಲ್ಲಿ ಸಿಲುಕಿ ಹೊನ್ನಾವರ ಕವಲಕ್ಕಿ ನಿವಾಸಿ

ಕಾರವಾರ: ಇಸ್ರೇಲ್ ದೇಶದ ಯುದ್ಧ ಪ್ರದೇಶದಿಂದ ಸುಮಾರು 70 km ದೂರದಲ್ಲಿ ಹೊನ್ನಾವರ ಕವಲಕ್ಕಿ ನಿವಾಸಿ ಜೇಮ್ಸ್ ಮಿರಾಂದ (29) ಅವರು ಸಿಲುಕಿದ್ದಾರೆ. ಇಸ್ರೇಲ್‌ನ ತೆಲವಿಯ ರಶೀದ್ ಕೋಕ್ಮಾ ಸ್ಟ್ರೀಟ್ ನಿವಾಸಿಯಾಗಿರುವ ಇವರು, ಕಳೆದ ಒಂದು ವರ್ಷದಿಂದ ಕೇರ್ ಗಿವರ್ ಆಗಿ ಹೋಂ ನರ್ಸಿಂಗ್ ಕೆಲಸ ಮಾಡುತ್ತಿದ್ದಾರೆ. ಅ.7 ರಂದು ಇವರು ನೆಲೆಸಿರುವ ಪ್ರದೇಶದ 10 ನಿಮಿಷ ದೂರ ಪ್ರಯಾಣದ ಪ್ರದೇಶದಲ್ಲಿ ರಾಕೇಟ್ ಬಿದ್ದಿದೆ.

ಕರಾವಳಿಯ ಸಾವಿರಾರು ಮಂದಿ ಸಂಕಷ್ಟದಲ್ಲಿ

ಉದ್ಯೋಗ ನಿಮಿತ್ತ ಕರಾವಳಿಯ ಸಾವಿರಾರು ಜನ ಇಸ್ರೇಲ್​ಗೆ ತೆರಳಿದ್ದು ಭೀಕರ ಯುದ್ದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಮಂಗಳೂರು, ಉಡುಪಿಯ ಸಾವಿರಾರು ಜನರು ಇಸ್ರೇಲ್​ನಲ್ಲಿ ಸಿಲುಕಿದ್ದಾರೆ. ಇಸ್ರೇಲ್​​ನಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿ ಅವಲೋಕಿಸಿ ಕರಾವಳಿಯ ಕುಟುಂಬಗಳು ಆತಂಕದಲ್ಲಿವೆ.

ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ 1,100ಕ್ಕೆ ಏರಿಕೆ

ಕಳೆದ 16 ವರ್ಷಗಳಿಂದ ಇಸ್ರೇಲ್​ನ ಟಲ್ ಅವೀವ್ ಎಂಬಲ್ಲಿ ಪ್ರವೀಣ್ ಪಿಂಟೋ ಎಂಬುವವರು ನೆಲೆಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ದಾಬಸ್ ಕಟ್ಟೆ ಎಂಬಲ್ಲಿರುವ ಪ್ರವಿಣ್ ಪಿಂಟೋ ಕುಟುಂಬಸ್ಥರು ದೂರವಾಣಿ ಮೂಲಕ ಪ್ರವೀಣ್ ಅವರ ಸುರಕ್ಷತೆ ಖಾತರಿ ಪಡೆಸಿಕೊಳ್ಳುತ್ತಿದ್ದಾರೆ. ಪ್ರವೀಣ್ ಪಿಂಟೋ ಅವರು ಬಂಕರ್​ನಲ್ಲಿ ಸುರಕ್ಷಿತ ವಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

ಮನೆಯಿಂದ ಹೊರ ಬರದಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ. ಪ್ರವೀಣ್ ಪತ್ನಿ ನೀತಾ ಅವರು ಅರ್ಧ, ಒಂದು ಗಂಟೆಗೊಮ್ಮೆ ಕರೆ ಮಾಡಿ ಪತಿಯ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:03 pm, Mon, 9 October 23