ಹಾಸನ ನಗರ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರ ನಡುವೆ ಮಾರಾಮಾರಿ: ಕಾರಣವೇನು?
ಹಲ್ಲೆಗೆ ಯತ್ನ ಮಾಡಿದ ಸದಸ್ಯರನ್ನ ಅಮಾನತು ಮಾಡಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ. ಪೌರಾಯುಕ್ತರ ಕಛೇರಿ ಎದುರು ಅಧ್ಯಕ್ಷ ಮೋಹನ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಮತ್ತೊಂದೆಡೆ ಮೀಟಿಂಗ್ ಹಾಲ್ ನಲ್ಲಿ ಜೆಡಿಎಸ್ ಸದಸ್ಯರೂ ಧರಣಿಯಲ್ಲಿ ತೊಡಗಿದರು.
ಹಾಸನ: ಹಾಸನ ನಗರಸಭೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ (JDS-BJP) ಸದಸ್ಯರ ಮಧ್ಯೆ ಜಟಾಪಟಿ ನಡೆದಿದೆ. ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿದೆ. ಸಾಮಾನ್ಯ ಸಭೆ ವೇಳೆ ಚರ್ಚೆಗೆ ಅವಕಾಶ ನೀಡುತ್ತಿಲ್ಲವೆಂದು ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಅಧ್ಯಕ್ಷರ ಪೀಠದ ಎದುರು ನುಗ್ಗಿದ್ದಾರೆ. ಅಧ್ಯಕ್ಷರ ಮೇಲೆ ಹಲ್ಲೆಗೆ ಯತ್ನಿಸಿ, ಜಾತಿನಿಂದನೆ ಮಾಡಿದ್ದಾರೆ. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಜೆಡಿಎಸ್ ಸದಸ್ಯರ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದಾರೆ ( City Municipal Council CMC Hassan).
ಸಮಯಕ್ಕೆ ಸರಿಯಾಗಿ ಸಭೆ ನಡೆಸುತ್ತಿಲ್ಲ, ಚರ್ಚೆ ಮಾಡದೆಯೇ ನಿರ್ಣಯಗಳ ಅಂಗೀಕಾರ ಆಗ್ತಿದೆ ಎಂದು ಎಂಬುದು ಜೆಡಿಎಸ್ ಸದಸ್ಯರ ಆಕ್ರೋಶಕ್ಕೆ ಕಾತರಣವಾಗಿತ್ತು. ಅದರಿಂದ ಅಧ್ಯಕ್ಷರ ಪೀಠದ ಎದುರು ನುಗ್ಗಿ ಜೆಡಿಎಸ್ ಸದಸ್ಯರು ಆಕ್ರೋಶ ಹೊರಹಾಕಿದರು. ಈ ವೇಳೆ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆದಿದೆ. ಸದಸ್ಯರು ಪರಸ್ಪರ ಕೈ ಕೈ ಮಿಲಾಯಿಸಲು ಮುಂದಾಗಿದ್ದಾರೆ. ಅಧ್ಯಕ್ಷ ರ ಮೇಲೆ ಹಲ್ಲೆಗೆ ಯತ್ನಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಧರಣಿ ಮಾಡಿದ್ದಾರೆ.
ಹಲ್ಲೆಗೆ ಯತ್ನ ಮಾಡಿದ ಸದಸ್ಯರನ್ನ ಅಮಾನತು ಮಾಡಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ. ಪೌರಾಯುಕ್ತರ ಕಛೇರಿ ಎದುರು ಅಧ್ಯಕ್ಷ ಮೋಹನ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಮತ್ತೊಂದೆಡೆ ಮೀಟಿಂಗ್ ಹಾಲ್ ನಲ್ಲಿ ಜೆಡಿಎಸ್ ಸದಸ್ಯರೂ ಧರಣಿಯಲ್ಲಿ ತೊಡಗಿದರು. ಬಿಜೆಪಿ ಸದಸ್ಯರು ದುರ್ವರ್ತನೆ ತೋರಿದ್ದಾರೆ ಅವರ ವಿರುದ್ದ ಕ್ರಮ ಕೈಗೊಳ್ಳಿ. ವಿನಾಕಾರಣ ಪದೇ ಪದೆ ಸಭೆ ಮುಂದೂಡುತ್ತಿದ್ದಾರೆ. ಪ್ರಶ್ನೆ ಮಾಡಿದರೆ ಅಧ್ಯಕ್ಷರು ಪಲಾಯನ ಮಾಡಿದ್ದಾರೆ ಎಂಬುದು ಜೆಡಿಎಸ್ ಸದಸ್ಯರ ಆರೋಪವಾಗಿತ್ತು.
ಗ್ರಾಂ.ಪಂ. ಸದಸ್ಯರಿಗೆ ಗೌರವ ಧನ ಹೆಚ್ಚಿಸದ ಕಾರಣ ತನಗೆ ಹೆಚ್ಚುವರಿ ಸಂಬಳ ಬೇಡವೆಂದ MLC ಸುನೀಲ್ ಗೌಡ! ವಿಜಯಪುರ: ರಾಜ್ಯದ ಶಾಸಕರಿಗೆ, ಸಚಿವರಿಗೆ ಸಂಬಳ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿ MLC ಸುನೀಲ್ ಗೌಡ ಹೆಚ್ಚುವರಿ ಸಂಬಳ ನಿರಾಕರಿಸಿದ್ದಾರೆ. ಗ್ರಾಂ. ಪಂ. ಸದಸ್ಯರಿಗೆ ಗೌರವ ಧನ ಹೆಚ್ಚಿಸದ ಕಾರಣ ತಮ್ಮ ಹೆಚ್ಚುವರಿ ಸಂಬಳವನ್ನು ನಿರಾಕರಿಸಿದ್ದಾರೆ. ಗ್ರಾಂ. ಪಂ. ಸದಸ್ಯರಿಗೆ ಗೌರವ ಧನ ಹೆಚ್ಚಿಸಲು ಕಳೆದ 4 ವರ್ಷಗಳಿಂದ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಗ್ರಾಂ. ಪಂ. ಸದಸ್ಯರ ಗೌರವ ಧನವನ್ನ ಹೆಚ್ಚಿಸುವವರೆಗೂ ಸರ್ಕರದ ಹೆಚ್ಚುವರಿ ಸಂಬಳವನ್ನ ತೆಗೆದುಕೊಳ್ಳಲ್ಲ ಎಂದು ವಿಜಯಪುರದಲ್ಲಿ MLC ಸುನೀಲ್ಗೌಡ ಪಾಟೀಲ್ ಖಡಕ್ ಆಗಿ ಸರ್ಕಾರಕ್ಕೆ ವಾರ್ನಿಂಗ್ ನೀಡಿದ್ದಾರೆ.
ವಿಜಯಪುರ ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಕ್ಷೇತ್ರದ ಪರಿಷತ್ ಸದಸ್ಯ ಸುನೀಲ್ಗೌಡ ಪಾಟೀಲ್, ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವ ಧನ ಹೆಚ್ಚಿಸಲು ಸರ್ಕಾರ ಗಮನ ನೀಡದ ಕಾರಣ ತಮ್ಮ ಹೆಚ್ಚುವರಿ ಸಂಬಳ ನಿರಾಕರಿಸಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನ ಹೆಚ್ಚಳ ಮಾಡಲಾಗಿತ್ತು. ನಂತರ ಗ್ರಾಪಂ ಸದಸ್ಯರಿಗೆ ಹಾಗೂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗೌರವ ಧನ ಹೆಚ್ಚಳ ಕುರಿತು ಸರ್ಕಾರಕ್ಕೆ ಪ್ರಶ್ನೆ ಮಾಡಲಾಗಿದೆ. ಸರ್ಕಾರ ಆರ್ಥಿಕ ಇಲಾಖೆ ಅನುಮೋದನೆ ಇಲ್ಲವೆಂದು ನೆಪ ಹೇಳುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಕುರಿತು ಸದನದಲ್ಲಿ ಪ್ರಶ್ನೆ ಕೇಳಿದರೂ ಸರ್ಕಾರ ಗಮನ ಹರಿಸಿಲ್ಲ.
ಗ್ರಾಪಂ ಅಧ್ಯಕ್ಷರಿಗೆ ಮಾಸಿಕ ಐದು ಸಾವಿರ, ಉಪಾಧ್ಯಕ್ಷರಿಗೆ ಮಾಸಿಕ ನಾಲ್ಕು ಸಾವಿರ, ಸದಸ್ಯರಿಗೆ ಮಾಸಿಕ 3000 ರೂಪಾಯಿ ನಿಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ. ಸರ್ಕಾರ ಈ ವಿಚಾರದಲ್ಲಿ ಸೂಕ್ತವಾಗಿ ಸ್ಪಂದನೆ ನೀಡುತ್ತಿಲ್ಲ. ಗ್ರಾಮ ಪಂಚಾಯತಿ ಸದಸ್ಯರಿಗೆ ಮಾಸಿಕ ಹತ್ತು ಸಾವಿರ ರೂಪಾಯಿ ನೀಡೋದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಗ್ರಾಪಂ ಸದಸ್ಯರಿಗೆ ಸುಳ್ಳು ಭರವಸೆ ನೀಡಿದ್ದಾರೆ ಎಂದು ಸುನೀಲ್ಗೌಡ ಪಾಟೀಲ್ ಆರೋಪ ಮಾಡಿದ್ದಾರೆ.
ಅಲ್ಲದೆ ಕೇರಳ ಮಾದರಿಯಲ್ಲಿ ಗ್ರಾಪಂ ಆಧ್ಯಕ್ಷರಿಗೆ ವಾಹನ ಸೌಲಭ್ಯದ ಭರವಸೆ ನೀಡಿದ್ದರು. ಆದರೆ ಗೌರವ ಧನ ನೀಡುವಲ್ಲಿಯೇ ಸರ್ಕಾರ ಮುಂದೆ ಬರುತ್ತಿಲ್ಲ ಎಂದು ಪರಿಷತ್ ಸದಸ್ಯ ಸುನೀಲಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನ ಹೆಚ್ಚಳವಾಗೋವರೆಗೂ ಹೆಚ್ಚುವರಿ ಸಂಬಳ ತೆಗೆದುಕೊಳ್ಳಲ್ಲಾ ಎಂದು ವಿಜಯಪುರ ನಗರದಲ್ಲಿ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
Published On - 1:53 pm, Mon, 28 February 22