ನಾಯಿಗಳನ್ನ ಹಿಡಿದು ಕಾಡಿಗೆ ಬಿಟ್ಬುಡಿ ಅತ್ಲಾಗೆ! ಇದ್ದಕ್ಕಿದ್ದಂಗೆ ಹೆಚ್ಡಿ ರೇವಣ್ಣ ಹೀಗ್ಯಾಕೆ ಹೇಳಿದ್ರು?
ನಗರ ಪ್ರದೇಶಗಳಲ್ಲಿ ನಾಯಿಗಳ ಸಮಸ್ಯೆ ಹಲವು ಕಡೆ ಇರುತ್ತದೆ. ಕೆಲವೆಡೆ ಜನರಿಗೆ, ಮಕ್ಕಳಿಗೆ ಕಚ್ಚಿ, ಅಟ್ಟಾಡಿಸಿ ಸಮಸ್ಯೆ ಮಾಡುತ್ತವೆ. ವಾಹನಗಳಿಗೆ ಅಡ್ಡ ಬಂದು ಅಪಘಾತಗಳಿಗೂ ಕಾರಣ ಆಗುತ್ತದೆ.
ಕೆಲವು ಕಡೆ ನಾಯಿಗಳ ಕಾಟ ಜಾಸ್ತಿ ಆಗ್ತಿದೆ. ಮೋಟಾರ್ ಸೈಕಲ್ಗೆ ಸಿಲುಕಿ ಅಪಘಾತ, ಸಮಸ್ಯೆ ಆಗುತ್ತಿದೆ. ಅದನ್ನು ಸಾಯಿಸಬೇಕು ಎಂದು ಹೇಳುತ್ತಿಲ್ಲ. ಅದನ್ನು ಕಾಡಿಗೆ ಅಥವಾ ಹಳ್ಳಿಗಳ ಕಡೆ ಬಿಡಿ ಎಂದು ಜೆಡಿಎಸ್ ನಾಯಕ ಹೆಚ್ಡಿ ರೇವಣ್ಣ ಹೇಳಿದ್ದಾರೆ.
ನಗರ ಪ್ರದೇಶದಲ್ಲಿ ಮುಖ್ಯವಾಗಿ ನಾಯಿಗಳಿಂದ ಸಮಸ್ಯೆ ಆಗುತ್ತಿದೆ. ಹಲವರು ಬಿದ್ದು ಗಾಯ, ತೊಂದರೆ ಆಗುತ್ತಿದೆ. ಮುಖ್ಯವಾಗಿ ಸಿಟಿ ಕಡೆಗಳಲ್ಲಿ ಇರುವ ನಾಯಿಗಳನ್ನು ಹಳ್ಳಿ ಕಡೆಗೆ ಬಿಡಬಹುದು. ಮುಖ್ಯ ರಸ್ತೆಗಳಲ್ಲಿ ಇರುವ ನಾಯಿಗಳಿಂದ ಸಮಸ್ಯೆ ಆಗಬಾರದು ಅಷ್ಟೇ ಎಂದು ರೇವಣ್ಣ ತಿಳಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ನಾಯಿಗಳ ಸಮಸ್ಯೆ ಹಲವು ಕಡೆ ಇರುತ್ತದೆ. ಕೆಲವೆಡೆ ಜನರಿಗೆ, ಮಕ್ಕಳಿಗೆ ಕಚ್ಚಿ, ಅಟ್ಟಾಡಿಸಿ ಸಮಸ್ಯೆ ಮಾಡುತ್ತವೆ. ವಾಹನಗಳಿಗೆ ಅಡ್ಡ ಬಂದು ಅಪಘಾತಗಳಿಗೂ ಕಾರಣ ಆಗುತ್ತದೆ. ಬೀದಿನಾಯಿಗಳ ಸಮಸ್ಯೆಗೆ ಈ ಮೊದಲು ಕೂಡ ಹಲವು ಪರಿಹಾರಗಳನ್ನು ವಿವಿಧ ಕಡೆ ಕೈಗೊಂಡ ಉದಾಹರಣೆಗಳಿವೆ. ರೇವಣ್ಣ ಕೂಡ ಇದೇ ಸಂಬಂಧ ಮಾತನಾಡಿದ್ದಾರೆ.
ಇದನ್ನೂ ಓದಿ: ಕೆಲ ಅಧಿಕಾರಿಗಳು ಜೈಲಿಗೆ ಹೋಗುವ ಕಾಲ ಸದ್ಯದಲ್ಲೇ ಬರುತ್ತದೆ: ಮಾಜಿ ಸಚಿವ ಹೆಚ್ಡಿ ರೇವಣ್ಣ
ಇದನ್ನೂ ಓದಿ: ಸರ್ಕಾರ ಪಾಪರ್ ಬಿದ್ದಿದ್ದರೆ ನಾನೇ ಟೀಚರ್ಗೆ ಸಂಬಳ ಕೊಡುತ್ತೀನಿ: ಹೆಚ್ಡಿ ರೇವಣ್ಣ