ಹಾನಗಲ್ ನೆಕ್ ಟು ನೆಕ್ ಫೈಟ್ ಇದೆ, ಯಾರು ಬೇಕಾದ್ರು ಗೆಲ್ಲಬಹುದು: ಹಾಸನಾಂಬೆ ದರ್ಶನ ಪಡೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

ಸಿಂದಗಿಯಲ್ಲಿ ನಾವು ಸ್ಪಷ್ಟವಾಗಿ ಮುಂದಿದ್ದೇವೆ. ಹಾನಗಲ್​ನಲ್ಲಿ ನೆಕ್ ಟು ನೆಕ್ ಫೈಟ್ ಇದೆ, ಯಾರು ಬೇಕಾದ್ರು ಗೆಲ್ಲಬಹುದು. ಎರಡೂ ಕಡೆ ನಮ್ಮ ಪಕ್ಷ ಗೆಲ್ಲಲಿ ಅನ್ನೋದು ನಮ್ಮ ಪ್ರಾರ್ಥನೆ. -ಸಚಿವೆ ಶೋಭಾ ಕರಂದ್ಲಾಜೆ

ಹಾನಗಲ್  ನೆಕ್ ಟು ನೆಕ್ ಫೈಟ್ ಇದೆ, ಯಾರು ಬೇಕಾದ್ರು ಗೆಲ್ಲಬಹುದು: ಹಾಸನಾಂಬೆ ದರ್ಶನ ಪಡೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ
ಹಾಸನಾಂಬೆ ದರ್ಶನ ಪಡೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Follow us
TV9 Web
| Updated By: ಆಯೇಷಾ ಬಾನು

Updated on: Nov 02, 2021 | 11:39 AM

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಶಕ್ತಿ ದೇವತೆ ಹಾಸನಾಂಬೆ ನೋಡಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಸನಕ್ಕೆ ಆಗಮಿಸಿದ್ದು ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಮಾಡಿದ್ದಾರೆ. ಇನ್ನು ಈ ವೇಳೆ ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆ ಫಲಿತಾಂಶ ಇಂದು ಹೊರ ಬೀಳುತ್ತಿದ್ದು ಹಾನಗಲ್ ನೆಕ್ ಟು ನೆಕ್ ಫೈಟ್ ಇದೆ, ಯಾರು ಬೇಕಾದ್ರು ಗೆಲ್ಲಬಹುದು. ಆದ್ರೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು ಎಂಬುವುದು ನಮ್ಮ ಪ್ರಾರ್ಥನೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ಪ್ರತಿ ವರ್ಷದಂತೆ ಈ ವರ್ಷ ಕೂಡ ಹಾಸನಾಂಬೆ ದರ್ಶನ ಪಡೆದಿದ್ದೇನೆ. ತಾಯಿ ಆಶೀರ್ವಾದ ದಿಂದ ಸಚಿವೆ ಆಗಿ ಬಂದಿದ್ದೇನೆ. ದೇಶದ ರೈತರ ಸೇವೆ ಮಾಡೋ ಭಾಗ್ಯವನ್ನು ತಾಯಿ ಕರುಣಿಸಿದ್ದಾಳೆ. ದೇಶದ ರೈತ ನೆಮ್ಮದಿಯಿಂದ ಬದುಕುವ ಸ್ಥಿತಿ ಬರಬೇಕು. ದೇಶದ ಗಡಿ ರಕ್ಷಣೆ ಆಗಬೇಕು, ಗಡಿ ಕಾಯೋ ಯೋಧರ ರಕ್ಷಣೆ ಆಗಬೇಕು. ಕೋವಿಡ್ ನಂತಹ ಮಹಾಮಾರಿ ಹೋಗಬೇಕು ಅನ್ನೋದು ನಮ್ಮ ಪ್ರಾರ್ಥನೆ ಎಂದರು.

ಸಿಂದಗಿಯಲ್ಲಿ ನಾವು ಸ್ಪಷ್ಟವಾಗಿ ಮುಂದಿದ್ದೇವೆ. ಹಾನಗಲ್​ನಲ್ಲಿ ನೆಕ್ ಟು ನೆಕ್ ಫೈಟ್ ಇದೆ, ಯಾರು ಬೇಕಾದ್ರು ಗೆಲ್ಲಬಹುದು. ಎರಡೂ ಕಡೆ ನಮ್ಮ ಪಕ್ಷ ಗೆಲ್ಲಲಿ ಅನ್ನೋದು ನಮ್ಮ ಪ್ರಾರ್ಥನೆ. ಇನ್ನು ದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರ ಸಂಬಂದ ಮಾತನಾಡಿದ ಸಚಿವೆ ಶೋಭಾ. ನಾವು ಸದಾಕಾಲ ರೈತರ ಜೊತೆಗೆ ಇದ್ದೇವೆ. ಅವರೊಟ್ಟಿಗೆ 11 ಬಾರಿ ಚರ್ಚೆ ಮಾಡಿದ್ದೇವೆ, ಈಗಲೂ ಆಹ್ವಾನ ಇದೆ. ರಸ್ತೆಯಲ್ಲಿ ಕುಳಿತು ಮಾತನಾಡಲು ಆಗಲ್ಲ. ಅವರ ಜೊತೆಗೆ ಮಾತನಾಡಲು ನಾವು ಸದಾ ಸಿದ್ಧ. ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಿರತ ರೈತರ ಮೇಲೆ ವಾಹನ ಹತ್ತಿಸಿದ ವಿಚಾರ. ಈ ಘಟನೆ ಪೂರ್ವನಿಯೋಜಿತ ಎನ್ನೋ ಅನುಮಾನ ಇದೆ.

ಉತ್ತರ ಪ್ರದೇಶದಲ್ಲಿ ಚುನಾವಣೆ ಬರ್ತಿದೆ ಹಾಗಾಗಿ ಕಾಂಗ್ರೆಸ್ ಸಮಾಜವಾದಿ ಪಕ್ಷಗಳು ಈ ರೀತಿಯ ಕೃತ್ಯ ನಡೆಸಿವೆ. ಈ ಬಗ್ಗೆ ತನಿಖೆ ಆಗುತ್ತಿದೆ. ಈಗಲೇ ಏನೂ ಹೇಳಲ್ಲ. ತನಿಖೆ ಮುಗಿದ ಬಳಿಕ ಯಾರು ತಪ್ಪಿತಸ್ಥರು ಎನ್ನೋದು ಹೊರ ಬರಲಿದೆ ಎಂದು ಹಾಸನದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಇದನ್ನೂ ಓದಿ: ಹಾನಗಲ್​ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ 1 ಎಕರೆ ಜಮೀನು ಬೆಟ್ಟಿಂಗ್ ಕಟ್ಟಿದ ಅಭಿಮಾನಿ