AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ: ಹೆತ್ತ ಮಗಳದ್ದೇ ಒಡವೆ, ಹಣ ಕದ್ದು ಅಮಾಯಕರಂತೆ ನಟಿಸಿದ ಹೆತ್ತವರು ಜೈಲು ಪಾಲು

ತಾಯಿ ಮಗಳಿಗೆ ಫೋನ್ ಮಾಡಿ ತಾವು ಮನೆಯಿಂದ ಹೊರ ಹೋಗಿದ್ದಾಗ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ನಿನ್ನ ಒಡವೆ ಹಣ ಎಲ್ಲವನ್ನೂ ಕದ್ದೊಯ್ದಿದ್ದಾರೆ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ. ಕೂಡಲೆ ಮನೆಗೆ ಓಡೋಡಿ ಬಂದ ಮಗಳು ಅಪ್ಪ ಅಮ್ಮನಿಂದ ವಿಚಾರ ತಿಳಿದು ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹಾಸನ:  ಹೆತ್ತ ಮಗಳದ್ದೇ ಒಡವೆ, ಹಣ ಕದ್ದು ಅಮಾಯಕರಂತೆ ನಟಿಸಿದ ಹೆತ್ತವರು ಜೈಲು ಪಾಲು
ಬೇಲೂರು ಪೊಲೀಸ್ ಠಾಣೆ
TV9 Web
| Updated By: ಆಯೇಷಾ ಬಾನು|

Updated on:Aug 13, 2021 | 1:18 PM

Share

ಹಾಸನ: ಪೋಷಕರು ತಮ್ಮ ಇಡೀ ಜೀವನವನ್ನೇ ಮಕ್ಕಳಿಗಾಗಿ ಮುಡಿಪಿಟ್ಟು, ತಮ್ಮ ದುಡಿಮೆಯನ್ನೆಲ್ಲಾ ಅವರಿಗೆ ಅರ್ಪಿಸೋದನ್ನ ಕೇಳಿದ್ದೇವೆ, ನೋಡಿದ್ದೇವೆ. ಆದ್ರೆ ಇಲ್ಲಿ ಪೋಷಕರೇ ಮಗಳ ಒಡವೆ, ಹಣ ಕದ್ದು ಕಳ್ಳತನದ ನಾಟಕವಾಡಿ ಸಿಕ್ಕಿಬಿದ್ದಿರುವ ಘಟನೆ ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದಿದೆ.

ಇಲ್ಲಿನ‌ ಗುರಪ್ಪಗೌಡರ ಬೀದಿಯ ಕಲ್ಲೇಶಾಚಾರ್ ಮತ್ತು ಮಮತಾ ದಂಪತಿ ತಮ್ಮ ಮಗಳು ರೇಖಾಳನ್ನು ಬೇಲೂರಿನ ನಟರಾಜ್ ಜೊತೆ ಮದುವೆ ಮಾಡಿಸಿದ್ದರು. ತವರು ಮನೆಯೂ ಇಲ್ಲೇ ಇದ್ದಿದ್ದರಿಂದ ರೇಖಾ ತನ್ನ 54,500 ರೂ ನಗದು ಮತ್ತು 2.34 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಅಪ್ಪನ ಮನೆಯಲ್ಲೇ ಇಟ್ಟಿದ್ದರು. ಆದ್ರೆ ಎರಡು ದಿನಗಳ ಹಿಂದೆ ತಾಯಿ ಮಗಳಿಗೆ ಫೋನ್ ಮಾಡಿ ತಾವು ಮನೆಯಿಂದ ಹೊರ ಹೋಗಿದ್ದಾಗ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ನಿನ್ನ ಒಡವೆ ಹಣ ಎಲ್ಲವನ್ನೂ ಕದ್ದೊಯ್ದಿದ್ದಾರೆ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ. ಕೂಡಲೆ ಮನೆಗೆ ಓಡೋಡಿ ಬಂದ ಮಗಳು ಅಪ್ಪ ಅಮ್ಮನಿಂದ ವಿಚಾರ ತಿಳಿದು ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರದೊಳಗೆ ಕಳ್ಳತನ ಆಗಿರೋದನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೆ ಹೋಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

hsn theft mother

ರೇಖಾಳ ತಾಯಿ ಮಮತಾ

ಬಾಗಿಲು ಮುರಿದಿರೋದು ಮನೆಯ ಸನ್ನಿವೇಶ ಗಮನಿಸಿ ಕೂಡಲೆ ಮನೆಯಲ್ಲಿದ್ದ ತಂದೆ ತಾಯಿಯನ್ನು ಕರೆದು ವಿಚಾರಣೆ ಮಾಡಿದಾಗ ಪತಿ-ಪತ್ನಿ ತಡಬಡಾಯಿಸಿದ್ದಾರೆ, ಅನುಮಾನಗೊಂಡ ಪೊಲೀಸರು ತಮ್ಮದೇ ಸ್ಟೈಲ್ನಲ್ಲಿ ವಿಚಾರಣೆ ಮಾಡಿದಾಗ ಹೆತ್ತವರ ಕತರ್ನಾಕ್ ಪ್ಲಾನ್ ಬಯಲಾಗಿದೆ. ಮಗಳ ಒಡವೆ ಹಾಗೂ ಹಣ ಎಗರಿಸಲು ಕತರ್ನಾಕ್ ಐಡಿಯಾ ಮಾಡಿದ್ದ ಹೆತ್ತವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಒಡವೆ ಹಣ ಕಳ್ಳತನ ಆಗಿದೆ ಎಂದು ಬಿಂಬಿಸಿ ಹಣ ಎಗರಿಸೋ ಐಡಿಯಾ ಮಾಡಿ ತಾವೇ ತೋಡಿದ ಹಳ್ಳಕ್ಕೆ ತಾವೇ ಬಿದ್ದಿದ್ದಾರೆ. ತಂದೆ ಕಲ್ಲೇಶಾಚಾರ್ ಮತ್ತು ಪತ್ನಿ ಮಮತಾರನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಪ್ರಮುಖ ನಗರಗಳಾದ ಲಷ್ಕರ್ ಗಹ್, ಕಂದಹಾರ್ ವಶಪಡಿಸಿಕೊಂಡ ತಾಲೀಬಾನ್

Published On - 1:14 pm, Fri, 13 August 21