ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್: ಅನುಮಾನ ಮೂಡಿಸಿದ ಎಸ್ಐಟಿ ನಡೆ, ಪ್ರಮುಖ ಆರೋಪಿಗಳ ಬಂಧನವೇ ಆಗಿಲ್ಲ
ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದ ಐವರು ಪ್ರಮುಖ ಆರೋಪಿಗಳನ್ನು ಎಸ್ಐಟಿ ಬಂಧಿಸಿಲ್ಲ. ಹೀಗಾಗಿ ಎಸ್ಐಟಿ ತನಿಖಾ ವೈಖರಿ ಅಚ್ಚರಿ ಮೂಡಿಸಿದೆ. ಮೇ 8ರಂದೇ ಪುಟ್ಟರಾಜ್, ನವೀನ್, ಚೇತನ್, ಕಾರ್ತಿಕ್ ನಿರೀಕ್ಷಣ ಜಾಮೀನು ಅರ್ಜಿ ವಜಾ ಆಗಿದೆ. ಜಿಲ್ಲಾ ನ್ಯಾಯಾಲಯ ದಲ್ಲಿ ಕೇಸ್ ವಜಾ ಹಿನ್ನೆಲೆಯಲ್ಲಿ ಆರೋಪಿತರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಆದರೂ ಪ್ರಮುಖ ಆರೋಪಿಗಳು ಅರೆಸ್ಟ್ ಆಗಿಲ್ಲ.
ಹಾಸನ, ಮೇ.26: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್ ಡ್ರೈವ್ ಕೇಸ್ (Pendrive) ಸಂಬಂಧ ಎಸ್ಐಟಿ ಪೊಲೀಸರ ನಡೆ ಮೇಲೆ ಅನುಮಾನ ಮೂಡುತ್ತಿದೆ. ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದ ಐವರು ಪ್ರಮುಖ ಆರೋಪಿಗಳನ್ನು ಎಸ್ಐಟಿ ಬಂಧಿಸಿಲ್ಲ. ಹೀಗಾಗಿ ಎಸ್ಐಟಿ (SIT) ತನಿಖಾ ವೈಖರಿ ಅಚ್ಚರಿ ಮೂಡಿಸಿದೆ. ಪ್ರಕರಣದಲ್ಲಿ ಆರು, ಏಳು, ಎಂಟನೇ ಆರೋಪಿಗಳೆಂದು ಮೂವರನ್ನು ಬಂಧಿಸಲಾಗಿದೆ.
ಪ್ರೀತಂಗೌಡ ಆಪ್ತ ಲಿಖಿತ್ ಗೌಡ, ಕಚೇರಿ ಸಹಾಯಕ ಚೇತನ್ ಹಾಗೂ ವಕೀಲ ದೇವರಾಜೇಗೌಡನನ್ನು ಬಂಧಿಸಲಾಗಿದೆ. ಆದರೆ ಎಫ್ಐಆರ್ನಲ್ಲಿ ಹೆಸರಿದ್ದ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಆಪ್ತ ಪುಟ್ಟಿ ಅಲಿಯಾಸ್ ಪುಟ್ಟರಾಜ್, ವೀಡಿಯೋ ಹಂಚಿಕೆಯ ಪ್ರಮುಖ ಆರೋಪಿ ನವೀನ್ ಗೌಡ, ಚೇತನ್ ಹಾಗು ಪ್ರೀತಂಗೌಡ ಆಪ್ತ ಶರತ್ನನ್ನು ಬಂಧಿಸಿಲ್ಲ. ಮೇ 8ರಂದೇ ಪುಟ್ಟರಾಜ್, ನವೀನ್, ಚೇತನ್, ಕಾರ್ತಿಕ್ ನಿರೀಕ್ಷಣ ಜಾಮೀನು ಅರ್ಜಿ ವಜಾ ಆಗಿದೆ. ಜಿಲ್ಲಾ ನ್ಯಾಯಾಲಯ ದಲ್ಲಿ ಕೇಸ್ ವಜಾ ಹಿನ್ನೆಲೆಯಲ್ಲಿ ಆರೋಪಿತರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಆದರೂ ಪ್ರಮುಖ ಆರೋಪಿಗಳು ಅರೆಸ್ಟ್ ಆಗಿಲ್ಲ.
ಈವರೆಗೆ ಬಂಧಿಸಿದ ಮೂವರಿಂದ ಮಹತ್ವದ ದಾಖಲೆ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಪೆನ್ ಡ್ರೈವ್, ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್ ಅನ್ನು ಎಫ್ಎಸ್ಎಲ್ಗೆ ಕಳಿಸಲಾಗಿದೆ. ವರದಿ ಬಂದ ಬಳಿಕ ವಿಚಾರಣೆ ಮುಂದುವರಿಯುವ ಸಾದ್ಯತೆ ಇದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣರನ್ನ ದೇಶ ಬಿಡುವಂತೆ ಮಾಡಿದ್ದೇ ರಾಜ್ಯ ಸರ್ಕಾರ: ಪ್ರಲ್ಹಾದ್ ಜೋಶಿ ಕಿಡಿ
ಬೇಲ್ ಸಿಕ್ಕಿದ್ರೂ ರೇವಣ್ಣಗೆ ಹೊಸ ಸಂಕಷ್ಟ?
ಕೆ.ಆರ್.ನಗರ ಮಹಿಳೆ ಕಿಡ್ನ್ಯಾಪ್ ಕೇಸ್‌ನಲ್ಲಿ ನಿನ್ನೆ ಜಾಮೀನು ಸಿಕ್ಕಿದ್ರೂ ಶಾಸಕ ಹೆಚ್ ಡಿ ರೇವಣ್ಣಗೆ ಗಂಡಾಂತರ ತಪ್ಪಿಲ್ಲ. 42ನೇ ACMM ಕೋರ್ಟ್ ನೀಡಿದ ಬೇಲ್ ರದ್ದು ಕೋರಿ ಹೈಕೋರ್ಟ್ಗೆ SIT ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಕಿಡ್ನ್ಯಾಪ್‌ಕೇಸ್‌ನಲ್ಲಿ ತನಿಖೆ ಚುರುಕುಗೊಳಿಸಿರುವ SIT, ರೇವಣ್ಣ ವಿರುದ್ಧ ಬಲವಾದ ಸಾಕ್ಷ್ಯ ಕಲೆ ಹಾಕ್ತಿದೆ. ಅಲ್ಲದೇ SIT ಎಸ್ಪಿಪಿಯಾಗಿ ರವಿವರ್ಮ ಕುಮಾರ್ ನೇಮಕ ಮಾಡಲಾಗಿದೆ.
ವಿಡಿಯೋ ಹರಿಬಿಟ್ಟವರ ವಿರುದ್ಧ HDK ಹೋರಾಟ
ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್‌ನಲ್ಲಿ ವಿಡಿಯೋ ಹರಿಬಿಟ್ಟವರ ವಿರುದ್ಧ ಕಾನೂನು ಹೋರಾಟ ನಡೆಸಲು ಮಾಜಿ ಸಿಎಂ ಹೆಚ್‌ಡಿಕೆ ನಿರ್ಧರಿಸಿದ್ದಾರೆ. ಅಲ್ಲದೇ ಪ್ರಜ್ವಲ್ ಕೇಸ್‌ನ ಸಿಬಿಐಗೆ ವಹಿಸಲು ಕೋರ್ಟ್ ಮೊರೆ ಹೋಗಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ವಕೀಲರ ಜತೆಗೆ ಜೆಡಿಎಸ್ ಲೀಗಲ್ ಟೀಂ ಈಗಾಗಲೇ ಮಾತುಕತೆ ನಡೆಸಿದೆ ಎನ್ನಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:55 am, Sun, 26 May 24