AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗನವಾಡಿಗಳಲ್ಲಿ ಗರ್ಭಿಣಿ, ಮಕ್ಕಳಿಗೆ ಕೊಳೆತ ಮೊಟ್ಟೆ ಭಾಗ್ಯ; ಸರ್ಕಾರದ ವಿರುದ್ಧ ಜನರ ಆಕ್ರೋಶ

ರಾಜ್ಯದ ಕೆಲ ಅಂಗನವಾಡಿಗಳಲ್ಲಿ ಕೊಳೆತ ಮೊಟ್ಟೆಗಳನ್ನು ಗರ್ಭಿಣಿ, ಬಾಣಂತಿ, ಮಕ್ಕಳಿಗೆ ನೀಡಲಾಗುತ್ತಿದೆ. ಗರ್ಭಿನಿ ಮಹಿಳೆಯರು ಅಂಗನವಾಡಿಗಳಲ್ಲಿ ನೀಡಲಾದ ಮೊಟ್ಟೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಬೇಯಿಸಿದಾಗ ಕೊಳೆತೆ ಹೋಗಿರುವುದು ಕಂಡು ಬಂದಿದೆ.

ಮಂಜುನಾಥ ಕೆಬಿ
| Edited By: |

Updated on: Jul 13, 2023 | 2:33 PM

Share

ಹಾಸನ: ರಾಜ್ಯದ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆಗಳನ್ನು(Rotten Eggs)  ಪೂರೈಕೆ ಮಾಡಲಾಗುತ್ತಿದೆ. ಹಾಸನ, ಹಾವೇರಿ, ಕೊಡಗು ಸೇರಿದಂತೆ ಅನೇಕ ಜಿಲ್ಲೆಯ ಅಂಗನವಾಡಿ(Anganwadi) ಕೇಂದ್ರಗಳಿಗೆ ಕೊಳೆತ ಮೊಟ್ಟೆಗಳು ಪೂರೈಕೆಯಾಗುತ್ತಿದ್ದು ಜನ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹಾಸನ‌(Hassan) ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡಲಾಗಿರುವ ಮೊಟ್ಟೆಗಳು ಕಳಪೆಯಾಗಿದ್ದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯ ಸಾವಿರಾರು ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡಿರುವ ಗರ್ಬಿಣಿ ಮಹಿಳೆಯರು ಹಾಗು ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಯೋಜನೆಯ ಭಾಗವಾಗಿ ವಿತರಣೆ ಮಾಡಲಾಗಿರೋ ಮೊಟ್ಟೆಗಳು ಸಂಪೂರ್ಣ ಕಳಪೆಯಾಗಿದ್ದು ಮೊಟ್ಟೆಗಳನ್ನು ಸೇವಿಸಲಾಗದೆ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನ ವಿವಿಧ ಅಂಗನವಾಡಿಗಳಲ್ಲಿ ಗರ್ಭಿಣಿಯರಿಗೆ ವಿತರಣೆ ಮಾಡಲಾಗಿರುವ ಮೊಟ್ಟೆಗಳನ್ನು ಮನೆಗೆ ತೆರೆದುಕೊಂಡು ಹೋಗಿ ಬೇಯಿಸಿ ಸಿಪ್ಪೆ ಸುಲಿದಾಗ ಒಳಗೆ ಕಪ್ಪು ಬಣ್ಣದಲ್ಲಿ ಮೊಟ್ಟೆ ಕೊಳೆತು ಹೋಗಿರೋದು ಬಯಲಾಗಿದೆ.

ಇದನ್ನೂ ಓದಿ: ನೇಣಿಗೆ ಶರಣಾದ ಗೃಹಿಣಿ; ಕೊಲೆ ಶಂಕೆ ವ್ಯಕ್ತಪಡಿಸಿ ಪತಿ ಮನೆ ಮುಂದೆ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ!

ಜುಲೈ 6 ರಂದು ಹೊಳೆನರಸೀಪುರ ಪಟ್ಟಣದ ಹೌಸಿಂಗ್ ಬೋರ್ಡ್ ಪ್ರದೇಶದ ಕಿಕ್ಕೀರಮ್ಮ‌ದೇವಾಲದ ಸಮೀಪ ಇರುವ ಅಂಗನವಾಡಿಯಲ್ಲಿ ವಿತರಣೆ ಮಾಡಿದ್ದ ಮೊಟ್ಟೆಗಳು ಕಳಪೆಯಾಗಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು, ಇದೀಗ ಇಂದು ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ವಿತರಣೆ ಮಾಡಿರೊ‌ ಮೊಟ್ಟೆಗಳು ಕಳಪೆಯಾಗಿದ್ದು ಮಹಿಳೆಯರ ಅಕ್ರೋಶಕ್ಕೆ ಕಾರಣವಾಗಿದೆ. ವಿತರಣೆ ಮಾಡಿರೊ ಎಲ್ಲಾ ಮೊಟ್ಟೆಗಳು ಕೂಡ ಹಾಳಾಗಿದೆ. ಮೊಟ್ಟೆ ವಿತರಣೆ ಮಾಡಿರೊ ಗುತ್ತಿಗೆದಾರ ಹಾಗು ಅಧಿಕಾರಿಗಳ ಶಾಮೀಲಿನಿಂದ ಇಂತಹ ಘಟನೆ ನಡೆದಿದ್ದು ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಮಹಿಳೆಯರು ಅಗ್ರಹಿಸಿದ್ದಾರೆ. ಕಳಪೆಗುಟಮಟ್ಟದ ಮೊಟ್ಟೆ ನೀಡಿದ ಗುತ್ತಿಗೆದಾರನನ್ಮು ಕಪ್ಪು ಪಟ್ಟಿಗೆ ಸೇರಿಸಿ ಎಂದು ಒತ್ತಾಯ ಮಾಡಿದ್ದಾರೆ.

ಕೊಡಗಿನಲ್ಲೂ ಕೊಳೆತ ಮೊಟ್ಟೆ ಪೂರೈಕೆ

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವನತ್ತೂರು ಗ್ರಾಮದ ಅಂಗನವಾಡಿಯಲ್ಲಿ ಕೊಳೆತ ಮೊಟ್ಟೆಗಳನ್ನು ಪೂರೈಕೆ ಮಾಡಲಾಗಿದೆ. ಹೀಗಾಗಿ ಸ್ಥಳೀಯರು ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ