ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್, ತಪ್ಪಿದ ಭಾರಿ ಅನಾಹುತ: 24 ನವಜಾತ ಶಿಶುಗಳು ಬೇರೆಡೆಗೆ ಶಿಫ್ಟ್

| Updated By: ಗಂಗಾಧರ​ ಬ. ಸಾಬೋಜಿ

Updated on: Jul 02, 2023 | 4:40 PM

ಹಾಸನ: ನಗರದ ವೈದ್ಯಕೀಯ ಬೋದಕ ಆಸ್ಪತ್ರೆಯ ನವಜಾತ ಶಿಶುಗಳ ಐಸಿಯು ವಾರ್ಡ್‌ನಲ್ಲಿ ಶಾರ್ಟ್​​ ಸರ್ಕ್ಯೂಟ್ ಸಂಭವಿಸಿದ್ದು, ಭಾರಿ ಅನಾಹುತ ತಪ್ಪಿರುವಂತಹ ಘಟನೆ ನಗರದಲ್ಲಿ ನಡೆದಿದೆ. 24 ನವಜಾತ ಶಿಶುಗಳನ್ನು ಸಿಬ್ಬಂದಿಗಳು ಬೇರೆಡೆಗೆ ಶಿಫ್ಟ್ ಮಾಡಿದ್ದಾರೆ.

ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್, ತಪ್ಪಿದ ಭಾರಿ ಅನಾಹುತ: 24 ನವಜಾತ ಶಿಶುಗಳು ಬೇರೆಡೆಗೆ ಶಿಫ್ಟ್
ಶಾರ್ಟ್ ಸರ್ಕ್ಯೂಟ್
Follow us on

ಹಾಸನ: ನಗರದ ವೈದ್ಯಕೀಯ ಬೋದಕ ಆಸ್ಪತ್ರೆಯ ನವಜಾತ ಶಿಶುಗಳ ಐಸಿಯು ವಾರ್ಡ್‌ನಲ್ಲಿ ಶಾರ್ಟ್​​ ಸರ್ಕ್ಯೂಟ್ (Short circuit) ಸಂಭವಿಸಿದ್ದು, ಭಾರಿ ಅನಾಹುತ ತಪ್ಪಿರುವಂತಹ ಘಟನೆ ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಐಸಿಯುನಲ್ಲಿ ನಡೆದಿದೆ. ಐಸಿಯುನ ಎಸಿಯ ವಿದ್ಯುತ್ ಪರಿವರ್ತಕ ಬ್ಲಾಸ್ಟ್​ ಆದ ಪರಿಣಾಮ ಅವಘಡ ಸಂಭವಿಸಿದೆ. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಐಸಿಯುನಲ್ಲಿದ್ದ 24 ನವಜಾತ ಶಿಶುಗಳನ್ನು ಸಿಬ್ಬಂದಿಗಳು ಬೇರೆಡೆಗೆ ಶಿಫ್ಟ್ ಮಾಡಿದ್ದಾರೆ. ಆ ಮೂಲಕ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಶಾರ್ಟ್​​ ಸರ್ಕ್ಯೂಟ್​​ನಿಂದ ಐಸಿಯು ಕೋಣೆಯೊಳೆಗೆ ಹೊಗೆ ತುಂಬಿಕೊಂಡಿದೆ. ಆಸ್ಪತ್ರೆಯ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಕಿಟಕಿ ಗಾಜುಗಳನ್ನು ಒಡೆದು‌ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಹಿಮ್ಸ್‌ನ ನಿರ್ದೇಶಕ ರವಿಕುಮಾರ್​ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕ ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ಧಾರವಾಡ ಜಿಲ್ಲೆಗೆ 1400 ರೂ. ಅನುದಾನ ನೀಡಿದೆ: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ

ಘಟನೆ ಕುರಿತಾಗಿ ಮಕ್ಕಳ ಐಸಿಯು ವಾರ್ಡ್​ ಮುಖ್ಯಸ್ಥ ಡಾ.ಕುಮಾರ್ ಮಾತನಾಡಿದ್ದು, ಐಸಿಯುನಲ್ಲಿದ್ದ 24 ನವಜಾತ ಶಿಶುಗಳು ಸುರಕ್ಷಿತವಾಗಿದ್ದಾರೆ. ಮಕ್ಕಳ ವಾರ್ಡ್​ನ ತುರ್ತು ನಿಗಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ನಿಗಾಘಟಕದಲ್ಲಿ ಹೊಗೆ ಬಂದಿದ್ದರಿಂದ ಪೋಷಕರು ಗಾಬರಿಯಾಗಿದ್ದರು. ಎಸಿ ವಿದ್ಯುತ್ ಪರಿವರ್ತಕದಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದ ಅವಘಡ ಸಂಭವಿಸಿತ್ತು. ಕೂಡಲೇ ಎಚ್ಚೆತ್ತು ಮಕ್ಕಳನ್ನು ಆಸ್ಪತ್ರೆ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ ಎಂದು ಹೇಳಿದರು.

ಶಾರ್ಟ್ ಸರ್ಕ್ಯೂಟ್​ನಿಂದ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾಗಿದ ಗೃಹೋಪಯೋಗಿ ವಸ್ತುಗಳು 

ಕೋಲಾರ: ಶಾರ್ಟ್ ಸರ್ಕ್ಯೂಟ್​ನಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಸಾವಿರಾರು ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಕೋಲಾರದ ಗಾಂಧಿ ನಗರದಲ್ಲಿ ಘಟನೆ‌ ಕಂಡುಬಂದಿದ್ದು, ಆನಂದ ಎಂಬುವವರಿಗೆ ಸೇರಿದ ಮನೆಯಾಗಿದೆ. ಮೀಟರ್ ಬೋರ್ಡ್​ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿ ಎನ್ನಲಾಗಿದೆ. ಫ್ರಿಡ್ಜ್, ಟಿವಿ, ಪ್ಯಾನ್, ಬಲ್ಬ್​ಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇದನ್ನೂ ಓದಿ: Gruha Lakshmi Scheme: ಜುಲೈ 14ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ: ಸಚಿವ ಲಕ್ಷ್ಮೀ ಹೆಬ್ಬಾಳ್ಕರ್

ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ನಾಲ್ವರು ವಿದ್ಯಾರ್ಥಿಗಳು ಅಸ್ವಸ್ಥ

ರಾಯಚೂರು: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ನಾಲ್ವರು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವಂತಹ ಘಟನೆ ತಾಲೂಕಿನ ಅಪ್ಪನದೊಡ್ಡಿ ಸರ್ಕಾರಿ ಶಾಲೆಯಲ್ಲಿ ನಿನ್ನೆ ನಡೆದಿತ್ತು. ವೈದ್ಯರನ್ನು ಕರೆಸಿ ಶಾಲೆಯಲ್ಲೇ ಅಸ್ವಸ್ಥ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಮಧ್ಯಾಹ್ನ ಬಿಸಿಯೂಟಕ್ಕೆ ಸಿಬ್ಬಂದಿಗಳು ಉಪ್ಪಿಟ್ಟು ಮಾಡಿದ್ದರು. ಬಳಿಕ ಅಡುಗೆ ಪಾತ್ರೆಯ ತಳಹದಿಯಲ್ಲಿ ಹಲ್ಲಿ ಪತ್ತೆಯಾಗಿತ್ತು. ಘಟನೆಗೆ ಸದ್ಯ ಇಬ್ಬರು ಅಡುಗೆ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಕೇಳಿಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:03 pm, Sun, 2 July 23