ಬಾಲಕರ ಹಾಸ್ಟೆಲ್​ಗೆ ಬಂದು ಬೀಟ್ ಪೊಲೀಸರಿಂದ ದುರ್ವರ್ತನೆ ಆರೋಪ: ವಿದ್ಯಾರ್ಥಿಗಳಿಂದ ಪ್ರತಿಭಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 03, 2023 | 6:47 PM

Hassan News: ಬಾಲಕರ ಹಾಸ್ಟೆಲ್​ಗೆ ರಾತ್ರಿ ವೇಳೆ ಬಂದು ಬೀಟ್ ಪೊಲೀಸರಿಂದ ದುರ್ವರ್ತನೆ ಆರೋಪ ಕೇಳಿಬಂದಿದೆ. ಹಾಗಾಗಿ ಮೂವರು ಪೊಲೀಸ್ ಕಾನ್ಸ್ಟೇಬಲ್​​ಗಳ ವಿರುದ್ದ ವಿದ್ಯಾರ್ಥಿಗಳು ದಿಢೀರ್​ ಪ್ರತಿಭಟಿಸಿರುವಂತಹ ಘಟನೆ ವಿದ್ಯಾನಗರದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆದಿದೆ.

ಬಾಲಕರ ಹಾಸ್ಟೆಲ್​ಗೆ ಬಂದು ಬೀಟ್ ಪೊಲೀಸರಿಂದ ದುರ್ವರ್ತನೆ ಆರೋಪ: ವಿದ್ಯಾರ್ಥಿಗಳಿಂದ ಪ್ರತಿಭಟನೆ
ವಿದ್ಯಾರ್ಥಿಗಳಿಂದ ಪ್ರತಿಭಟನೆ
Follow us on

ಹಾಸನ, ಆಗಸ್ಟ್​ 03: ಬಾಲಕರ ಹಾಸ್ಟೆಲ್​ಗೆ (hostel) ರಾತ್ರಿ ವೇಳೆ ಬಂದು ಬೀಟ್ ಪೊಲೀಸರಿಂದ ದುರ್ವರ್ತನೆ ಆರೋಪ ಕೇಳಿಬಂದಿದೆ. ಹಾಗಾಗಿ ಮೂವರು ಪೊಲೀಸ್ ಕಾನ್ಸ್ಟೇಬಲ್​​​ಗಳ ವಿರುದ್ದ ವಿದ್ಯಾರ್ಥಿಗಳು ದಿಢೀರ್​ ಪ್ರತಿಭಟಿಸಿರುವಂತಹ ಘಟನೆ ವಿದ್ಯಾನಗರದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆದಿದೆ. ರಾತ್ರಿ ಗಸ್ತಿನಲ್ಲಿದ್ದ ವೇಳೆ ಕಾನೂನು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಸ್ಟೆಲ್​ಗೆ ಬಂದ ಪೊಲೀಸ್ ಕಾನ್ಸ್ಟೇಬಲ್​​ಗಳಿಂದ ದುರ್ವರ್ತನೆ ತೋರಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್​ಗೆ ಬಂದು ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ರಾತ್ರಿ ಸ್ಥಳಕ್ಕೆ ಆಗಮಿಸಿದ ಹಾಸನ ಡಿವೈಎಸ್ಪಿ ಮುರಳಿದರ್​, ವಿದ್ಯಾರ್ಥಿಗಳ ದೂರು ಆಧರಿಸಿ ಬೀಟ್ ಪೊಲೀಸರ ನಡೆ ಬಗ್ಗೆ ಅವರಿಂದ ಕ್ಷಮೆ ಕೇಳಿಸಿ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ.

ಇದನ್ನೂ ಓದಿ: Mysuru Bengaluru Expressway ಮಂಡ್ಯ ಬಳಿ ಟಿಪ್ಪರ್ ಲಾರಿ ಟೈಯರ್ ಬ್ಲಾಸ್ಟ್, ಸ್ವಲ್ಪದರಲ್ಲೇ ತಪ್ಪಿದ ಅವಘಡ

ಸರ್ಕಾರಿ ಬಸ್ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ

ವಿಜಯಪುರ: ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ಹಿನ್ನೆಲೆ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಸರಿಯಾಗಿ ಬಸ್ ಬರದೆ, ಸಿಗದೆ ಇರುವುದಕ್ಕೆ ಅಖಿಲ‌ ಭಾರತೀಯ ವಿಧ್ಯಾರ್ಥಿ ಪರಿಷತ್ ಇಂಡಿ ಘಟಕದ ನೇತೃತ್ವದಲ್ಲಿ ಇತ್ತೀಚೆಗೆ ರಸ್ತೆಯಲ್ಲಿಯೇ ಸರ್ಕಾರಿ ಬಸ್ ತಡೆದು ಪ್ರತಿಭಟನೆ ಮಾಡಿದ್ದಾರೆ.

ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಬಳಿ ವಿದ್ಯಾರ್ಥಿಗಳು ಸೋಲ್ಲಾಪುರ ಮಾರ್ಗವಾಗಿ ಹಲಸಂಗಿ ಇಂಡಿಗೆ ತೆರಳುವ ಸುಮಾರು 10 ಕ್ಕೂ ಹೆಚ್ಚು ಬಸ್ ತಡೆದು ಪ್ರತಿಭಟನೆ ಮಾಡಿದ್ದು, ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಇಲ್ಲದ ಕಾರಣ ತರಗತಿಗಳಿಗೆ ಹಾಜರಾಗಲು ಆಗಲ್ಲಾ ಎಂದು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸರ್ಕಾರ ಹಾಗೂ ಸಾರಿಗೆ ಇಲಾಖೆ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 45 ಕಂದಾಯ ಅಧಿಕಾರಿಗಳ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಕೆಲ ಆಧಿಕಾರಿಗಳು ಬಸ್ ಸೌಲಭ್ಯ ಕೇಳಿದರೆ ವಿದ್ಯಾರ್ಥಿಗಳೊಂದಿಗೆ ಸರಿಯಾಗಿ ಸ್ಪಂಧಿಸುವುದಿಲ್ಲಾ ನಿರ್ಲಕ್ಷ್ಯ ಮಾಡುತ್ತಾರೆಂದು ದೂರಿದ್ದಾರೆ. ಸಾರಿಗೆ ಇಲಾಖೆ ಆಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪಟ್ಟು ಹಿಡಿದ ಕಾರಣ ಸ್ಥಳಕ್ಕೆ ಇಂಡಿಯ ಡಿಪೋ ಮ್ಯಾನೇಜರ್ ವಾಗೇಶ್ ಆಗಮಿಸಿದ್ದರು.

ನಿಗದಿತ ಸಮಯಕ್ಕೆ ಬಸ್​ಗಳನ್ನು ಬಿಡಲಾಗುತ್ತದೆ ಎಂದು ಪ್ರತಿಭಟನಾನಿರತ ವಿಧ್ಯಾರ್ಥಿಗಳಿಗೆ ಭರವಸೆ ನೀಡಿ ಹೋರಾಟ ಕೈಬಿಡಬೇಕೆಂದು ಮನವಿ ಮಾಡಿಕೊಂಡರು. ಅಧಿಕಾರಿಗಳ ಮನವಿಗೆ ಸ್ಪಂಧಿಸಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮೊಟಕುಗೊಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:38 pm, Thu, 3 August 23