AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಸ್​ಐ ಅಕ್ರಮದ ಮೂಲ ಕಿಂಗ್​​ಪಿನ್​​ ಹೆಸರು ಹೇಳಿದ್ರೆ ಸರ್ಕಾರವೇ ಉರುಳುತ್ತೆ: ಹೊಸ ಬಾಂಬ್​ ಸಿಡಿಸಿದ, ಮಾಜಿ ಸಿಎಂ ಹೆಚ್.​​ಡಿ. ಕುಮಾರಸ್ವಾಮಿ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಾಂತ್ರಿಕ ವಿಭಾಗದ ಕಟ್ಟಡ ಕಟ್ಟಲು ಹಣ ಮಂಜೂರಿಗೆ ಅಶ್ವಥ್ ನಾರಾಯಣ್ ಪತ್ರ ಬರೆದಿದ್ದಾರೆ. ಇದರಲ್ಲಿ 18 ಕೋಟಿಯಿಂದ 85 ಕೋಟಿಗೆ ಅಂದಾಜು ವೆಚ್ಚ ಹೆಚ್ಚಾಗಿದೆ ಎಂದರು. 

ಪಿಎಸ್​ಐ ಅಕ್ರಮದ ಮೂಲ ಕಿಂಗ್​​ಪಿನ್​​ ಹೆಸರು ಹೇಳಿದ್ರೆ ಸರ್ಕಾರವೇ ಉರುಳುತ್ತೆ: ಹೊಸ ಬಾಂಬ್​ ಸಿಡಿಸಿದ, ಮಾಜಿ ಸಿಎಂ ಹೆಚ್.​​ಡಿ. ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್.​​ಡಿ. ಕುಮಾರಸ್ವಾಮಿ
TV9 Web
| Edited By: |

Updated on: May 06, 2022 | 4:15 PM

Share

ಹಾಸನ: ಪಿಎಸ್​ಐ ಅಕ್ರಮದ ಮೂಲ ಕಿಂಗ್​​ಪಿನ್​​ ಹೆಸರು ಹೇಳಲು ಸಾಧ್ಯವಾ? ಆ ಕಿಂಗ್​​​ಪಿನ್ ಹೆಸರು​​​​ ಹೇಳಿದ್ರೆ ಸರ್ಕಾರವೇ ಉರುಳುತ್ತೆ ಎಂದು ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.​​ಡಿ. ಕುಮಾರಸ್ವಾಮಿ ಹೊಸ ಬಾಂಬ್​ ಸಿಡಿಸಿದ್ದಾರೆ.​ PSI ಅಕ್ರಮದ ಮೂಲ ಕಿಂಗ್​​ಪಿನ್​ನನ್ನು ಟಚ್ ಮಾಡೋಕೆ ಆಗಲ್ಲ. ಹೀಗಾಗಿ ಆ ಕಿಂಗ್​ಪಿನ್ ಬಗ್ಗೆ ಮಾತಾಡಲು ಯಾರೂ ಮುಂದಾಗಿಲ್ಲ. ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಪ್ರಶ್ನೆ ಸೋರಿಕೆ ಆಗಿದೆ. 500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಹೋಗಿದೆ ಎಂದು ಹೇಳಿದರು.

ಅಶ್ವಥ್ ನಾರಾಯಣ್ ಹಲವಾರು ಯೂನಿವರ್ಸಿಟಿಗಳ ಪಿಂಚಣಿ ಹಣವನ್ನ ಡೈವರ್ಟ್ ಮಾಡಿದ್ದಾರೆ. ಕಟ್ಟಡ ಕಟ್ಟಲು ಐಐಟಿ ಕಟ್ಟಲು ಹಣ ಡೈವರ್ಟ್ ಮಾಡಿದ್ದಾರೆ. ಈ ಹಣವನ್ನ ಡೈವರ್ಟ್ ಮಾಡಿ ಯಾರಿಂದ ಕೆಲಸ ಮಾಡಿಸುತ್ತಿದ್ದೀರಿ. ನಿಮ್ಮ ಇಲಾಖೆಯಲ್ಲಿ ಇಂಜಿನಿಯರ್‌ಗಳಿಲ್ಲವೇ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಾಂತ್ರಿಕ ವಿಭಾಗದ ಕಟ್ಟಡ ಕಟ್ಟಲು ಹಣ ಮಂಜೂರಿಗೆ ಅಶ್ವಥ್ ನಾರಾಯಣ್ ಪತ್ರ ಬರೆದಿದ್ದಾರೆ. ಇದರಲ್ಲಿ 18 ಕೋಟಿಯಿಂದ 85 ಕೋಟಿಗೆ ಅಂದಾಜು ವೆಚ್ಚ ಹೆಚ್ಚಾಗಿದೆ ಎಂದರು.

ರಾಜ್ಯದಲ್ಲಿ‌ ನಿರಂತರ ಆಡಳಿತ ದುಷ್ಪರಿಣಾಮ ನಡೆಯುತ್ತಿದೆ. ಇದರಿಂದ ನಮ್ಮ ರಾಜ್ಯ ಎಲ್ಲಿಗೆ ಹೋಗಬಹುದು ಎಂದು ಭಯವಿದೆ. ಯಾರದ್ದೋ ಒಬ್ಬ ಮಂತ್ರಿಯ ತಲೆದಂಡದ ಬಗ್ಗೆ ನಾನು ಮಾತನಾಡುತ್ತಿಲ್ಲ. ನಾನು ಮೊದಲು ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರ ಮಾಡಿದ್ದೆ. ಯಡಿಯೂರಪ್ಪನವರು ನಮ್ಮ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿದ್ರು. ಜೆಡಿಎಸ್ ಮತ್ತು ಅಪ್ಪ ಮಕ್ಕಳನ್ನ ಮುಗಿಸುವುದೇ ನನ್ನ ಗುರಿ ಎಂದಿದ್ರು. ನಾನು ನನ್ನ ಕೊನೆಯ ಭಾಷಣದಲ್ಲಿ ಉತ್ತಮ ಕೆಲಸ ಮಾಡಿ ಎಂದಿದ್ದೆ. ಅಲ್ಲಿಂದ‌ ಇಲ್ಲಿವರೆಗೆ ಭ್ರಷ್ಟಾಚಾರದ‌ ಬಗ್ಗೆಯೂ ಚರ್ಚಿಸಿಲ್ಲ. ಹಲವಾರು ಇಲಾಖೆಯಲ್ಲಿ ಭ್ರಷ್ಟಾಚಾರ ನಡೀತಿದೆ. ಇತ್ತೀಚೆಗೆ ನೇಮಕಾತಿ ವಿಚಾರದಲ್ಲಿ ದೊಡ್ಡ ಮಟ್ಟದ ಅಕ್ರಮ ನಡಿಯುತ್ತಿದೆ. ಏನೆ ತನಿಖೆ ಮಾಡಿದ್ರೂ ತಾರ್ಕಿಕ ಅಂತ್ಯ ಏನಾಗುತ್ತೆ. ಈ ಹಿಂದಿನ ಸರ್ಕಾರಗಳು ಯಾವ ರೀತಿ ತನಿಖೆಗೆ ಕ್ರಮ ಕೈಗೊಂಡಿವೆ. ಅಂತಿಮವಾಗಿ ಇದರಿಂದ ಆಡಳಿತದ ಮೇಲೆ ದುಷ್ಪರಿಣಾಮ ಆಗುತ್ತೆ. ನೆನ್ನೆ ಅಮಿತ್ ಶಾ ನಿಮ್ಮ ಪಾಡಿಗೆ ನೀವು ಆಡಳಿತ ನಡೆಸಿ ಎಂದು ಹೇಳಿ ಹೋಗಿದ್ದಾರೆ. ಈ ನಾಡಿನಲ್ಲಿ ಏನೇ ಲೂಟಿ ಆದ್ರೂ ನಮಗೆ ಸರ್ಕಾರ ತರುವುದು ಗೊತ್ತಿದೆ ಎಂದು ಹೇಳಿ ಹೋಗಿದ್ದಾರೆ. ಈ ನಾಡಿನಲ್ಲಿ ಏನೇನು ನಡೆದಿದೆ ಎಂದು ಪಟ್ಟಿ ಮಾಡಿ ಹೇಳುತ್ತೇನೆ ಎಂದು ಹೇಳಿದರು.

ಮಂಗಳೂರು ‌ಗೋಲೀಬಾರ್, ಬಾಂಬ್ ವಿಚಾರ, ಡ್ರಗ್ ವಿಚಾರ ಏನಾಯ್ತು, ಯಾವುದೇ ಒಂದು ವಿಚಾರ ತಾರ್ಕಿಕ ಅಂತ್ಯ ಕಾಣೋದಿಲ್ಲ. ಮಾಗಡಿಯಲ್ಲಿ ಒಂದೆರಡು ವಿದ್ಯಾರ್ಥಿಗಳು ಸೆಲೆಕ್ಟ್ ಆಗಿರೋದಕ್ಕೆ ಕಾಂಗ್ರೆಸ್​ನವರು ಬೊಬ್ಬೆ ಹೊಡೆದಿದ್ದಾರೆ. ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅದರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎನ್ನುತ್ತೀರಿ. ಇದರ ಹಿಂದೆ ಯಾರ ಕೈವಾಡವಿದೆ. ಈ ಹುದ್ದೆಯ ಹಿಂದೆಯೂ ಶೇ. 80 ರಷ್ಟು ಹಗರಣ ನಡೆದಿದೆ ಎನ್ನುತ್ತಿದ್ದಾರೆ. ಇಲ್ಲಿಯೂ ಅಕ್ರಮವಾಗಿ ಪರೀಕ್ಷೆ ನಡೆದಿದೆ ಎಂಬ ಮಾಹಿತಿ ಇದೆ. ಹಳೆ ಮೈಸೂರು ಭಾಗದಲ್ಲಿ ದಳಪತಿಗಳನ್ನ ಚಿದ್ರ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಈ ದಳಪತಿಗಳ ಕೋಟೆಯಲ್ಲ‌ ರಾಜ್ಯವನ್ನೇ ಚಿತ್ರನ್ನ ಮಾಡಿದ್ದಾರೆ. ನಮ್ಮ ಕೋಟೆಯನ್ನ ಚಿದ್ರ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಜನ ತೀರ್ಮಾನಿಸುತ್ತಾರೆ ಎಂದು ಹೇಳಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.