ಬುಗುರಿ, ಚಿನ್ನಿದಾಂಡು, ಸರಗೋಲು, ಹಗ್ಗಜಗ್ಗಾಟ ಆಡಿ ಖುಷಿ ಅನುಭವಿಸಿದ ನಂತರ ಮಕ್ಕಳು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಎಕ್ಕಾ ಸಕ್ಕ ಎಕ್ಕಾ ಸಕ್ಕ ಅನ್ನೋ ಹಾಡುಗಳಿಗೆ ಸಖತ್ ಸ್ಟೆಪ್ ಹಾಕಿ ಮಸ್ತ್ ಮಜಾ ಮಾಡಿದರು. ಮಕ್ಕಳ ಜೊತೆಗೆ ಶಿಕ್ಷಕರ ಬಳಗದ ಸದಸ್ಯರು ಹಾಗೂ ಮಕ್ಕಳ ಪೋಷಕರು ಭರ್ಜರಿ ಸ್ಟೆಪ್ಸ್ ಹಾಕಿದರು. ದೇಶೀಯ ಆಟಗಳು ಮರೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ದೇಶೀಯ ಆಟಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮಕ್ಕಳು ದೇಶೀಯ ಆಟಗಳನ್ನು ಸವಿಯುವಂತೆ ಮಾಡುವ ಸಲುವಾಗಿ ದೇಶೀಯ ಆಟಗಳನ್ನು ಆಯೋಜನೆ ಮಾಡಲಾಗಿತ್ತು.