ಹಾವೇರಿ: ರಣಬಿಸಿಲಿಗೆ ತತ್ತರಿಸಿದ ಕೋಳಿ ಸಾಕಾಣಿಕೆ ಉದ್ಯಮ, ಶಾಖಕ್ಕೆ ಕೋಳಿಗಳು ಬಲಿ

|

Updated on: May 10, 2024 | 7:42 PM

ಹಾವೇರಿ ಜಿಲ್ಲೆಯ ಜೀವನಾಡಿ ನದಿಗಳಾದ ತುಂಗಭದ್ರಾ, ಕುಮದ್ವತಿ, ವರದಾ ಹಾಗೂ ಧರ್ಮಾ ನದಿ ಸಂಪೂರ್ಣವಾಗಿ ಖಾಲಿಯಾಗಿವೆ.‌ ದಿನದಿಂದ ದಿನಕ್ಕೆ ಉಷ್ಟಾಂಶ ಹೆಚ್ಚಾಗುತ್ತಿದೆ. ಇದರಿಂದ ಜನ ಮತ್ತು ಜಾನುವಾರು ಜೊತಗೆ ಕೋಳಿ ಉದ್ಯಮ ನಲುಗಿ ಹೋಗಿದೆ. ಪತ್ರಿ ಕೋಳಿಸಾಕಾಣಿಕೆ ಕೇಂದ್ರದಲ್ಲಿ ಒಂದು ಲಕ್ಷ ಕ್ಕೂ ಅಧಿಕ ಕೋಳಿಗಳು ಇವೆ. ಆದರೆ ಬಿಸಿಲಿನತಾಪಕ್ಕೆ ಹೆಚ್ಚಾಗಿದ್ದರಿಂದ ಕೋಳಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಹಾವೇರಿ: ರಣಬಿಸಿಲಿಗೆ ತತ್ತರಿಸಿದ ಕೋಳಿ ಸಾಕಾಣಿಕೆ ಉದ್ಯಮ, ಶಾಖಕ್ಕೆ ಕೋಳಿಗಳು ಬಲಿ
ರಣಬಿಸಿಲಿಗೆ ತತ್ತರಿಸಿದ ಕೋಳಿ ಸಾಕಾಣಿಕೆ ಉದ್ಯಮ, ಶಾಖಕ್ಕೆ ಕೋಳಿಗಳು ಬಲಿ
Follow us on

ಹಾವೇರಿ, ಮೇ 10: ಈ ಭಾರಿಯ ರಣಬಿಸಿಲಿಗೆ (Sunlight) ಜನ ಜಾನುವಾರು ತತ್ತರಿಸಿ ಹೋಗಿವೆ. ಅದರಲ್ಲೂ ಇತ್ತೀಚಿಗೆ ಪ್ರತಿನಿತ್ಯ 39 ರಿಂದ 40 ರಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಇದರಿಂದ ಜನರು ಹೈರಾಣಾಗಿದ್ದು ಒಂದು ಕಡೆಯಾದರೆ, ಈ ಭಾರಿಯ ರಣಬಿಸಿಲಿಗೆ ಕೋಳಿ ಉದ್ಯಮಿದಾರರು (Poultry farming) ತತ್ತರಿಸಿ ಹೋಗಿದ್ದಾರೆ. ರಣಬಿಸಿಲಿಗೆ ಕೋಳಿಗಳು ಸಾವನ್ನಪ್ಪದ್ದು, ಮೊಟ್ಟೆಯ ಉತ್ಪಾದನೆ ಕಡಿಮೆಯಾಗುತ್ತಿದೆ. ಇದರಿಂದ ಕೋಳಿ ಉದ್ಯಮೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾರಿಯ ಬಿಸಿಲಿಗೆ ಜನ, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಕಂಗೆಟ್ಟು ಹೋಗಿವೆ. ಇದಕ್ಕೆ ಕೋಳಿ ಉದ್ಯಮ ಏನು ಹೊರತಾಗಿಲ್ಲ. ರಣಬಿಸಿಲಿಗೆ ತತ್ತರಿಸಿ ಹೋದ ಸಾವಿರಾರೂ ಕೋಳಿಗಳು ಬಿಸಿಲಿನ ತಾಪಕ್ಕೆ ಸಾವನಪ್ಪುತ್ತಿವೆ.

ತಾಪಮಾನ ಕಡಿಮೆ ಮಾಡಲು ಸ್ಪಿಂಕ್ಲರ್ ಮೂಲಕ ಮೇಲ್ಚಾವಣೆಗೆ ನೀರು ಹಾಕಿದರು ಪ್ರಯೋಜನ ಆಗಿಲ್ಲಾ. ಹಾವೇರಿ ಜಿಲ್ಲೆಯ ಜೀವನಾಡಿ ನದಿಗಳಾದ ತುಂಗಭದ್ರಾ, ಕುಮದ್ವತಿ, ವರದಾ ಹಾಗೂ ಧರ್ಮಾ ನದಿ ಸಂಪೂರ್ಣವಾಗಿ ಖಾಲಿಯಾಗಿವೆ.‌ ದಿನದಿಂದ ದಿನಕ್ಕೆ ಉಷ್ಟಾಂಶ ಹೆಚ್ಚಾಗುತ್ತಿದೆ. ಇದರಿಂದ ಜನ ಮತ್ತು ಜಾನುವಾರು ಜೊತಗೆ ಕೋಳಿ ಉದ್ಯಮ ನಲುಗಿ ಹೋಗಿದೆ.

ಇದನ್ನೂ ಓದಿ: ರಣ ಬಿಸಿಲಿನಿಂದ ಬಳ್ಳಿಯಲ್ಲೇ ಬಾಡ್ತಿದೆ ದ್ರಾಕ್ಷಿ; ವಾಟರ್ ಸ್ಪ್ರೇ ಮಾಡುವ ಮೂಲಕ ರಕ್ಷಣೆಗೆ ಮುಂದಾದ ರೈತ

ಪತ್ರಿ ಕೋಳಿಸಾಕಾಣಿಕೆ ಕೇಂದ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಕೋಳಿಗಳು ಇವೆ. ಆದರೆ ಬಿಸಿಲಿನತಾಪಕ್ಕೆ ಹೆಚ್ಚಾಗಿದ್ದರಿಂದ ಕೋಳಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಉಷ್ಟಾಂಶ ಹೆಚ್ಚಾಗಿದ್ದರಿಂದ ಕೋಳಿ ಸಾವನ್ನಪ್ಪತ್ತಿದ್ದು, ಅದರ ಜೊತೆಗೆ ಮೊಟ್ಟೆಯ ಉತ್ಪಾದನೆ ಕಡಿಮೆಯಾಗುತ್ತಿದೆ ಅಂತಾರೆ ಮಾಲೀಕರು.

ರಾಯಚೂರು, ಬಳ್ಳಾರಿ, ಸೇರಿದಂತೆ ಹಲವು ಜಿಲ್ಲೆಯಲ್ಲಿ ಉಷ್ಟಾಂಶ ಹೆಚ್ಚಾದಂತೆ ಹಾವೇರಿ ಜಿಲ್ಲೆಯಲ್ಲಿ ರಣಬಿಸಿಲು ಹೆಚ್ಚಾಗಿದೆ.‌ ಪ್ರತಿವರ್ಷ 35 ಡಿಗ್ರಿ ಉಷ್ಟಾಂಶ ಇರುವ ಜಿಲ್ಲೆಯಲ್ಲಿ ಈಗ ಸುಮಾರು 40 ಡಿಗ್ರಿ ಉಷ್ಟಾಂಶ ದಾಖಲಾಗುತ್ತಿದೆ. ಹೀಗಾಗಿ ಕೋಳಿ ಉದ್ಯಮೆದಾರರು ಕೋಳಿಯನ್ನ ಬದುಕಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಕೋಳಿಗಳಿಗೆ ಬೆಳಗ್ಗೆ ಆಹಾರ ನೀಡುವುದು, ಫಾರ್ಮ್ಂ ಮೇಲ್ವಾವಣೆಗೆ ಜೆಟ್ ಮೂಲಕ ನೀರು ಹರಿಸಿ ತಪಾಮಾನ ಕಡಿಮೆ ಮಾಡಿ ಕೋಳಿಯ ಸಂರಕ್ಷಣೆ ಮಾಡುತ್ತಿದ್ದಾರೆ. ಆದರೂ ಸಹ ಭಾರಿ ತಾಪಕ್ಕೆ ಕೋಳಿಗಳು ಸಾವನ್ನಪ್ಪಿದ್ದು ಮೊಟ್ಟೆಯ ಉತ್ಪಾದನೆಯಲ್ಲಿ ಕಡಿಮೆಯಾಗಿದೆ.

ಇದನ್ನೂ ಓದಿ: ಮಾವು ಪ್ರಿಯರೇ ಎಚ್ಚರ! ಮಾರುಕಟ್ಟೆಗೆ ಬಂದಿವೆ ರಾಸಾಯನಿಕ ಮಿಶ್ರಿತ ಹಣ್ಣುಗಳು

ಈ ಭಾರಿಯ ಬಿರುಬಿಸಲು ಜನ ಮತ್ತು ಜಾನುವಾರು ಅಲ್ಲದೆ ಕೋಳಿ ಉದ್ಯೋಮಕ್ಕೆ ಸಾಕಷ್ಟು ಸಮಸ್ಯೆಯನ್ನ ಉಂಟು ಮಾಡಿದೆ. ಅದರೂ ಕೋಳಿಯ ಉದ್ಯಮೆದಾರರು ಬಿಸಿಲಿನ ತಾಪ ಮತ್ತು ಮೊಟ್ಟೆಗಳ ಬೇಡಿಕೆ ಕಡಿಮೆಯಾಗಿದ್ದರಿಂದ ತತ್ತರಿಸಿ ಹೋಗಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.