AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ವಾಸಿಸುವ ಒಂಟಿ ಮಹಿಳೆಯರೇ ಎಚ್ಚರ! ಚೈನ್ ಕದಿಯಲು ಬಂದು ಮಹಿಳೆಯನ್ನೇ ಹತ್ಯೆಗೈದ್ರು

ಒಂಟಿ ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆಗೈದು ಚಿನ್ನದ ಸರ ಕಳವು ಮಾಡಿರುವಂತಹ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ನಡೆದಿದೆ. ದಿವ್ಯಾ (36) ಮೃತ ಮಹಿಳೆ. ಗಂಡ ಗುರುಮೂರ್ತಿ ಸಲೂನ್​ ಕೆಲಸಕ್ಕೆ ಹೋಗಿದ್ದಾರೆ. ಈ ವೇಳೆ ದಿವ್ಯಾ ಮನೆಯಲ್ಲಿ ಒಂಟಿಯಾಗಿದ್ದರು. ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮಹಿಳೆಯ ಮೃತದೇಹವನ್ನು ಆರ್​ಆರ್​ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ವಾಸಿಸುವ ಒಂಟಿ ಮಹಿಳೆಯರೇ ಎಚ್ಚರ! ಚೈನ್ ಕದಿಯಲು ಬಂದು ಮಹಿಳೆಯನ್ನೇ ಹತ್ಯೆಗೈದ್ರು
ಬೆಂಗಳೂರಿನಲ್ಲಿ ವಾಸಿಸುವ ಒಂಟಿ ಮಹಿಳೆಯರೇ ಎಚ್ಚರ! ಚೈನ್ ಕದಿಯಲು ಬಂದು ಮಹಿಳೆಯನ್ನೇ ಹತ್ಯೆಗೈದ್ರು
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:May 10, 2024 | 9:21 PM

Share

ಬೆಂಗಳೂರು, ಮೇ 10: ತಮ್ಮ ವೃತ್ತಿಜೀವನದ ಪ್ರಗತಿಗಾಗಿ ಅಥವಾ ವಿದ್ಯಾಭ್ಯಾಸಕ್ಕೆ ಸಾಕಷ್ಟು ಮಹಿಳೆಯರು ಸಿಲಿಕಾನ್ ಸಿಟಿಗೆ (Bangaluru) ಬರುತ್ತಾರೆ. ಇವರೆಲ್ಲ ಪ್ರಾಣ, ಮಾನಕ್ಕಾಗಿ ಪೊಲೀಸರು ಎಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಕಳ್ಳತನ, ಕೊಲೆ ಮಾತ್ರ ನಿಲ್ಲುತ್ತಿಲ್ಲ. ಹೀಗಾಗಿ ಬೆಂಗಳೂರು ಮಹಿಳೆಯರಿಗೆ (woman) ಎಷ್ಟು ಸುರಕ್ಷಿತ ಎಂಬ ಮಾತುಗಳು ಸಾಕಷ್ಟು ಭಾರಿ ಕೇಳಿ ಬರುತ್ತಿರುತ್ತದೆ. ಸದ್ಯ ಇದಕ್ಕೆ ಸಾಕ್ಷಿ ಎಂಬಂತೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ಓರ್ವ ಒಂಟಿ ಮಹಿಳೆಯ ಕೊಲೆ ನಡೆದಿದೆ.

ಒಂಟಿ ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆಗೈದು ಚಿನ್ನದ ಸರ ಕಳವು ಮಾಡಿರುವಂತಹ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ನಡೆದಿದೆ. ದಿವ್ಯಾ (36) ಮೃತ ಮಹಿಳೆ. ಗಂಡ ಗುರುಮೂರ್ತಿ ಸಲೂನ್​ ಕೆಲಸಕ್ಕೆ ಹೋಗಿದ್ದಾರೆ. ಈ ವೇಳೆ ದಿವ್ಯಾ ಮನೆಯಲ್ಲಿ ಒಂಟಿಯಾಗಿದ್ದರು.

ಇದನ್ನೂ ಓದಿ: SSLC ವಿಧ್ಯಾರ್ಥಿನಿ ಮೀನಾ ಕೊಲೆಗಡುಕ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಈ ವೇಳೆ ಆರೋಪಿ ಮಹಿಳೆ ಕೊಲೆಗೈದು ಕುತ್ತಿಯಲ್ಲಿದ್ದ ಚೈನ್ ಕಳವು ಮಾಡಿದ್ದಾನೆ. ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮಹಿಳೆಯ ಮೃತದೇಹವನ್ನು ಆರ್​ಆರ್​ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: ಕಲಬುರಗಿ: ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯ ಹತ್ಯೆ

ಪೊಲೀಸರು ಗಂಡನನ್ನು ವಿಚಾರಿಸಿದ್ದು ತಾನು ಸಲೂನ್​ಗೆ ಹೋಗಿದ್ದಾಗ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ದಿವ್ಯಾಳ ಕೊರಳಲ್ಲಿದ್ದ ಚಿನ್ನದ ಸರ ಕೂಡ ನಾಪತ್ತೆಯಾಗಿರುವುದು ಮಾಹಿತಿ ನೀಡಿದ್ದಾರೆ.

ಗೇಟ್ ಮುರಿದು ಬಿದ್ದು ಏಳು ವರ್ಷದ ಪುಟ್ಟ ಬಾಲಕಿ ಸಾವು

ನೆಲಮಂಗಲ: ಆ ದಂಪತಿಯ ಮೊದಲ‌ ಮಗು ಆರು ವರ್ಷದ ಹಿಂದೆ ನೀರಿನ ಸಂಪ್‌ಗೆ ಬಿದ್ದು ಸಾವನ್ನಪ್ಪಿತ್ತು. ಈಗ ಮತ್ತೊಂದು ಮಗು ಸಾವನ್ನಪ್ಪಿ ಆ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ರಾಯಚೂರು ಜಿಲ್ಲೆ ದೇವದುರ್ಗದ ಮುಕ್ಕಣ್ಣ ಮತ್ತು ಬಾಲಮ್ಮ ದಂಪತಿಗಳ ಪುತ್ರಿ ಯಲ್ಲಮ್ಮ. ಊರಿನಲ್ಲಿ ಸರ್ಕಾರಿ ಶಾಲೆಗೆ ಹೋಗುತ್ತಿದ್ದ ಯಲ್ಲಮ್ಮ ಒಂದನೆ ತರಗತಿ ಮುಗಿಸಿ ಎರಡನೇ ತರಗತಿಗೆ ಹೋಗಬೇಕಿದ್ದ ಯಲ್ಲಮ್ಮ. ಅಪ್ಪ ಅಮ್ಮನ ಜೊತೆ ಬೇಸಿಗೆ ರಜೆ ಕಳೆಯಲು ಬಂದಿದ್ದು, ಅಮ್ಮ ಮನೆಗೆಲಸ ಮಾಡುತ್ತಿದ್ದ ಮಾಲಿಕರ ಮನೆಯ ಗೇಟ್ ನಲ್ಲಿ ಆಟ ಆಡಲು ಹೋಗಿ ಕೊನೆಗೆ ಗೇಟ್ ಮುರಿದು ಬಿದ್ದು ಸಾವಿಗೆ ಶರಣಾಗಿದ್ದಾಳೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 9:17 pm, Fri, 10 May 24

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ