ಹಾವೇರಿಯಲ್ಲಿ ಮಾಸ್ಕ್ ಹಾಕದೆ ಓಡಾಡುತ್ತಿದ್ದವರ ಬೈಕ್ ಸೀಜ್; ಪೊಲೀಸರನ್ನು ನೋಡಿ ಮಾಸ್ಕ್ ಏರಿಸಿಕೊಂಡರೂ ದಂಡ ತಪ್ಪಿದ್ದಲ್ಲ

|

Updated on: May 01, 2021 | 10:34 AM

ಬೈಕ್ ಮತ್ತು ಕಾರಿನಲ್ಲಿ ಓಡಾಡುವವರು ಪೊಲೀಸರನ್ನ ನೋಡಿ ಮಾಸ್ಕ್ ಹಾಕಿಕೊಂಡರೂ ಅಂತಹವರನ್ನು ಗುರುತಿಸಿ 200 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಆ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಹಾವೇರಿಯಲ್ಲಿ ಮಾಸ್ಕ್ ಹಾಕದೆ ಓಡಾಡುತ್ತಿದ್ದವರ ಬೈಕ್ ಸೀಜ್; ಪೊಲೀಸರನ್ನು ನೋಡಿ ಮಾಸ್ಕ್ ಏರಿಸಿಕೊಂಡರೂ ದಂಡ ತಪ್ಪಿದ್ದಲ್ಲ
ಮಾಸ್ಕ್ ಹಾಕದೆ ಓಡಾಡುತ್ತಿದ್ದವರ ಬೈಕ್ ಸೀಜ್
Follow us on

ಹಾವೇರಿ: ಕೊರೊನಾ ಎರಡನೇ ಅಲೆ ಪ್ರಸರಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 27ರ ರಾತ್ರಿ 9 ಗಂಟೆಯಿಂದ ಮೇ 12ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿದೆ.ಆದರೆ ರಾಜ್ಯದಲ್ಲಿ ಜನರು ಓಡಾಟವನ್ನು ಮಾತ್ರ ನಿಲ್ಲಿಸಿಲ್ಲ. ಈ ನಿಟ್ಟಿನಲ್ಲಿ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದು, ಮಾಸ್ಕ್ ಹಾಕದೆ ಓಡಾಡುವವರ ಬೈಕ್ ಸೀಜ್ ಮಾಡಿದ್ದಾರೆ.

ಸಿಪಿಐ ಸಂತೋಷ ಪವಾರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಮಾಸ್ಕ್ ಧರಿಸದೆ ಬೇಕಾಬಿಟ್ಟಿ ಓಡಾಡುವವರ ಬೈಕ್​ಗಳನ್ನ ಸೀಜ್ ಮಾಡುತ್ತಿದ್ದಾರೆ. ಬೈಕ್ ಮತ್ತು ಕಾರಿನಲ್ಲಿ ಓಡಾಡುವವರು ಮಾಸ್ಕ್​ ಹಾಕದಿದ್ದರೆ ಅಥವಾ ಪೊಲೀಸರನ್ನ ನೋಡಿದ ನಂತರ ಮಾಸ್ಕ್ ಹಾಕಿಕೊಂಡರೆ 200 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಆ ಮೂಲಕ ಹಾವೇರಿ ನಗರ ಪೊಲೀಸರು ಮಾಸ್ಕ್ ಧರಿಸದೆ ಬೇಕಾಬಿಟ್ಟಿ ಓಡಾಡುವವರಿಗೆ ದಂಡ ಮತ್ತು ಬೈಕ್ ಸೀಜ್ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಿದ ಮುಂಬೈ ಪೊಲೀಸರು
ದಿನ ಸಾಗುತ್ತಿದ್ದಂತೆಯೇ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊರೊನಾ ಮಹಾಮಾರಿಯ ಆರ್ಭಟ ಎಲ್ಲರನ್ನೂ ಚಿಂತೆಗೀಡು ಮಾಡಿದೆ. ನಾಗರಿಕರು ಮತ್ತು ಸರ್ಕಾರಿ ಸಂಸ್ಥೆಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಜನರಿಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಅಂತೆಯೇ ಹೊರಗಡೆ ತಿರುಗಾಡದೇ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡುತ್ತಿದ್ದಾರೆ. ಈ ಕುರಿತಂತೆ ನಾಗರಿಕರಿಗೆ ಜಾಗೃತಿ ಮೂಡಿಸಲು ಮುಂಬೈ ಪೊಲೀಸರು ಹಂಚಿಕೊಂಡ ಪೋಸ್ಟ್​ ಇಲ್ಲಿದೆ.

ಸೋಷಿಯಲ್​ ಮೀಡಿಯಾದಲ್ಲಿ ಮುಂಬೈ ಪೊಲೀಸರನ್ನು ಅನುಸರಿಸುವ ನೆಟ್ಟಿಗರು, ಕೊವಿಡ್​ ತಡೆ ಕ್ರಮಗಳಿಗೆ ಸಂಬಂಧಿಸಿದಂತೆ ಮುಖಗವಸು ಧರಿಸುವುದು ಮತ್ತು ಇತರ ಮಾರ್ಗಸೂಚಿಗಳ ಕುರಿತಾಗಿ ನಿರಂತರವಾಗಿ ಮಾತನಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಮುಂಬೈ ಪೊಲೀಸರು ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವುದು ಇದೀಗ ವೈರಲ್​ ಆಗಿದೆ.

ಮುಂಬೈ ಪೊಲೀಸರು ಹಂಚಿಕೊಂಡ ಒಟ್ಟು ನಾಲ್ಕು ಫೋಟೊಗಳಲ್ಲಿ ಪ್ರತಿ ಫೋಟೋವೂ ಕೂಡಾ ತಿಂಡಿ-ತಿನಿಸುಗಳಿಗೆ ಸಂಬಂಧಿಸಿದ ಪೋಸ್ಟ್​ ಆಗಿದೆ. ಇದರಿಂದ ಪ್ರತಿಯೊಬ್ಬರೂ ಮನೆಯಲ್ಲಿಯೇ ಇರಬೇಕು, ಕೊವಿಡ್​ ಸಾಂಕ್ರಾಮಿಕ ಎಲ್ಲೆಡೆ ಹರಡುತ್ತಿದೆ. ಹೊರಗಡೆಯ ಆಹಾರವನ್ನು ಸೇವಿಸುವುದರ ಬದಲು ಮನೆಯಲ್ಲಿಯೇ ಆನ್​ಲೈನ್​ ಆರ್ಡರ್​ ಮಾಡಿ ವಿವಿಧ ತಿಂಡಿಗಳನ್ನು ಸೇವಿಸಿರಿ ಎಂಬ ಕಿವಿಮಾತು ಅಡಗಿದೆ. ಈ ಪೋಸ್ಟ್​ ಗಮನಿಸಿದ ನೆಟ್ಟಿಗರು ಸಾವಿರಾರು ಲೈಕ್​ ನೀಡಿದ್ದಾರೆ.

ಇದನ್ನೂ ಓದಿ:

ಕೊರೊನಾ ಸೋಂಕು ಹೆಚ್ಚಳ: ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಿದ ಮುಂಬೈ ಪೊಲೀಸರು

ದೇಶಾದ್ಯಂತ ಇಂದು ಶುರುವಾಗಿಲ್ಲ 3ನೇ ಹಂತದ ಕೊರೊನಾ ಲಸಿಕೆ ವಿತರಣೆ; ವ್ಯಾಕ್ಸಿನ್ ಇಲ್ಲ ಅಂದ್ರೂ ಕರ್ನಾಟಕದಲ್ಲಿ ಕ್ಯೂ ನಿಂತ ಜನ !