ಹಾವೇರಿ: ಬರಗಾಲದಲ್ಲಿ ಡ್ಯ್ರಾಗನ್ ಫ್ರೂಟ್ ಬೆಳೆದು ಯಶಸ್ಸು ಕಂಡ ಯುವ ರೈತ

ರಾಜ್ಯದಲ್ಲಿ ಬರಗಾಲ ಛಾಯೆ ಆವರಿಸಿದ ಬೆನ್ನಲೆ, ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಆದ್ರೆ, ಇಲ್ಲೊಬ್ಬ ರೈತ ಬರಗಾಲದ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಸ್ವಲ್ಪವೂ ಧೃತಿ ಗೆಡದೆ ದುಡಿಮೆ ಮುಂದುವರೆಸಿದ್ದರ ಫಲವಾಗಿ. ಪ್ರಸಕ್ತ ಸಾಲಿನಲ್ಲಿ ಎರಡು ಲಕ್ಷಕ್ಕೂ ಅಧಿಕ ಇಳುವರಿ ಪಡೆದಿದ್ದು, ಉಳಿದ ರೈತರಿಗೆ ಮಾದರಿ ಆಗಿದ್ದಾನೆ.

ಹಾವೇರಿ: ಬರಗಾಲದಲ್ಲಿ ಡ್ಯ್ರಾಗನ್ ಫ್ರೂಟ್ ಬೆಳೆದು ಯಶಸ್ಸು ಕಂಡ ಯುವ ರೈತ
ಡ್ಯ್ರಾಗನ್ ಫ್ರೂಟ್ ಬೆಳೆದು ಯಶಸ್ಸು ಕಂಡ ಯುವ ರೈತ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 12, 2023 | 9:30 PM

ಹಾವೇರಿ, ಅ.12: ಮಳೆಗಾಲ ಮುಗಿದು ಚಳಿಗಾಲ ಆರಂಭದ ಈ ಸಮಯದಲ್ಲಿ, ಕಣ್ಣಾಹಾಯಿಸದ ಕಡೆ ಎಲ್ಲ ಹಸಿರು ಕಾಣಬೇಕಿತ್ತು, ಆದ್ರೆ, ಸಕಾಲಕ್ಕೆ ಮಳೆ ಆಗದ ಹಿನ್ನೆಲೆ. ಒಣ ಭೂಮಿ, ಒಣಗಿದ ಬೆಳೆಗಳು, ಅಲ್ಲಲ್ಲಿ ಅಲ್ಪ ಸ್ವಲ್ಪ ಹಸಿರು ಕಾಣುತ್ತಿದೆ. ಪರಿಣಾಮ ರಾಜ್ಯದ ರೈತರು ಆತಂಕದಲ್ಲೆ ದಿನ ಕಳೆಯುವಂತಾಗಿದೆ. ಆದರೆ ಹಾವೇರಿ(Haveri)ತಾಲೂಕಿನ ಅಗಡಿ ಗ್ರಾಮದ ರುದ್ರಪ್ಪಾ ಎಂಬ ರೈತ, ಇದಕ್ಕೆ ಭಿನ್ನವಾಗಿದ್ದಾನೆ. ಕಳೆದೆರಡು ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಾಕಿದ ಡ್ಯ್ರಾಗನ್(Dragon) ಸಸಿಗಳು, ಈ ಬಾರಿಯ ಬರಗಾಲಕ್ಕೆ ಸತ್ತು ಹೋಗುತ್ತೆ ಎಂಬ ಆತಂಕ ಇತ್ತು. ಆದ್ರೆ, ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ. ಬೇರೆ ಬೇರೆ ನೀರಿನ ಆಕರಗಳಿಂದ ನೀರನ್ನು ಹಾಯಿಸಿ ಸಸಿಗಳನ್ನು ಉಳಿಸಿದ ಫಲವಾಗಿ. ಪ್ರಸಕ್ತ ಸಾಲಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹಣ್ಣುಗಳನ್ನು ಬೆಳೆದಿದ್ದಾನೆ.

ರಿಸ್ಕ್ ತೊಗೊಂಡ್ರೆ ಕೃಷಿಯಲ್ಲಿ ಉತ್ತಮ ಆದಾಯ

ಎಂಟು ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಬೆಳೆಸಿದ ಡ್ರ್ಯಾಗನ್ ಹಾಳಾಗುತ್ತೆ ಎಂದು ಅನೇಕ ಜನ ಆಡಿಕೊಳ್ಳುತ್ತಿದ್ದರು. ಆದ್ರೆ, ಇದಕ್ಕೆಲ್ಲ ಧೃತಿ ಗೆಡದೆ ಸಮರ್ಪಕ ನೀರು ಪೂರೈಸುವುದರ ಜೊತೆಗೆ ಎಂದಿನಂತೆ ಗೊಬ್ಬರ ಮತ್ತು ರಸಾಯನಿಕ ಖರ್ಚು ಮಾಡಿ. ತನ್ನ ದುಡಿಮೆ ಮುಂದುವರೆಸಿದ್ದರ ಫಲವಾಗಿ ಕಳೆದೆರಡು ವರ್ಷಗಳಲ್ಲಿ ಬರಲಾದ ಇಳುವರಿ ಈ ವರ್ಷ ಬಂದಿದೆ. ಇನ್ನೂ ಎಂದಿನಂತೆ ಮೆಕ್ಕೆಜೋಳ, ಸೋಯಾಬಿನ ಮಾಡುವುದರ ಬದಲು ಸ್ವಲ್ಪ ರಿಸ್ಕ್ ತೊಗೊಂಡ್ರೆ ಕೃಷಿಯಲ್ಲಿ ಉತ್ತಮ ಆದಾಯ ಗಳಿಸಬಹುದು ಎಂದು ಯುವ ರೈತ ಬಸವರಾಜ್ ಹೇಳುತ್ತಿದ್ದಾರೆ.

ಇದನ್ನೂ ಓದಿ:Dragon fruit Benefits: ಡ್ರ್ಯಾಗನ್​ ಫ್ರೂಟ್ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನೀವು ತಿಳಿದರೆ ಇಂದೇ ಖರೀದಿಸಿ, ಸೇವಿಸುವ ಅಭ್ಯಾಸ ಮಾಡಿಕೊಳ್ಳುವಿರಿ

ಒಟ್ಟಾರೆಯಾಗಿ ನಿಸರ್ಗದ ಜೊತೆ ಸದಾ ಆಟ ಆಡುವ ಅನ್ನದಾತ ಕೆಲವು ಸಲ ಗೆಲ್ಲುತ್ತಾನೆ ಎಂಬುವುದಕ್ಕೆ ಜೀವಂತ ನಿದರ್ಶನ ಇದು. ಸಮಸ್ಯೆ ಬಂದಿದೆ ಎಂಬ ಆತಂಕದಲ್ಲಿ ಕೈ ಚೆಲ್ಲಿ ಕುಳಿತುವುಕೊಳ್ಳುವುದರ ಬದಲು. ಧೈರ್ಯದಿಂದ ಮುನ್ನುಗ್ಗಿದರೆ ಯಶಸ್ಸು ಸಾಧ್ಯ ಎಂಬುವುದಕ್ಕೆ ಇವರೆ ಸಾಕ್ಷಿಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ