ಚುರುಕುಗೊಂಡ ಮುಂಗಾರು ಮಳೆ; ಎತ್ತುಗಳ ಖರೀದಿಗೆ ಮುಗಿಬಿದ್ದ ಅನ್ನದಾತರು

| Updated By: ಕಿರಣ್ ಹನುಮಂತ್​ ಮಾದಾರ್

Updated on: May 30, 2024 | 6:54 PM

ರಾಜ್ಯದಲ್ಲಿ ಕಳೆದ ಭಾರಿ ತೀವ್ರ ಬರಗಾಲದಲ್ಲಿ ಮೇವಿನ ಕೊರತೆಯಿಂದ ಅನ್ನದಾತರು ಜಾನುವಾರುಗಳನ್ನ ಮಾರಾಟ ಮಾಡಿದ್ದರು. ಈಗ ಮುಂಗಾರು ಮಳೆ ಚುರುಕುಗೊಂಡ ಹಿನ್ನಲೆಯಲ್ಲಿ ಅನ್ನದಾತರು ಬಿತ್ತನೆಗೆ ಸಿದ್ದತೆ ನಡೆಸಿದ್ದಾರೆ. ಆದರೆ, ಈಗ ಜಾನುವಾರು ಮಾರುಕಟ್ಟೆಯಲ್ಲಿ ಎತ್ತುಗಳ ಬೆಲೆ ದುಪ್ಪಟ್ಟು ಆಗಿವೆ. ರೈತರು ಒಂದು ಲಕ್ಷ, ಒಂದುವರೆ ಲಕ್ಷ ಕೊಟ್ಟು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ರೈತರು ಜಾನುವಾರು ರೇಟ್ ಕೇಳಿ ಶಾಕ್ ಆಗಿದ್ದಾರೆ.

ಚುರುಕುಗೊಂಡ ಮುಂಗಾರು ಮಳೆ; ಎತ್ತುಗಳ ಖರೀದಿಗೆ ಮುಗಿಬಿದ್ದ ಅನ್ನದಾತರು
ಹಾವೇರಿಯಲ್ಲಿ ಎತ್ತುಗಳ ಖರೀದಿಗೆ ಮುಗಿಬಿದ್ದ ಅನ್ನದಾತರು
Follow us on

ಹಾವೇರಿ, ಮೇ.30: ಹಾವೇರಿ(Haveri) ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ. ಕಳೆದ ಭಾರಿಯ ಬರಗಾಲಕ್ಕೆ ಅಕ್ಷರಶಃ ತತ್ತರಿಸಿ ಹೋಗಿದ್ದರು. ಬರಗಾಲದಲ್ಲಿ ಮೇವಿನ ಕೊರತೆಗೆ ಜಾನುವಾರು(ox) 50 ಸಾವಿರ, 60ಸಾವಿರ ಬೆಲೆಗೆ ಎತ್ತುಗಳನ್ನ ಮಾರಾಟ ಮಾಡಿದ್ದರು. ಆದರೆ, ಈಗ ಮುಂಗಾರು ಮಳೆ ಪ್ರಾರಂಭವಾಗಿದೆ. ಈ ಹಿನ್ನಲೆ ರೈತರು ಬಿತ್ತನೆಗೆ ಸಿದ್ದತೆ ನಡೆಸಿದ್ದಾರೆ. ಈ ಮಧ್ಯೆ ಬಿತ್ತನೆ ಮಾಡಲು ಎತ್ತುಗಳನ್ನ ಖರೀದಿಸಲು ಬಂದ ರೈತರು ಕಂಗಾಲಾಗಿದ್ದಾರೆ.‌ ಜೋಡಿ ಎತ್ತಿಗೆ ಒಂದು ಲಕ್ಷ, ಒಂದುವರೆ ಲಕ್ಷ ರೂಪಾಯಿ ಹೇಳುತ್ತಿದ್ದಾರೆ. ಇದರಿಂದ ಕಂಗಾಲಾದ ರೈತರು, ನಾವು ಎತ್ತುಗಳನ್ನ ಹೇಗೆ ಖರೀದಿ ಮಾಡಬೇಕು ಎಂದು ಅಳಲು ತೊಡಿಕೊಂಡಿದ್ದಾರೆ.

ಬರಗಾಲ ಇದ್ದಾಗ ಮೇವಿನ ಕೊರತೆ ಉಂಟಾಗಿ ರೈತರು ತಮ್ಮ ಮನೆ ಮಕ್ಕಳಂತಿದ್ದ ಎತ್ತುಗಳನ್ನು ಕಡಿಮೆ ಬೆಲೆಗೆ ಮಾರಿ‌ಬಿಟ್ಟಿದ್ದರು. ಈಗ ಎಂತಹ ವಿಪರ್ಯಾಸ ಅಂದರೆ ಅದೇ ಎತ್ತುಗಳೀಗ ಉಳುಮೆ ಮಾಡಲು ಸಿಗುವುದೆ ದುರ್ಲಭ ಆಗಿ ಹೋಗಿದೆ. ಮಳೆಗಾಲ ಶುರುವಾಗಿರುವ ಹಿನ್ನಲೆ ರೈತರು ಹೊಲಗಳನ್ನು ಭಿತ್ತನೆಗೆ ಅಣಿ ಮಾಡುತ್ತಿದ್ದಾರೆ. ಆದರೆ, ಹೊಲ‌ ಉತ್ತೋಕೆ‌, ಬಿತ್ತೋಕೆ ಎತ್ತುಗಳೇ ಇಲ್ಲ. ಬರಗಾಲದಲ್ಲಿ ಎತ್ತುಗಳನ್ನು ಮಾರಿದ್ದ ರೈತರಿಗೆ ಈಗ ಮತ್ತೆ ಎತ್ತುಗಳ ಖರೀದಿ ಭಾರಿ ದುಬಾರಿ ಆಗಿಬಿಟ್ಟಿದೆ.

ಇದನ್ನೂ ಓದಿ:ಹೊಲಕ್ಕೆ ನುಗ್ಗಿದ ಹಸು, ಎತ್ತುಗಳ ಮೇಲೆ ಮಚ್ಚಿನಿಂದ ಹಲ್ಲೆ; ಟಿಬೇಟಿಯನ್ ರೈತನ ಮೇಲೆ ಮಾಲೀಕರ ಆಕ್ರೋಶ

ಜೋಡಿ ಎತ್ತಿಗೆ ಲಕ್ಷದ ಮೇಲೆಯೇ ಮಾತಾಡಬೇಕಿದೆ. 1 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿ ಕೊಟ್ಟು ಜೋಡಿ ಎತ್ತುಗಳನ್ನು ಖರೀದಿ ಮಾಡಬೇಕಿದೆ. ಇತ್ತ ಎತ್ತುಗಳ‌ ಬೆಲೆ ಗಗನಕ್ಕೇರಿರೋ ಹಿನ್ನಲೆ ವ್ಯಾಪಾರವೂ ಕುದುರುತ್ತಿಲ್ಲ. ಮಾರುವವರಿಗೂ ಕಷ್ಟ, ತೆಗೆದುಕೊಳ್ಳುವವರಿಗೂ ಕಷ್ಟ ಎನ್ನುವ ಹಾಗಾಗಿದೆ. ಮುಂಗಾರು ಮಳೆ ಪ್ರಾರಂಭವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ, ಜಮೀನು ಹಸನ ಮಾಡಲು ಎತ್ತುಗಳ ರೇಟ್ ಹೆಚ್ಚಾಗಿದ್ದರಿಂದ ಅನ್ನದಾತರು ಕಂಗಾಲಾಗಿದ್ದಾರೆ. ದಲ್ಲಾಳಿಗಳ ಎತ್ತುಗಳ ಬೆಲೆಯನ್ನ ಏರಿಕೆ ಮಾಡಿದ್ದು, ಎತ್ತುಗಳನ್ನ ಖರೀದಿ ಮಾಡಲಾಗದೆ ಕೆಲವರು ಬೇಸರದಿಂದ ಮನೆಗೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ಕಷ್ಟವಾದರು ಸರಿ ಸಾಲ ಶೂಲ ಮಾಡಿ ದುಬಾರಿ ಬೆಲೆಗೆ ಖರೀದಿ‌ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ