86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯ ಅಜ್ಜಯನ ಗದ್ದುಗೆ ಜಾಗದಲ್ಲಿ ನಡೆಸಲು ತೀರ್ಮಾನ

| Updated By: ವಿವೇಕ ಬಿರಾದಾರ

Updated on: Nov 27, 2022 | 10:40 PM

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನೇವರಿ 6,7 ಮತ್ತು 8 ಮೂರು ದಿನಗಳ ಕಾಲ ಯಾಲಕ್ಕಿ ಕಂಪಿನ ನಾಡು ಹಾವೇರಿಯ ಅಜ್ಜಯನ ಗದ್ದುಗೆಯ ಎದರುಗಡೆ ಇರುವ 128 ಎಕರೆ ಜಾಗದಲ್ಲಿ ನಡೆಯಲಿದೆ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯ ಅಜ್ಜಯನ ಗದ್ದುಗೆ ಜಾಗದಲ್ಲಿ ನಡೆಸಲು ತೀರ್ಮಾನ
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ದತೆಯ ಪ್ರಯುಕ್ತ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಸಭೆ
Follow us on

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನೇವರಿ 6,7 ಮತ್ತು 8 ಮೂರು ದಿನಗಳ ಕಾಲ ಯಾಲಕ್ಕಿ ಕಂಪಿನ ನಾಡು ಹಾವೇರಿಯ ಅಜ್ಜಯನ ಗದ್ದುಗೆಯ ಎದರುಗಡೆ ಇರುವ 128 ಎಕರೆ ಜಾಗದಲ್ಲಿ ನಡೆಯಲಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ದತೆಯ ಪ್ರಯುಕ್ತ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ ಸಂಭಾಗಣದಲ್ಲಿ ಇಂದು (ನ.27) ಸಭೆ ನಡೆಯಿತು ಸಭೆಯಲ್ಲಿ ಮಾತನಾಡಿದ ಅವರು ಸಮ್ಮೇಳನದ ಮುಖ್ಯ ವೇದಿಕೆ ಅದರ ಸುತ್ತಲು ಸ್ಟಾಲ್​​ಗಳನ್ನು ನಿರ್ಮಿಸಬೇಕು. ಸಮ್ಮೇಳನಕ್ಕೆ ಬರುವ ಜನರಿಗೆ ಸಾರಿಗೆ, ವಸತಿ, ಪಾರ್ಕಿಂಗ್, ಊಟದ ವ್ಯವಸ್ಥೆ ಮಾಡಬೇಕು. ಹಾವೇರಿ ನಗರದ ತುಂಬ ಮೈಸೂರು ದಸರಾ ಮಾದರಿಯಲ್ಲಿಯೇ ವಿದ್ಯುತ್ ದಿಪಾಲಂಕಾರ ಮಾಡಬೇಕು ಎಂದು ಸೂಚಿಸಿದರು.

ಮಹಾರಾಷ್ಟ್ರಕ್ಕೆ ಉತ್ತರ ಕೊಡುವ ರೀತಿಯಲ್ಲಿ ಹಾವೇರಿಯಲ್ಲಿ ಸಮ್ಮೇಳನ ಮಾಡುವದರ ಮೂಲಕ ಕನ್ನಡಿಗರೆಲ್ಲ ಒಂದು ಎಂದು ತೊರಿಸೋಣ. ಮುಖ್ಯಮಂತ್ರಿಗಳು ತವರು ಜಿಲ್ಲೆ ಆಗಿದ್ದರಿಂದ ಅದ್ದುರಿಯಾಗಿ ಮಾಡಬೇಕು. ಸಾಹಿತ್ಯ ಪರಿಷತ್ತಿನ ಕೆಲಸಗಳಾದ ಆಮಂತ್ರಣ ಕಾರ್ಯ ಪ್ರಾಂಭವಾಗಬೇಕು. ರಾಜ್ಯಾದ್ಯಂತ ಕನ್ನಡದ ರಥ ಸಂಚಾರ, ಡಿಸೆಂಬರ್​ 01 ರಿಂದ ಉತ್ತರ ಕನ್ನಡದ ಸಿದ್ದಾಪುರದ ಭುವನಗಿರಿಯಿಂದ ಪ್ರಾರಂಭವಾಗಿ ಡಿಸೆಂಬರ್ 31 ರಂದು ಹಾವೇರಿ ಜಿಲ್ಲೆಗೆ ಬಂದು ಜಿಲ್ಲೆಯಲ್ಲಿ 5 ದಿನಗಳ ಕಾಲ ಸಂಚರಿಸಲಿದೆ. ಈಗಾಗಲೆ ಸಮ್ಮಳನಕ್ಕಾಗಿ ಸರಕಾರದಿಂದ 20 ಕೋಟಿ ರೂ ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಲಾಗಿದೆ. ನಗರದ ರಸ್ತೆಗಳು ಹಾಳಾಗಿದ್ದರಿಂದ ದುರಸ್ತಿಗೆ ಅನುದಾನ‌ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವದು ಎಂದು ತಿಳಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾಡೊಜ ಮಹೇಶ ಜೋಶಿ ಮಾತನಾಡಿ ಸಮ್ಮಳನಕ್ಕೆ ಪ್ರತಿನಿದಿಗಳ ನೊಂದಣಿ ಶೀಘ್ರವೆ ಪ್ರಾರಂಭ ಮಾಡಲಾಗವುದು. ಎಲ್ಲ ಜಿಲ್ಲೆಗಳಿಂದ ಸ್ತಬ್ಧಚಿತ್ರಗಳು ವಿವಿಧ ರೀತಿಯ ಕಲಾ ತಂಡಗಳು ಭಾಗವಹಿಸಬೇಕು. 86 ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು. ತಂತ್ರಜ್ಞಾನ ಉಪಯೊಗಿಸಿ ಆಮಂತ್ರಣ ಪತ್ರಿಕೆಯನ್ನು ಸಮಾಜಿಕ ಜಾಲಾತಾಣದ ಮೂಲಕ ಒಂದೇ ದಿನದಲ್ಲಿ ತಲುಪಿಸುವ ಕೇಲಸ ಮಾಡಲಾಗುವದು ಒಟ್ಟಾರೆ ಸಾಹಿತ್ಯ ಸಮ್ಮೇಳನದಲ್ಲಿ ಯಾವುದೆ ಅಡೆತಡೆಗಳು ಬರದಂತೆ ಯಶಸ್ವಗೊಳಿಸಲಾಗುವದು ಎಂದರು.

ಸಭೆಯಲ್ಲಿ ಹಾವೇರಿ ಶಾಸಕರು, ಮಾಜಿ ಶಾಸಕರು, ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮದ ರೋಷನ್ ಪೋಲಿಸ್ ವರಿಷ್ಠಾಧಿಕಾರಿ ಹನಮಂತರಾಯ ಭಾಗವಹಿಸದ್ದರು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:36 pm, Sun, 27 November 22