ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಲು ಪಣ, ಆಯುಷ್ ಹಾಗೂ ಖಾಸಗಿ ವೈದ್ಯರು ಸಾಥ್

|

Updated on: Jun 04, 2020 | 3:18 PM

ಹಾವೇರಿ: ಹೆಮ್ಮಾರಿ ಕೊರೊನಾ ಎಲ್ಲೆಡೆ ದಿನದಿಂದ ದಿನಕ್ಕೆ ಹಬ್ಬುತ್ತಲೆ ಸಾಗಿದೆ. ಅದರಲ್ಲೂ ಹಾವೇರಿ ಜಿಲ್ಲೆಯಲ್ಲೂ ಕೊರೊನಾ ತನ್ನ ಅಟ್ಟಹಾಸ ಶುರು ಮಾಡಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರೋ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೋಂಕು ಹರಡದಂತೆ ತಡೆಯಲು ಇನ್ನಿಲ್ಲದ ಹರಸಾಹಸ ಮಾಡುತ್ತಿದೆ. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ತಂಡ ಮಾಡಿ ಜಿಲ್ಲೆಯ ಮನೆಮನೆಗಳಲ್ಲಿನ ಜನರ ತಪಾಸಣೆಗೆ ಮುಂದಾಗಿದೆ. ಜಿಲ್ಲೆಯಲ್ಲಿ ಎಂಟು ತಾಲೂಕುಗಳಿವೆ‌. ಆದರೆ ಶಿಗ್ಗಾಂವಿ, ಸವಣೂರು ಮತ್ತು ರಾಣೆಬೆನ್ನೂರು […]

ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಲು ಪಣ, ಆಯುಷ್ ಹಾಗೂ ಖಾಸಗಿ ವೈದ್ಯರು ಸಾಥ್
Follow us on

ಹಾವೇರಿ: ಹೆಮ್ಮಾರಿ ಕೊರೊನಾ ಎಲ್ಲೆಡೆ ದಿನದಿಂದ ದಿನಕ್ಕೆ ಹಬ್ಬುತ್ತಲೆ ಸಾಗಿದೆ. ಅದರಲ್ಲೂ ಹಾವೇರಿ ಜಿಲ್ಲೆಯಲ್ಲೂ ಕೊರೊನಾ ತನ್ನ ಅಟ್ಟಹಾಸ ಶುರು ಮಾಡಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರೋ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೋಂಕು ಹರಡದಂತೆ ತಡೆಯಲು ಇನ್ನಿಲ್ಲದ ಹರಸಾಹಸ ಮಾಡುತ್ತಿದೆ. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ತಂಡ ಮಾಡಿ ಜಿಲ್ಲೆಯ ಮನೆಮನೆಗಳಲ್ಲಿನ ಜನರ ತಪಾಸಣೆಗೆ ಮುಂದಾಗಿದೆ.

ಜಿಲ್ಲೆಯಲ್ಲಿ ಎಂಟು ತಾಲೂಕುಗಳಿವೆ‌. ಆದರೆ ಶಿಗ್ಗಾಂವಿ, ಸವಣೂರು ಮತ್ತು ರಾಣೆಬೆನ್ನೂರು ತಾಲೂಕಿನಲ್ಲಿ ಸೇರಿ ಒಟ್ಟು 16 ಜನರಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಸೋಂಕು ದೃಢಪಟ್ಟ ತಾಲೂಕುಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆಗೆ ಜಿಲ್ಲೆಯ ಆಯುಷ್ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಸೋಂಕು ಹರಡದಂತೆ ತಡೆಯಲು ಕೈ ಜೋಡಿಸಿದ್ದಾರೆ. ಪ್ರತಿದಿನ‌ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ನಗರ ಪ್ರದೇಶದ ಗಲ್ಲಿಗಲ್ಲಿಗಳಲ್ಲಿನ ಮನೆಗಳಿಗೆ ತೆರಳೋ ವೈದ್ಯರು ಮತ್ತು ಸಿಬ್ಬಂದಿ ತಂಡ ಜನರ ತಪಾಸಣೆ ಮಾಡುತ್ತಿದೆ. ಮನೆಗಳಲ್ಲಿನ ಜನರಿಗೆ ಸ್ಕ್ರೀನಿಂಗ್ ಮೂಲಕ ತಪಾಸಣೆ ನಡೆಸುತ್ತಿದೆ. ಜೊತೆಗೆ ಕೊರೊನಾ ಸೋಂಕು ಹರಡದಂತೆ ತಡೆಯುವುದು ಹೇಗೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ಜನನಿಬಿಡ ಪ್ರದೇಶಗಳೇ ಟಾರ್ಗೆಟ್:
ವಿಶೇಷವಾಗಿ ಆಯುಷ್ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರ ತಂಡ ಹೆಚ್ಚಿನ ಜನರು ವಾಸಿಸುವ, ಸ್ಲಂ, ಕೊಳಚೆ ಪ್ರದೇಶ ಮತ್ತು ಟೆಂಟ್​ಗಳಲ್ಲಿ ವಾಸವಾಗಿರುವ ಪ್ರದೇಶಗಳನ್ನು ಟಾರ್ಗೆಟ್ ಮಾಡಿಕೊಂಡು ತಪಾಸಣೆ ಮಾಡುತ್ತಿದೆ. ತಪಾಸಣೆ ವೇಳೆ ಜನರು ಆ ಮನೆಗಳಲ್ಲಿ ಎಷ್ಟು ದಿನಗಳಿಂದ ವಾಸವಾಗಿದ್ದಾರೆ? ಬೇರೆ ಊರುಗಳಿಂದ ಯಾರಾದರೂ ಮನೆಗೆ ಬಂದಿದ್ದಾರಾ? ಮನೆಯ ಯಾರಿಗಾದರೂ ಆರೋಗ್ಯ ಸಮಸ್ಯೆ ಇದೆಯಾ? ಹೀಗೆ ವಿವಿಧ ರೀತಿಯಿಂದ ಜನರ ಮೇಲೆ ನಿಗಾ ವಹಿಸುತ್ತಿದೆ. ಮಧುಮೇಹ ಸೇರಿದಂತೆ ವಿವಿಧ ರೀತಿಯ ಆರೋಗ್ಯದ ತೊಂದರೆ ಎದುರಿಸುತ್ತಿರುವ ಜನರ ಬಗ್ಗೆ ವಿಶೇಷ ಕಾಳಜಿ ವಹಿಸಿ ವೈದ್ಯರ ತಂಡ ತಪಾಸಣೆ ಮಾಡುತ್ತಿದೆ.

ಆಯುಷ್‌ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರ ತಂಡ ಮನೆ ಮನೆ ತಪಾಸಣೆ ನಡೆಸುವ ವೇಳೆಯಲ್ಲಿ ಯಾರಿಗಾದರೂ ನೆಗಡಿ, ಕೆಮ್ಮು, ಜ್ವರದಂತಹ ಆರೋಗ್ಯ ಸಮಸ್ಯೆ ಕಂಡುಬಂದರೆ ಕೂಡಲೆ ಅವರನ್ನು ಜಿಲ್ಲಾಸ್ಪತ್ರೆಗೆ ಕಳಿಸಿ ತಪಾಸಣೆ ಮಾಡಿಸಲಾಗುತ್ತದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಈಗಾಗಲೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಆಯುಷ್ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು ಕೊರೊನಾ ಹರಡುವುದನ್ನ ತಡೆಯಲು ಕೊರೊನಾ ವಾರಿಯರ್ಸ್ ಆಗಿ ಕೆಲಸ‌ ಮಾಡುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಿ ಕೊರೊನಾ ಸೋಂಕು ಹರಡದಂತೆ ತಡೆಯಲು ಸಹಕಾರಿ ಆಗುತ್ತಿದೆ.

Published On - 9:25 am, Thu, 4 June 20