AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಡು ಕಟ್ಟುವ ಕೆಲಸಕ್ಕೆ ಕಳಿಸಿದ್ದೀರಿ, ಅದಕ್ಕೆ ನ್ಯಾಯ ಕೊಡ್ತೇನೆ; ಕ್ಷೇತ್ರದ ಜನರ ಜೊತೆ ಹೆಚ್ಚು ಸಮಯ ಕಳೆಯಲು ಆಗ್ತಿಲ್ಲ ಎಂದ ಸಿಎಂ ಬೊಮ್ಮಾಯಿ

ಯಾವುದೇ ಯೋಜನೆ ರೂಪಿಸಿದರೂ ನಿಮ್ಮನ್ನ ನೆನಪಿಸಿಕೊಳ್ತೇನೆ. ಶಿಗ್ಗಾಂವಿ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ ಎಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ (ಫೆಬ್ರವರಿ 12) ಹೇಳಿಕೆ ನೀಡಿದ್ದಾರೆ.

ನಾಡು ಕಟ್ಟುವ ಕೆಲಸಕ್ಕೆ ಕಳಿಸಿದ್ದೀರಿ, ಅದಕ್ಕೆ ನ್ಯಾಯ ಕೊಡ್ತೇನೆ; ಕ್ಷೇತ್ರದ ಜನರ ಜೊತೆ ಹೆಚ್ಚು ಸಮಯ ಕಳೆಯಲು ಆಗ್ತಿಲ್ಲ ಎಂದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
TV9 Web
| Edited By: |

Updated on:Feb 12, 2022 | 9:53 PM

Share

ಹಾವೇರಿ: ಕ್ಷೇತ್ರದ ಜನರ ಜೊತೆ ಹೆಚ್ಚು ಸಮಯ ಕಳೆಯಲು ಆಗುತ್ತಿಲ್ಲ. ನಿಮ್ಮ ಮಗನನ್ನು ಉನ್ನತ ಕಾರ್ಯಕ್ಕೆ ಕಳಿಸಿದ್ದೀರಿ ಅಂದುಕೊಳ್ಳಿ. ದೇಶ ಕಾಯಲು ಮಗನನ್ನು ಕಳುಹಿಸುವ ಹಾಗೆ ತಿಳಿದುಕೊಳ್ಳಿ. ನಾಡು ಕಟ್ಟುವ ಕೆಲಸಕ್ಕೆ ಕಳಿಸಿದ್ದೀರಿ, ಅದಕ್ಕೆ ನ್ಯಾಯ ಕೊಡ್ತೇನೆ. ಯಾವುದೇ ಯೋಜನೆ ರೂಪಿಸಿದರೂ ನಿಮ್ಮನ್ನ ನೆನಪಿಸಿಕೊಳ್ತೇನೆ. ಶಿಗ್ಗಾಂವಿ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ ಎಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ (ಫೆಬ್ರವರಿ 12) ಹೇಳಿಕೆ ನೀಡಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿದ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ. ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವ ಅರೆಬೈಲ್ ಶಿವರಾಂ ಹೆಬ್ಬಾರ್​, ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ಸಾಥ್​ ನೀಡಿದ್ದಾರೆ.

ಕರ್ನಾಟಕ ರಾಜ್ಯ ಬಜೆಟ್ ಪ್ರಕ್ರಿಯೆಯನ್ನು ಆರಂಭ ಮಾಡಿದ್ದೇನೆ. ಎಲ್ಲಾ ಇಲಾಖೆಗಳ ಬೇಡಿಕೆ ಬಗ್ಗೆ ಚರ್ಚೆ‌ ಮಾಡುತ್ತೇವೆ. ಕೇಂದ್ರದ ಯೋಜನೆಗಳ ಜತೆ ರಾಜ್ಯದ ಯೋಜನೆ ಸೇರ್ಪಡೆ ಮಾಡುತ್ತೇವೆ, ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಡಾ. ಚೆನ್ನವೀರ ಕಣವಿಗೆ ರಾಷ್ಟ್ರಕವಿ ಗೌರವ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಕೂಡ ಈ ಅಭಿಲಾಷೆ ವ್ಯಕ್ತಪಡಿಸಿದೆ. ಅದಕ್ಕೆ ಪೂರಕವಾಗಿ ಶಿಫಾರಸು ಮಾಡ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಬರುವ ಒಂದು ವರ್ಷದಲ್ಲಿ ಶಿಶುವಿನಹಾಳದ ಸಮಗ್ರ ಅಭಿವೃದ್ಧಿ: ಬಸವರಾಜ ಬೊಮ್ಮಾಯಿ

ಶಿಶುವಿನಹಾಳಕ್ಕೆ ಬರೋದು ಮನಸ್ಸನ್ನ ಬಹಳಷ್ಟು ಹಗುರ ಮಾಡಿಕೊಳ್ಳಲು. ನಾನು ಏನಿದ್ದೇನೆ ಅನ್ನೋದನ್ನ ಮರೆಸುವ ಶಕ್ತಿ ಶರೀಫರು ಮತ್ತು ಗುರುಗೋವಿಂದಭಟ್ಟರ ಗದ್ದುಗೆಗೆ ಇದೆ. ಸಾಧಕರಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವ ಕಲೆ ಸಾಧಕರಿಗೆ ಇರುತ್ತದೆ. ಶರೀಫರು ಮತ್ತು ಗುರುಗೋವಿಂದ ಭಟ್ಟರ ನಡುವೆ ಧರ್ಮವಿರಲಿಲ್ಲ. ಶರೀಫರ ಹಾಡುಗಾರಿಕೆ ಮನಸ್ಸಿನಲ್ಲಿ ಸಂಚಲನ ಉಂಟು ಮಾಡುತ್ತವೆ. ಇಲ್ಲಿಗೆ ಬಂದು ನಮ್ಮ ಜಂಜಾಟವನ್ನೆಲ್ಲ ನಾವು ಮರೆತಿದ್ದೇವೆ. ಇಲ್ಲಿ ಬಂದು ಕೇವಲ‌ ದರ್ಶನ ಪಡೆದುಕೊಂಡು ಹೋಗೋ ವ್ಯವಸ್ಥೆಯಲ್ಲ. ಇಲ್ಲಿ ಬಂದು ಇದ್ದು ಹೋಗೋ ವ್ಯವಸ್ಥೆ ಆಗಬೇಕು. ಬರುವ ಒಂದು ವರ್ಷದಲ್ಲಿ ಶಿಶುವಿನಹಾಳದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದ ಶರೀಫಗಿರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ನಿಮ್ಮೆಲ್ಲರ ಆಶೀರ್ವಾದದಿಂದ ನಾಡಿನ ಜನರ ಸೇವೆ ಮಾಡೋ ಅವಕಾಶ ಸಿಕ್ಕಿದೆ. ಕನ್ನಡ ನಾಡನ್ನ ಕಟ್ಟೋ ಗುರುತರವಾದ ಜವಾಬ್ದಾರಿಯ ಕೆಲಸ ಮಾಡುತ್ತೇನೆ. ಎಲ್ಲ ರಂಗದಲ್ಲೂ ಕರ್ನಾಟಕವನ್ನ ಮುಂದೆ ತರೋ ಕೆಲಸವನ್ನ ಮಾಡಬೇಕು. ಜೀವನದ ಕೊನೆಯ ಉಸಿರು ಇರೋವರೆಗೂ ನಿಮ್ಮ ವಿಶ್ವಾಸ ಮರೆಯೋದಿಲ್ಲ. ಇಲ್ಲಿಗೆ ಬಂದು ಗದ್ದುಗೆ ದರ್ಶನ ಪಡೆದುಕೊಂಡಿದ್ದರಿಂದ ಇನ್ನಷ್ಟು ಶಕ್ತಿ ಬಂದಿದೆ. ದುಡಿಯೋ ವರ್ಗಕ್ಕೆ ನನ್ನ ಪ್ರಥಮ ಪ್ರಾಶಸ್ತ್ಯ. ದುಡ್ಡು ಕೊಟ್ಟರೆ ರಸ್ತೆ ಆಗೋದಿಲ್ಲ, ರಸ್ತೆ ಮೇಲೆ ಟಾರ್ ಹಾಕಿದರೆ ಓಡಾಡಲು ಆಗುತ್ತದೆ. ಕಾರ್ಮಿಕನಿಗೆ ಶಕ್ತಿ ತುಂಬಿದರೆ ದೇಶಕ್ಕೆ ಶಕ್ತಿ ತುಂಬಿದಂತಾಗುತ್ತೆ. ರಾಜ್ಯದಲ್ಲಿ ಅಮೂಲಾಗ್ರ ಬದಲಾವಣೆ ಮಾಡೋ ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತಿದ್ದೇನೆ. ಗುರುಗೋವಿಂದ ಭಟ್ಟರ ಜನ್ಮಸ್ಥಳ ಕಳಸ ಗ್ರಾಮವನ್ನೂ ಬರುವ ದಿನಗಳಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಇದೇ ವೇಳೆ, ಹಿಜಾಬ್ ಕೇಸರಿ ಶಾಲು ವಿವಾದದ ಬಗ್ಗೆ ಅವರು ಮಾತನಾಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಶಾಂತಿ ನೆಲೆಸಬೇಕು. ಹೈಕೋರ್ಟ್ ಆದೇಶ ಪರಿಪೂರ್ಣವಾಗಿ ಜಾರಿ ಮಾಡಬೇಕು. ಎಲ್ಲ ಮಕ್ಕಳು ಭೇದಭಾವವಿಲ್ಲದೆ ವಿದ್ಯಾಭ್ಯಾಸ ಮಾಡಬೇಕು. ಇದು ನನ್ನ ಮೊದಲ ಕರ್ತವ್ಯ, ಆ ಕೆಲಸವನ್ನು ಮಾಡುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Karnataka Budget 2022: ಎಲ್ಲಾ ಇಲಾಖೆಗಳ ಬೇಡಿಕೆ ಗಮನಿಸಿ ಬಜೆಟ್​ ಸಿದ್ದಪಡಿಸಲಾಗುವುದು: ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ಎಲ್ಲರೂ ವರ್ತಿಸಬೇಕು; ಶಾಂತಿಯಿಂದ ಇರಲು ವಿದ್ಯಾರ್ಥಿಗಳಿಗೆ ಮನವಿ: ಸಿಎಂ ಬೊಮ್ಮಾಯಿ

Published On - 8:41 pm, Sat, 12 February 22

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ