Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾನಗಲ್ : ಮನೆ ಮಗನಂತೆ ಸಾಕಿದ್ದ ಮೂಕ ಪ್ರಾಣಿ ಹೋರಿ ಪರಾರಿ! ಕುಟುಂಬ ಹಗಲಿರುಳು ಪರಿತಪಿಸುತಿದೆ 

Hanagal buffalo missing: ಕಳೆದ ಗುರುವಾರ ಹಾನಗಲ್ ತಾಲುಕಿನ ಮಾವಕೊಪ್ಪ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಪಾಲ್ಗೊಂಡು ಮಿಂಚಿನಂತೆ ಓಡಿತ್ತು. ನಂತರ ತಪ್ಪಿಸಿಕೊಂಡು ಹೋಗಿದೆ. ಕಳೆದ ಎರಡು ದಿನಗಳಿಂದ ರಾಜೇಶ ಕುಟುಂಬದವರು, ಹೋರಿ ರೋಲೆಕ್ಸ್ ಅಭಿಮಾನಿಗಳು ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಹಗಲು ರಾತ್ರಿ ಹುಡುಕುತ್ತಿದ್ದಾರೆ.

ಹಾನಗಲ್ : ಮನೆ ಮಗನಂತೆ ಸಾಕಿದ್ದ ಮೂಕ ಪ್ರಾಣಿ ಹೋರಿ ಪರಾರಿ! ಕುಟುಂಬ ಹಗಲಿರುಳು ಪರಿತಪಿಸುತಿದೆ 
ಮನೆ ಮಗನಂತೆ ಸಾಕಿದ್ದ ಮೂಕ ಪ್ರಾಣಿ ಹೋರಿ ಪರಾರಿ!
Follow us
Digi Tech Desk
| Updated By: ಸಾಧು ಶ್ರೀನಾಥ್​

Updated on: Nov 27, 2023 | 12:30 PM

ಅವನು ಕಳೆದ ಎರಡು ವರ್ಷಗಳ ಹಿಂದೆ ಮನೆಗೆ ಬಂದಿದ್ದ, ಅವನನ್ನ ಮನೆಯ ಮಗನಂತೆ ನೊಡಿಕೊಂಡಿದ್ದರು, ಆದರೆ ಕಳೆದ ಎರಡು ದಿನಗಳ ಹಿಂದೆ ಹೋದವ ಇಂದಿಗೂ ಮರಳಿ ಮನೆಗೆ ಬಂದಿಲ್ಲ ಸಾವಿರಾರು ಜನರ ಮಧ್ಯೆ ಮಿಂಚಿನಂತೆ ಓಡುತ್ತಿದ್ದ ಶ್ವೇತ ಬಣ್ಣದ ಹೋರಿ, ಸಿಳ್ಳೆ , ಕೇಕೆ ಹಾಕುತ್ತಾ ಹುರಿದುಂಬಿಸುವ ಜನ, ಅಭಿಮಾನಿಗಳ ಪೇವರೇಟ್ ಆಗಿದ್ದ ರೋಲೆಕ್ಸ್ ಅದು. ಹೌದು ಹಾವೇರಿ ಜಿಲ್ಲೆಯ ಹಾನಗಲ್ ತಾಲುಕಿನ ಗೊಂಧಿ ಗ್ರಾಮದ ರಾಜೇಶ ನಿಂಗೊಜಿ ಎನ್ನುವ ರೈತ ತನ್ನ ಮನೆಯಲ್ಲಿಯೆ ಪುಟ್ಟ ಕರುವನ್ನು ಸಾಕಿದ್ದರು. ಮನೆ ಮಗನಂತೆ ಸಾಕಿದ್ದ ಕುಟುಂಬವು ಹೋರಿಯನ್ನು ಹಬ್ಬಕ್ಕಾಗಿ ತಯಾರಿ ಮಾಡಿದ್ದರು.

ಕಳೆದ ಎರಡು ವರ್ಷಗಳಿಂದ ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ ,ದಾವಣಗೇರೆ, ಜಿಲ್ಲೆಗಳಲ್ಲಿ ನಡೆಯುವ ದನ ಬೆದರಿಸುವ ಹಬ್ಬಗಳಲ್ಲಿ ಭಾಗವಹಿಸಿ 50 ಗ್ರಾಂ ಬಂಗಾರ, ಟ್ರಜರಿ, ಬೈಕ್ ಸೇರಿದಂತೆ ಅನೇಕ ಬಂಪರ್ ಬಹುಮಾನಗಳನ್ನು ಗೆದ್ದು ತಂದಿತ್ತು.

Also Read: ಸೊರಬದಲ್ಲಿ ಹೋರಿ ಬೆದರಿಸುವ ಸ್ಪರ್ಧೆ, ಹೋರಿಗಳ ಮಿಂಚಿನ ಓಟ, ಗಮನ ಸೆಳೆದ ತಮಿಳುನಾಡಿನ ಹೋರಿ

ಕಳೆದ ಗುರುವಾರ ಹಾನಗಲ್ ತಾಲುಕಿನ ಮಾವಕೊಪ್ಪ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಪಾಲ್ಗೊಂಡು ಮಿಂಚಿನಂತೆ ಓಡಿತ್ತು. ನಂತರ ಹೋರಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿದೆ. ಕಳೆದ ಎರಡು ದಿನಗಳಿಂದ ರಾಜೇಶ ಕುಟುಂಬದವರು, ಹೋರಿ ರೋಲೆಕ್ಸ್ ಅಭಿಮಾನಿಗಳು ಮಕರವಳ್ಳಿ , ಕೊಂಡೊಜ್ಜಿ, ಶಾಡಗುಪ್ಪಿ,ಯಲ್ಲಾಪುರ ಅರಣ್ಯ ಪ್ರದೇಶದಲ್ಲಿ ಹಗಲು ರಾತ್ರಿ ಹುಡುಕುತ್ತಿದ್ದಾರೆ. ಆದರೂ ರೊಲೆಕ್ಸ್ ಪತ್ತೆ ಆಗಿಲ್ಲ. ಮನೆಯಲ್ಲಿ ಮಗುವಿನಂತೆ ಸಾಕಿದ್ದ ರಾಜೇಶ ಅವರ ತಾಯಿ ಲಕ್ಷಿ ಅವರು ಕಳೆದ ಎರಡು ದಿನಗಳಿಂದ ಊಟ ನಿದ್ದೆ ಬಿಟ್ಟು ರೊಲೆಕ್ಸ್ ಗಾಗಿ ಕಣ್ಣಿರ ಹಾಕುತ್ತಿದ್ದಾರೆ.

ಸ್ವಂತ ಮಗನಂತೆ ಸಾಕಿದ್ದ ಮೂಕ ಪ್ರಾಣಿಗಾಗಿ ಇಡಿ ಕುಟುಂಬ ಹಗಲಿರುಳು ಪರಿತಪಿಸುತ್ತಿದೆ. ಆದಷ್ಟು ಬೇಗ ರೋಲೆಕ್ಸ್ ಮನೆಗೆ ಮರಳಲಿ, ಆ ಕುಟುಂಬದಲ್ಲಿ ಮತ್ತೆ ಸಂತಸ ಮೂಡಲಿ ಅನ್ನುವದು ಎಲ್ಲರ ಆಶಯವಾಗಿದೆ.

ವರದಿ: ರವಿ ಹೂಗಾರ, ಟಿವಿ9, ಹಾವೇರಿ

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್