ಹಾವೇರಿಯಲ್ಲಿ ಜಬರ್ದಸ್ತ್ ಬಂಡಿ ಓಟ: ಚಿರತೆಯಂತೆ ಮುನ್ನುಗ್ಗಿದ ಎತ್ತುಗಳು

|

Updated on: Mar 09, 2020 | 2:11 PM

ಹಾವೇರಿ: ಜಾತ್ರೆ ಅಂದ್ರೆ ಕೆಲವೆಡೆ ರಥೋತ್ಸವ ಜೋರಾಗಿರುತ್ತೆ. ಇನ್ನೂ ಹಲವೆಡೆ ವಿಶೇಷ ರೀತಿಯ ಹರಕೆಗಳು ಸಲ್ಲಿಕೆಯಾಗುತ್ತೆ. ಬಟ್ ಇಲ್ಲಿ ಮಾತ್ರ ಜಾತ್ರೆ ಅಂದ್ರೆ ರೈತರಿಗೆ ಖುಷಿಯೋ ಖುಷಿ. ಯಾಕಂದ್ರೆ ಎತ್ತುಗಳನ್ನ ಅಖಾಡಕ್ಕಿಳಿಸಿ ಶಕ್ತಿಪ್ರದರ್ಶನ ಮಾಡ್ತಾರೆ. ಹೆಜ್ಜೆಯಲ್ಲಿ ಹಿಡಿತವಿತ್ತು.. ದೇಹದಲ್ಲಿ ಬಲವಿತ್ತು.. ಚಿರತೆಯಂತೆ ಮುನ್ನುಗ್ತಿದ್ದ ಎತ್ತುಗಳ ಬಿರುಸಿಗೆ ಅಖಾಡ ರಂಗೇರಿತ್ತು. ಧೂಳು ಮುಗಿಲತ್ತ ಚಿಮ್ಮಿತ್ತು.. ನೋಡೋ ಕಂಗಳು ರೋಮಾಂಚನದಲ್ಲಿ ತೇಲ್ತಿದ್ರೆ ಎತ್ತುಗಳು ಶರವೇಗದಲ್ಲಿ ಓಟ ಕಿತ್ತಿದ್ವು. ಮೈ ನವಿರೇಳಿಸೋ ಬಂಡಿ ರೇಸ್: ಹಳ್ಳಿ ಆಟದ ಖದರೇ ಹಂಗೆ. ಅದ್ರಲ್ಲೂ ಅನ್ನದಾತನ […]

ಹಾವೇರಿಯಲ್ಲಿ ಜಬರ್ದಸ್ತ್ ಬಂಡಿ ಓಟ: ಚಿರತೆಯಂತೆ ಮುನ್ನುಗ್ಗಿದ ಎತ್ತುಗಳು
Follow us on

ಹಾವೇರಿ: ಜಾತ್ರೆ ಅಂದ್ರೆ ಕೆಲವೆಡೆ ರಥೋತ್ಸವ ಜೋರಾಗಿರುತ್ತೆ. ಇನ್ನೂ ಹಲವೆಡೆ ವಿಶೇಷ ರೀತಿಯ ಹರಕೆಗಳು ಸಲ್ಲಿಕೆಯಾಗುತ್ತೆ. ಬಟ್ ಇಲ್ಲಿ ಮಾತ್ರ ಜಾತ್ರೆ ಅಂದ್ರೆ ರೈತರಿಗೆ ಖುಷಿಯೋ ಖುಷಿ. ಯಾಕಂದ್ರೆ ಎತ್ತುಗಳನ್ನ ಅಖಾಡಕ್ಕಿಳಿಸಿ ಶಕ್ತಿಪ್ರದರ್ಶನ ಮಾಡ್ತಾರೆ.

ಹೆಜ್ಜೆಯಲ್ಲಿ ಹಿಡಿತವಿತ್ತು.. ದೇಹದಲ್ಲಿ ಬಲವಿತ್ತು.. ಚಿರತೆಯಂತೆ ಮುನ್ನುಗ್ತಿದ್ದ ಎತ್ತುಗಳ ಬಿರುಸಿಗೆ ಅಖಾಡ ರಂಗೇರಿತ್ತು. ಧೂಳು ಮುಗಿಲತ್ತ ಚಿಮ್ಮಿತ್ತು.. ನೋಡೋ ಕಂಗಳು ರೋಮಾಂಚನದಲ್ಲಿ ತೇಲ್ತಿದ್ರೆ ಎತ್ತುಗಳು ಶರವೇಗದಲ್ಲಿ ಓಟ ಕಿತ್ತಿದ್ವು.

ಮೈ ನವಿರೇಳಿಸೋ ಬಂಡಿ ರೇಸ್:
ಹಳ್ಳಿ ಆಟದ ಖದರೇ ಹಂಗೆ. ಅದ್ರಲ್ಲೂ ಅನ್ನದಾತನ ಬೆನ್ನೆಲುಬು ಅಂತಾನೇ ಕರೆಸಿಕೊಳ್ಳೋ ಎತ್ತುಗಳ ಸ್ಪರ್ಧೆ ಅಂದ್ರೆ ಇನ್ನೂ ಒಂದ್ ಕೈ ಜಾಸ್ತಿನೇ ಬಿಡಿ. ಹೀಗಾಗೇ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸಾವಸಗಿ ಗ್ರಾಮದ ಕೆರೆಯಂಗಳದಲ್ಲಿ ಮೈ ನವಿರೇಳಿಸೋ ರೇಸ್ ನಡೀತು. ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಖಾಲಿ ಗಾಡಿ ಓಡಿಸೋ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಗೆ ಒಂದು ನಿಮಿಷ ಸಮಯ ನಿಗದಿ ಮಾಡಿದ್ದು, ಒಂದು ನಿಮಿಷದಲ್ಲಿ ಯಾವ ಜೋಡಿ ಎತ್ತುಗಳು ಹೆಚ್ಚಿನ ದೂರ ಓಡುತ್ತವೆಯೋ ಅವುಗಳನ್ನ ವಿಜೇತ ಎಂದು ಘೋಷಿಸಲಾಯ್ತು. ಪ್ರಥಮ ಬಹುಮಾನವಾಗಿ ಒಂದು ತೊಲೆ ಬಂಗಾರ, ದ್ವಿತೀಯ ಬಹುಮಾನವಾಗಿ ಇಪ್ಪತ್ತು ಸಾವಿರ ಹಣ, ತೃತೀಯ ಬಹುಮಾನವಾಗಿ ಹತ್ತು ಸಾವಿರ ರೂಪಾಯಿ ನೀಡಲಾಯ್ತು.

ಸೀಟಿ ಊದುತ್ತಿದ್ದಂತೆ ಎತ್ತುಗಳಮಿಂಚಿನ ಓಟ:
ಇನ್ನು ಸ್ಪರ್ಧೆಗೆ ಧಾರವಾಡ, ಹಾವೇರಿ, ಗದಗ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 50ಕ್ಕೂ ಅಧಿಕ ಜೋಡಿ ಎತ್ತುಗಳು ಪಾಲ್ಗೊಂಡಿದ್ವು. ಎತ್ತುಗಳನ್ನ ಬಂಡಿಗೆ ಕಟ್ಟಿ ಸಂಘಟಕರು ಸೀಟಿ ಊದುತ್ತಿದ್ದಂತೆ ಮಿಂಚಿನ ಓಟ ಶುರುವಾಗಿತ್ತು. ಸ್ಪರ್ಧೆಗೆ ಅಂತಾಲೆ ರೈತರು ಎತ್ತುಗಳಿಗೆ ಹಿಂಡಿ, ಹುರುಳಿ ಕಾಳು, ಜೋಳದ ನುಚ್ಚು, ಮೆಕ್ಕೆಜೋಳದ ನುಚ್ಚು ಹೀಗೆ ಪೌಷ್ಠಿಕ ಆಹಾರ ತಿನ್ನಿಸಿ ಕಟ್ಟುಮಸ್ತಾಗಿ ಬೆಳೆಸಿರ್ತಾರೆ. ಹೀಗಾಗಿ ಈ ಸ್ಪರ್ಧೆಯನ್ನ ನೋಡೋದೇ ಖುಷಿ. ಇನ್ನು ಸ್ಪರ್ಧೆ ಶುರುವಾಗ್ತಿದ್ದಂತೆ ನೋಡೋ ಜನ ಕೇಕೆ, ಸಿಳ್ಳೆ, ಚಪ್ಪಾಳೆಗಳ ಹುರಿದುಂಬಿಸ್ತಾರೆ.

ಬಂಡಿ ರೇಸ್ ಅಂದ್ರೆ ಹಳ್ಳಿಗಳಲ್ಲಿ ಇಂದಿಗೂ ತನ್ನದೇ ಆದ ಮಹತ್ವ ಹೊಂದಿದೆ. ಹಿಂಗಾಗೇ ರೈತಾಪಿಮಂದಿ ಎತ್ತುಗಳನ್ನ ಅಖಾಡಕ್ಕಿಳಿಸಿ ಖದರ್ ತೋರಿಸ್ತಾರೆ. ಅವ್ರ ಖದರ್ ನೋಡೋರಿಗೆ ಕಿಕ್ ಕೊಡೋದ್ರಲ್ಲಿ ಡೌಟೇ ಇಲ್ಲ.