ಅಂಚೆ ಲಕೋಟೆ ಮೇಲೆ ರಾರಾಜಿಸುತ್ತಿದೆ ಬ್ಯಾಡಗಿ ಮೆಣಸಿನಕಾಯಿ: ವಿಶ್ವ ಪ್ರಸಿದ್ಧ ಮೆಣಸಿನಕಾಯಿಗೆ ಮತ್ತೊಂದು ಗರಿ

ಬಣ್ಣ, ರುಚಿ ಮತ್ತು ವಾಸನೆ ಮೂಲಕ ತನ್ನದೇಯಾದ ಛಾಪು ಮೂಡಿಸಿರುವ ಬ್ಯಾಡಗಿ ಮೆಣಸಿನಕಾಯಿ ಈಗ ಭಾರತೀಯ ಅಂಚೆ ಇಲಾಖೆಯ ಲಕೋಟೆ ಮೇಲೆ ರಾರಾಜಿಸುತ್ತಿದೆ. ಅಂಚೆ ಇಲಾಖೆ ಲಕೋಟೆ ಮೇಲೆ ಬ್ಯಾಡಗಿ ಮೆಣಸಿನಕಾಯಿ ಲಕೋಟೆ ಮಾಡಿದೆ.

ಅಂಚೆ ಲಕೋಟೆ ಮೇಲೆ ರಾರಾಜಿಸುತ್ತಿದೆ ಬ್ಯಾಡಗಿ ಮೆಣಸಿನಕಾಯಿ: ವಿಶ್ವ ಪ್ರಸಿದ್ಧ ಮೆಣಸಿನಕಾಯಿಗೆ ಮತ್ತೊಂದು ಗರಿ
ಅಂಚೆ ಲಕೋಟೆ ಮೇಲೆ ರಾರಾಜಿಸುತ್ತಿದೆ ಬ್ಯಾಡಗಿ ಮೆಣಸಿನಕಾಯಿ
Follow us
| Updated By: preethi shettigar

Updated on:Sep 04, 2021 | 12:43 PM

ಹಾವೇರಿ : ಜಿಲ್ಲೆಯ ಬ್ಯಾಡಗಿ ಎಂದಾಕ್ಷಣ ಥಟ್ಟನೆ ಎಲ್ಲರಿಗೂ ನೆನಪಾಗುವುದು ಕೆಂಪು ಮೆಣಸಿನಕಾಯಿ. ಕಳೆದ ಸುಮಾರು ವರ್ಷಗಳಿಂದ ವಿಶಿಷ್ಟವಾದ ಮೆಣಸಿನಕಾಯಿ ಬೆಳೆಯನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಆಕರ್ಷಕ ಕೆಂಪು ಬಣ್ಣ ಮತ್ತು ರುಚಿಯೊಂದಿಗೆ ಈ ಮೆಣಸಿನಕಾಯಿ ತನ್ನದೇ ಯಾದ ವಿಶೇಷತೆ ಹೊಂದಿದೆ. ಜಿಲ್ಲೆಯ ಬ್ಯಾಡಗಿ, ಹಿರೇಕೆರೂರು ಸೇರಿದಂತೆ ಸುತ್ತಮುತ್ತಲಿನ ಮಣ್ಣಿನ ಗುಣ ಮತ್ತು ಹವಾಮಾನ ಹಿನ್ನೆಲೆಯಲ್ಲಿ ಮೆಣಸಿನಕಾಯಿ ತನ್ನದೇಯಾದ ರುಚಿ ಮತ್ತು ಬಣ್ಣವನ್ನು ಹೊಂದಿದೆ. ಈ ಕೆಂಪು ಮೆಣಸಿನಕಾಯಿ ತಳಿಯನ್ನು ಬ್ಯಾಡಗಿ ಮೆಣಸಿನಕಾಯಿ ಎಂದು ಕರೆಯಲಾಗುತ್ತದೆ. ಆದರೆ ಈಗ ಈ ಮೆಣಸಿನಕಾಯಿಯ ಚಿತ್ರ ಅಂಚೆ ಲಕೋಟೆ ಮೇಲೆ ರಾರಾಜಿಸಲು ಸಜ್ಜಾಗಿದೆ.

ಬ್ಯಾಡಗಿ, ಹಿರೇಕೆರೂರು ಸೇರಿದಂತೆ ಜಿಲ್ಲೆಯ ಹಲವೆಡೆ ಮೆಣಸಿನಕಾಯಿಯನ್ನು ರೈತರು ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದರು. ಆದರೆ ಈಗ ಜಿಲ್ಲೆಯ ಬ್ಯಾಡಗಿ ತಳಿಯ ಮೆಣಸಿನಕಾಯಿ ಬೆಳೆಯುವ ಪ್ರಮಾಣ ತೀರಾ ಕಡಿಮೆಯಾಗಿದೆ. ಬ್ಯಾಡಗಿ ಮೆಣಸಿನಕಾಯಿಯಲ್ಲಿ ಬ್ಯಾಡಗಿ ಕಡ್ಡಿ, ಬ್ಯಾಡಗಿ ಡಬ್ಬಿ ಹೀಗೆ ಬೇರೆ ಬೇರೆ ರೀತಿಯ ಹೆಸರಿನ ಮೆಣಸಿನಕಾಯಿಗಳಿವೆ. ಬ್ಯಾಡಗಿ ಡಬ್ಬಿ ಮೆಣಸಿನಕಾಯಿಯನ್ನು ಈಗ ಧಾರವಾಡ, ಗದಗ ಜಿಲ್ಲೆಯ ಕೆಲವೆಡೆ ರೈತರು ಬೆಳೆಯುತ್ತಾರೆ. ಇದರ ಜೊತೆಗೆ ರಾಯಚೂರು, ಬಳ್ಳಾರಿ, ಆಂಧ್ರಪ್ರದೇಶದಲ್ಲಿ ಈ ತಳಿಯ ಮೆಣಸಿನಕಾಯಿ ಬೆಳೆಯಲಾಗುತ್ತಿದೆ.

ಪ್ರಸ್ತುತ ಮೂಲ ಬ್ಯಾಡಗಿ ತಳಿಯ ಮೆಣಸಿನಕಾಯಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವಸಾನದ ಅಂಚಿನಲ್ಲಿದೆ. ಬ್ಯಾಡಗಿ ಮೆಣಸಿನಕಾಯಿ ನಂತರ ಬೇರೆ ಬೇರೆ ತಳಿಯ ಮೆಣಸಿನಕಾಯಿಗಳನ್ನು ಬೆಳೆಯಲಾಗುತ್ತಿದೆ. ಆದರೆ ಈ ತಳಿಗಳು ಬ್ಯಾಡಗಿ ಮೆಣಸಿನಕಾಯಿಯ ರುಚಿ, ಬಣ್ಣ ಮತ್ತು ವಾಸನೆ ಇರುವುದಿಲ್ಲ. ಹೀಗಾಗಿ ಬ್ಯಾಡಗಿ ಮೆಣಸಿನಕಾಯಿಯ ಮೂಲ ತಳಿಯನ್ನು ಅಭಿವೃದ್ಧಿಪಡಿಸುವಂತೆ ಇಲ್ಲಿಯ ವರ್ತಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಈವರೆಗೂ ಬ್ಯಾಡಗಿ ಮೆಣಸಿನಕಾಯಿ ಮೂಲ ತಳಿಯನ್ನು ಉಳಿಸಿ, ಬೆಳೆಸುವ‌ ಕಾರ್ಯ ನಡೆಯುತ್ತಿಲ್ಲ. ಬ್ಯಾಡಗಿ ಮೂಲ ತಳಿಯ ಮೆಣಸಿನಕಾಯಿಯನ್ನು ಉಳಿಸುವ ಕೆಲಸವಾಗಬೇಕು ಎಂದು ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಹೇಳಿದ್ದಾರೆ.

ವಿಶ್ವಪ್ರಸಿದ್ಧ ಮಾರುಕಟ್ಟೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಸುಮಾರು ವರ್ಷಗಳಿಂದ ತನ್ನದೇಯಾದ ಛಾಪು ಮೂಡಿಸಿದೆ. ಕೇವಲ ರಾಜ್ಯ ಮಾತ್ರವಲ್ಲ ಬೇರೆ ಬೇರೆ ರಾಜ್ಯಗಳು ಹಾಗೂ ಬೇರೆ ಬೇರೆ ದೇಶಗಳಲ್ಲೂ ಪ್ರಸಿದ್ಧಿ ಆಗಿದೆ. ಬ್ಯಾಡಗಿ ಅಂದರೆ ಮೆಣಸಿನಕಾಯಿ ಎಂಬ ಹೆಸರು ಗುರುತು ಹಿಡಿದು ಕರೆಯುವಷ್ಟರಮಟ್ಟಿಗೆ ಬ್ಯಾಡಗಿ ಮೆಣಸಿನಕಾಯಿ ಹೆಸರುವಾಸಿಯಾಗಿದೆ. ವಾರದ ಎರಡು ದಿನಗಳಲ್ಲಿ ಬ್ಯಾಡಗಿ ಎಪಿಎಂಸಿಯಲ್ಲಿ ಮೆಣಸಿನಕಾಯಿ ವ್ಯಾಪಾರ ನಡೆಯುತ್ತದೆ. ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಹಲವು ಭಾಗಗಳಿಂದ ರೈತರು ಮೆಣಸಿನಕಾಯಿ ಮಾರುಕಟ್ಟೆಗೆ ತರುತ್ತಾರೆ. ಬೇರೆ ಬೇರೆ ರಾಜ್ಯಗಳಿಂದ ಮೆಣಸಿನಕಾಯಿ ಖರೀದಿದಾರರು ಇಲ್ಲಿಗೆ ಬರುತ್ತಾರೆ‌. ಜೊತೆಗೆ ಇಲ್ಲಿನ ಖರೀದಿದಾರರು ರೈತರಿಂದ ಮೆಣಸಿನಕಾಯಿ ಖರೀದಿಸಿ ಬೇರೆ ಬೇರೆ ರಾಜ್ಯಗಳಿಗೆ ಕಳಿಸುತ್ತಾರೆ.

ಅಂಚೆ ಇಲಾಖೆ ಲಕೋಟೆ ಮೇಲೆ ಬ್ಯಾಡಗಿ ಮೆಣಸಿನಕಾಯಿ ಬಣ್ಣ, ರುಚಿ ಮತ್ತು ವಾಸನೆ ಮೂಲಕ ತನ್ನದೇಯಾದ ಛಾಪು ಮೂಡಿಸಿರುವ ಬ್ಯಾಡಗಿ ಮೆಣಸಿನಕಾಯಿ ಈಗ ಭಾರತೀಯ ಅಂಚೆ ಇಲಾಖೆಯ ಲಕೋಟೆ ಮೇಲೆ ರಾರಾಜಿಸುತ್ತಿದೆ. ಅಂಚೆ ಇಲಾಖೆ ಲಕೋಟೆ ಮೇಲೆ ಬ್ಯಾಡಗಿ ಮೆಣಸಿನಕಾಯಿ ಲಕೋಟೆ ಮಾಡಿದೆ. ಭಾರತೀಯ ಅಂಚೆ ಇಲಾಖೆಯ ಲಕೋಟೆಗಳು ಬೇರೆ ಬೇರೆ ಕಡೆಗಳಿಗೆ ಹರಿದಾಡುವುದರಿಂದ ಅಂಚೆ ಇಲಾಖೆಯ ಮೂಲಕ ಬ್ಯಾಡಗಿ ಮೆಣಸಿನಕಾಯಿ ಕಂಪು ಮತ್ತಷ್ಟು ಕಡೆ ಪಸರಿಸುತ್ತದೆ. ಭೌಗೋಳಿಕ ಆಧಾರದ ಮೇಲೆ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಅಂಚೆ ಇಲಾಖೆಯ ಲಕೋಟೆ ಮೇಲೆ ರಾರಾಜಿಸುತ್ತಿದೆ. ಲಕೋಟೆ ನೋಡಿದವರಿಗೆ ಥಟ್ಟನೆ ಬ್ಯಾಡಗಿ ಮೆಣಸಿನಕಾಯಿ ನೆನಪಿಗೆ ಬರುವಂತಿದೆ.

ಅಂಚೆ ಲಕೋಟೆ ಮೇಲೆ ರಾರಾಜಿಸುತ್ತಿರುವ ಕೆಂಪು ಬಣ್ಣದ ಮೆಣಸಿನಕಾಯಿ ಚಿತ್ರ ನೋಡಿದವರಿಗೆ ಬ್ಯಾಡಗಿ ಮೆಣಸಿನಕಾಯಿ ನೆನಪಾಗುವುದರಲ್ಲಿ ಸಂದೇಹವೆ ಇಲ್ಲ. ರಾಜ್ಯ ಹಾಗೂ ದೇಶ, ವಿದೇಶದಲ್ಲಿನ ಬಹುತೇಕರಿಗೆ ಬ್ಯಾಡಗಿ ಮೆಣಸಿನಕಾಯಿ ರುಚಿ ಗೊತ್ತಿದೆ. ಒಟ್ಟಿನಲ್ಲಿ ಅಂಚೆ ಲಕೋಟೆ ಮೇಲೆ ರಾರಾಜಿಸುವ ಮೂಲಕ ಬ್ಯಾಡಗಿ ಮೆಣಸಿನಕಾಯಿಯ ಹೆಸರು ಮತ್ತಷ್ಟು ಉತ್ತುಂಗಕ್ಕೆ ಏರಿದಂತಾಗಿದೆ.

ವರದಿ: ಪ್ರಭುಗೌಡ.ಎನ್.ಪಾಟೀಲ

ಇದನ್ನೂ ಓದಿ: ಕಿನ್ನಾಳ ಕಲೆಗೆ ರಾಷ್ಟ್ರಮಟ್ಟದ ಗೌರವ; ಅಂಚೆ ಕಚೇರಿಯ ಲಕೋಟೆಗಳಲ್ಲಿ ಮುದ್ರಿತವಾಗಲಿದೆ ಪಾರಂಪರಿಕ ಕಲೆ

120ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಕಾಪು ಲೈಟ್ ಹೌಸ್​​ಗೆ ಅಂಚೆ ಇಲಾಖೆಯಿಂದ ಗೌರವ

Published On - 9:56 am, Sat, 4 September 21

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ