ಸಿಎಂ ಬೊಮ್ಮಾಯಿ, ಕೃಷಿ ಸಚಿವರ ಜಿಲ್ಲೆಯಲ್ಲೇ 112 ರೈತರ ಆತ್ಮಹತ್ಯೆ: ಇನ್ನು ರಾಜ್ಯದ ಇತರೆ ರೈತರ ಗತಿಯೇನು? ದಿನೇಶ್ ಗುಂಡೂರಾವ್ ಕಿಡಿ
ಹಾವೇರಿಯಲ್ಲಿ ಕಳೆದ 10 ತಿಂಗಳಲ್ಲಿ ಬೆಳೆಹಾನಿ ಹಾಗೂ ಸಾಲಬಾಧೆಗೆ 112 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಹಾವೇರಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್(Dinesh Gundu Rao) ಟ್ವೀಟ್ ಮೂಲಕ ಬಿಜೆಪಿ(BJP) ವಿರುದ್ಧ ಕಿಡಿಕಾರಿದ್ದಾರೆ. ಹಾವೇರಿ, ಸಿಎಂ ಬಸವರಾಜ ಬೊಮ್ಮಾಯಿಯವರ(Basavaraj Bommai,) ತವರು ಜಿಲ್ಲೆ. ಅಷ್ಟೆ ಏಕೆ, ಕೃಷಿ ಸಚಿವ B.C.ಪಾಟೀಲ್ ಕೂಡ ಹಾವೇರಿಯವರೆ. ಆದ್ರೆ ಹಾವೇರಿ ಜಿಲ್ಲೆಯಲ್ಲಿ 112 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆಕ್ರೋಶ ಹೊರ ಹಾಕಿದ್ದಾರೆ.
ಹಾವೇರಿಯಲ್ಲಿ ಕಳೆದ 10 ತಿಂಗಳಲ್ಲಿ ಬೆಳೆಹಾನಿ ಹಾಗೂ ಸಾಲಬಾಧೆಗೆ 112 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸರ್ಕಾರದಿಂದ ರೈತರ ಉದ್ಧಾರ ಎಷ್ಟಾಗಿದೆ ಎಂಬುದಕ್ಕೆ ಈ ಆತ್ಮಹತ್ಯೆಗಳೇ ಸಾಕ್ಷಿ. ಇದು ಕೇವಲ ಒಂದು ಜಿಲ್ಲೆಯ ದುರಂತ ಕಥೆ. ಇನ್ನುಳಿದ ಜಿಲ್ಲೆಗಳ ಅಂಕಿ ಅಂಶ ತೆಗೆದರೆ ಬೊಮ್ಮಾಯಿ ಸರ್ಕಾರವೇ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಕೇವಲ 10 ತಿಂಗಳ ಅವಧಿಯಲ್ಲಿ ಹಾವೇರಿಯ 112 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಗಂಭೀರವಾದ ಸಂಗತಿ.
ಹಾವೇರಿ ಬೊಮ್ಮಾಯಿಯವರ ತವರು ಜಿಲ್ಲೆ. ಅಷ್ಟೆ ಏಕೆ, ಕೃಷಿ ಸಚಿವ B.C.ಪಾಟೀಲ್ ಕೂಡ ಹಾವೇರಿಯವರೆ. CM ಮತ್ತು ಕೃಷಿ ಸಚಿವರು ತಾವು ಪ್ರತಿನಿಧಿಸುವ ಜಿಲ್ಲೆಯ ರೈತರನ್ನೇ ಉದ್ಧಾರ ಮಾಡದವರು, ರಾಜ್ಯದ ರೈತರ ಉದ್ಧಾರ ಮಾಡುತ್ತಾರೆಯೇ? ಎಂದು ಟ್ವೀಟ್ ಮೂಲಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: PDF File: ಪಿಡಿಫ್ ಫೈಲ್ಗಳ ಪಾಸ್‌ವರ್ಡ್ ಮರೆತು ಹೋಗಿದ್ದರೆ ಈ ಟ್ರಿಕ್ ಮೂಲಕ ಓಪನ್ ಮಾಡಿ
2ಕೇವಲ 10 ತಿಂಗಳ ಅವಧಿಯಲ್ಲಿ ಹಾವೇರಿಯ 112 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಗಂಭೀರವಾದ ಸಂಗತಿ.
ಹಾವೇರಿ @BSBommai ಯವರ ತವರು ಜಿಲ್ಲೆ.
ಅಷ್ಟೆ ಏಕೆ, ಕೃಷಿ ಸಚಿವ @bcpatilkourava ಕೂಡ ಹಾವೇರಿಯವರೆ.
CM ಮತ್ತು ಕೃಷಿ ಸಚಿವರು ತಾವು ಪ್ರತಿನಿಧಿಸುವ ಜಿಲ್ಲೆಯ ರೈತರನ್ನೇ ಉದ್ಧಾರ ಮಾಡದವರು, ರಾಜ್ಯದ ರೈತರ ಉದ್ಧಾರ ಮಾಡುತ್ತಾರೆಯೇ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 22, 2022
ಕಬ್ಬಿಗೆ ಸೂಕ್ತ ಬೆಲೆ ನಿಗಧಿಗೆ ರೈತರ ಪ್ರತಿಭಟನೆ
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಬಾಕಿ ಹಣ ಪಾವತಿ ಹಾಗೂ ಟನ್ ಕಬ್ಬಿಗೆ ಸೂಕ್ತ ಬೆಲೆ ನಿಗಧಿಗೆ ಆಗ್ರಹಿಸಿ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನಾ ಸ್ಥಳಕ್ಕೆ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಭೇಟಿ ನೀಡಿದ್ದಾರೆ.
ಒಂದು ಟನ್ ಗೆ ನಮ್ಮ ಕಾರ್ಖಾನೆಯಿಂದ 2900ರೂ ಕೊಡುತ್ತೇವೆ. ನಮ್ಮ ಕಾರ್ಖಾನೆಯ ಡಿಸ್ಟಿಲರಿ ಘಟಕವಿಲ್ಲ. ಕರೆಂಟ್ ಉತ್ಪಾದನೆಯಿಲ್ಲ. ಯಾವುದೇ ಉಪ ಉತ್ಪನ್ನಗಳಿಲ್ಲ. ಕೇವಲ ಸಕ್ಕರೆ ಉತ್ಪಾದನೆ ಮಾತ್ರ ಇದೆ. ಎರಡು ವರ್ಷ ಕಾರ್ಖಾನೆ ಬಂದ್ ಇತ್ತು. ಆದರೂ ನಾನು 2900ರೂ ಕೊಡುತ್ತೇನೆ. ಎಲ್ಲ ರೈತರು ಯೋಗ್ಯವಾದ ಕಬ್ಬನ್ನು ನಮ್ಮ ಕಾರ್ಖಾನೆಗೆ ಸಾಗಿಸಿ. ಒಳ್ಳೆಯ ಗುಣಮಟ್ಟದ ಕಬ್ಬು ಸಾಗಿಸಿ ಸಹಕರಿಸಿ ಎಂದು ರಾಮಣ್ಣ ತಳೇವಾಡ ರೈತರಿಗೆ ಮನವಿ ಮಾಡಿದರು.
Published On - 2:29 pm, Sat, 22 October 22