ಹಾವೇರಿಯಲ್ಲೊಂದು ವಿಚಿತ್ರ ಘಟನೆ: ಗರ್ಭಿಣಿ ನಾಯಿಗೆ ರಕ್ತದಾನ ಮಾಡಿದ ಮತ್ತೊಂದು ನಾಯಿ

|

Updated on: Mar 14, 2023 | 1:56 PM

ಪ್ರತಿಯೊಬ್ಬರು ಕಡ್ಡಾಯವಾಗಿ ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಸಂದೇಶಗಳನ್ನು ನೋಡುತ್ತೇವೆ. ಇದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಅನ್ವಯವಾಗುತ್ತದೆ ಹೌದು, ಈ ಸ್ಟೋರಿ ಓದಿ.

ಹಾವೇರಿಯಲ್ಲೊಂದು ವಿಚಿತ್ರ ಘಟನೆ: ಗರ್ಭಿಣಿ ನಾಯಿಗೆ ರಕ್ತದಾನ ಮಾಡಿದ ಮತ್ತೊಂದು ನಾಯಿ
ರಕ್ತದಾನ ಮಾಡಿದ ನಾಯಿ
Follow us on

ಹಾವೇರಿ: ಒಬ್ಬ ಒಂದು ಬಾರಿ ರಕ್ತದಾನ (Blood Donate) ಮಾಡಿದರೆ 3 ಜೀವಗಳನ್ನು ಉಳಿಸಿದ ಹಾಗೆ. ಪ್ರತಿಯೊಬ್ಬರು ಕಡ್ಡಾಯವಾಗಿ ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಸಂದೇಶಗಳನ್ನು ನೋಡುತ್ತೇವೆ. ಇದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ (Animales) ಅನ್ವಯವಾಗುತ್ತದೆ ಹೌದು, ಈ ಸ್ಟೋರಿ ಓದಿ. ಹಾವೇರಿ (Haveri) ಜಿಲ್ಲೆಯ ಅಕ್ಕಿಆಲೂರು (Akkialur) ಪಟ್ಣಣದಲ್ಲಿ ಲ್ಯಾಬ್ರಡಾರ್ ಜಾತಿಗೆ ಸೇರಿದ ಗರ್ಭಿಣಿ ನಾಯಿಯ (Pregnant Dog), ಪ್ರಾಣ ಉಳಿಸಲು ಮೊತ್ತೊಂದು ನಾಯಿ ರಕ್ತದಾನ ಮಾಡಿದೆ. ಆಶ್ಚರ್ಯವಾದರು ಸತ್ಯ. ಲ್ಯಾಬ್ರಡಾರ್ ಜಾತಿಗೆ ಸೇರಿದ ಜಿಪ್ಸಿ ಎಂಬ ಹೆಸರಿನ ನಾಯಿ ಎರಡು ತಿಂಗಳ ಗರ್ಭಿಣಿ. ಇದು ಕಳೆದ 5 ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ.

ಇದನ್ನೂ ಓದಿ: ದೇಶದಲ್ಲಿ ಮಂಗಗಳ ಕಡಿತದಿಂದ ಸಾವಿಗೀಡಾದವರ ಬಗ್ಗೆ ಯಾವುದೇ ದಾಖಲೆಗಳಿಲ್ಲ: ಕೇಂದ್ರ ಸರ್ಕಾರ

ಈ ಸಂಬಂಧ ನಾಯಿ ಮಾಲಿಕ ನಿಖಿಲ್ ಹಡಲಗಿ, ಜಿಪ್ಸಿಯನ್ನು ಕರೆದುಕೊಂಡು ಪಶುವೈದ್ಯರ (Veterinary Doctor) ಬಳಿ ಹೋದರು. ಆಗ ವೈದ್ಯರು ನಾಯಿಯ ದೇಹಲ್ಲಿ ಹಿಮೋಗ್ಲೋಬಿನ್ (Hemoglobin) ಕಡಿಮೆಯಾಗಿ ಬಳಲುತ್ತಿದೆ, ಕೂಡಲೆ ರಕ್ತ ಹಾಕಬೇಕು ಎಂದು ಹೇಳಿದ್ದಾರೆ. ಆಗ ನಿಖಿಲ್​, ವೈಭವ ಪಾಟೀಲ್​ ಅವರನ್ನು ಸಂಪರ್ಕಿಸಿದರು. ಇವರು ಕೂಡ ಲ್ಯಾಬ್ರಡಾರ್ ಜಾತಿಗೆ ಸೇರಿದ ಜಿಮ್ಮಿ ಹೆಸರಿನ ಗಂಡು ನಾಯಿ ಸಾಕಿದ್ದು, ಜಿಪ್ಸಿಗೆ ರಕ್ತದಾನ ಮಾಡಲು ಒಪ್ಪಿಕೊಂಡರು. ಬಳಿಕ ವೈದ್ಯರು ಯಶಸ್ವಿಯಾಗಿ ರಕ್ತ ವರ್ಗಾವಣೆ ​ಮಾಡಿದರು. ಈಗ ಜಿಪ್ಸಿ ಆರೋಗ್ಯವಾಗಿದೆ.

ಜಿಪ್ಸಿಯು ಉಣ್ಣಿ ಜ್ವರದಿಂದ ಬಳಲುತ್ತಿದ್ದು, ಕಳೆದ 4-5 ದಿನಗಳಿಂದ ಆಹಾರ ಸೇವಿಸದೆ ನಿಶ್ಯಕ್ತವಾಗಿದೆ. “ರಕ್ತ ಪರೀಕ್ಷೆಯಲ್ಲಿ, ಆರ್‌ಬಿಸಿ, ಹಿಮೋಗ್ಲೋಬಿನ್ ಮತ್ತು ಪ್ಲೇಟ್‌ಲೆಟ್‌ಗಳ ಮಟ್ಟವು ತುಂಬಾ ಕಡಿಮೆಯಾಗಿತ್ತು. ಇದರಿಂದ ನಾಯಿಯ ಜೀವಕ್ಕೆ ಅಪಾಯವಿದೆ ಮತ್ತು ಅದನ್ನು ಉಳಿಸಲು ರಕ್ತ ವರ್ಗಾವಣೆ ಅಗತ್ಯವಾಗಿತ್ತು ಎಂದು ಅರಳೇಲೇಶ್ವರದ ಹಿರಿಯ ಪಶು ವೈದ್ಯಾಧಿಕಾರಿ ಡಾ.ಅಮಿತ್ ಪುಠಾಣಿಕರ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ